ಬಿಜೆಪಿ ಎಂಪಿ ತರುಣ್ ವಿಜಯ್ ಭೇಟಿಯಾದ ಹರೀಶ್ ರಾವತ್

ಡೆಹ್ರಾಡೂನ್, ಮೇ 21: ದಲಿತ ಮುಖಂಡರೊಂದಿಗೆ ದೇವಾಲಯ ಪ್ರವೇಶಿಸಲು ಯತ್ನಿಸಿದ್ದಕ್ಕಾಗಿ ಸವರ್ಣೀಯ ಗ್ರಾಮಸ್ಥರ ಗುಂಪಿನಿಂದ ಶುಕ್ರವಾರ ಹಲ್ಲೆಗೆ ಗುರಿಯಾಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿರುವ ಬಿಜೆಪಿಯ ರಾಜ್ಯಸಭಾ ಸದಸ್ಯ ತರುಣ್ ವಿಜಯ್ ಅವರನ್ನು ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಶನಿವಾರ ಭೇಟಿಯಾಗಿದ್ದಾರೆ.
‘‘ದೇವರು ಎಲ್ಲರಿಗೂ ಸೇರಿದ್ದು, ಯಾರೂ ದೇವಸ್ಥಾನ ಪ್ರವೇಶಿಸುವುದನ್ನು ತಡೆಯುವಂತಿಲ್ಲ್ಲ. ಈ ವಿಷಯದಲ್ಲಿ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಡಿಎಂ ಹಾಗೂ ಎಸ್‌ಎಸ್‌ಪಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಮಿಶನರ್ ನನಗೆ ಪ್ರಾಥಮಿಕ ವರದಿ ನೀಡಿದ್ದಾರೆ. ವರದಿಯ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ’’ಎಂದು ವಿಜಯ್ ಅವರನ್ನು ಭೇಟಿಯಾಗುವ ಮೊದಲು ಸುದ್ದಿಗಾರರಿಗೆ ರಾವತ್ ತಿಳಿಸಿದರು.
Next Story





