ಎಸ್. ಕೆ.ಎಸ್. ಎಸ್. ಎಫ್ ಬೊಳ್ಳೂರು, ಹಳೆಯಂಗಡಿ ಯೂನಿಟ್ ಜಂಟಿ ಆಶ್ರಯದಲ್ಲಿ ಅಜ್ಮೀರ್ ಮೌಲಿದ್, ಅನುಸ್ಮರಣಾ ಕಾರ್ಯಕ್ರಮ

ಹಳೆಯಂಗಡಿ, ಮೇ 21: ಎಸ್. ಕೆ.ಎಸ್. ಎಸ್. ಎಫ್ ಬೊಳ್ಳೂರು ಹಾಗೂ ಹಳೆಯಂಗಡಿ ಯೂನಿಟ್ ಜಂಟಿ ಆಶ್ರಯದಲ್ಲಿ ಅಜ್ಮೀರ್ ಮೌಲಿದ್ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮ ಗುರುವಾರ ಶಂಸುಲ್ ಉಲಮಾ ಮೆಮೋರಿಯಲ್ ಸೆಂಟರ್ ಬೊಳ್ಳೂರು ಇದರ ಸಭಾಂಗಣ ದಲ್ಲಿ ನಡೆಯಿತು.
ಕಾರ್ಯಕ್ರಮ್ಮದ ಅಧ್ಯಕ್ಷತೆಯನ್ನು ಎಸ್. ಕೆ.ಎಸ್. ಎಸ್. ಎಫ್ ನ ಅದ್ಯಕ್ಷ ಹನೀಫ್ ಐ.ಎ.ಕೆ ವಹಿಸಿದ್ದರು, ಉದ್ಘಾಟನೆ ಶೈಖುನಾ ಬೊಳ್ಳೂರು ಉಸ್ತಾದ್ ನೆರವೆರಿಸಿದರು, ಎಸ್. ಕೆ.ಎಸ್. ಎಸ್. ಎಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅದ್ಯಕ್ಷ ಇಸ್ಹಾಕ್ ಫೈಝಿ ಕೊಲ್ನಾಡ್ ಇವರು ಪ್ರಾಸ್ತಾವಿಕ ವಾಗಿ ಮಾತನಾಡಿದರು, ಮಂಗಳೂರು ಕೇಂದ್ರ ಜುಮಾ ಮಸೀದಿಯ ಖತೀಬ್ ಸ್ವದಖತುಲ್ಲಾಹ್ ಫೈಝಿ ಮುಖ್ಯ ಪ್ರಭಾಷಣ ಗೈದರು.
ಈ ಸಂದರ್ಭ ಎಸ್. ಕೆ.ಎಸ್. ಎಸ್. ಎಫ್ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಶರೀಫ್ ಅರ್ಶದಿ, ಬೊಳ್ಳೂರು ಮಸೀದಿ ಅದ್ಯಕ್ಷ ಹಾಜಿ A.K ಜಿಲಾನಿ, ಕಾರ್ಯದರ್ಶಿ ಹಾಜಿ I.A.K. ಅಬ್ದುಲ್ ಕಾದರ್, ಉಪಾದ್ಯಕ್ಷ ರಾದ M. ಅಬ್ದುಲ್ ಕಾದರ್, ಶಂಸುಲ್ ಉಲಮಾ ಸೆಂಟರ್ ಅದ್ಯಕ್ಷ ಅಬ್ದುಲ್ಲಾ ಮುಸ್ಲಿಯಾರ್, SKSSF ಬೊಳ್ಳೂರು ಯೂನಿಟ್ ನ ಅಧ್ಯಕ್ಷ ಪರ್ವೇಝ್ ಕೊಪ್ಪಲ ಹಾಗು ಮತ್ತಿತರರು ಉಪಸ್ಥಿತರಿದ್ದರು.
ಜಿ.ಎಮ್ ದಾರಿಮಿ ಅಂಕೊಲ ಅತಿಥಿಗಳನ್ನು ಸ್ವಾಗತಿಸಿದರು, ಕಲಂದರ್ ಆಶಿಕ್ ವಂದಿಸಿದರು.







