ಸಿಬಿಎಸ್‌ಇ-12ನೆ ತರಗತಿಯ ಫಲಿತಾಂಶ ಪ್ರಕಟ: ಬಾಲಕಿಯರೇ ಮೇಲುಗೈ

ಸುಕ್ರಿತಿ ಗುಪ್ತಾಗೆ ಮೊದಲ ಸ್ಥಾನ
ಹೊಸದಿಲ್ಲಿ, ಮೇ 21: ಸಿಬಿಎಸ್‌ಇ ನಡೆಸುವ 12ನೆ ತರಗತಿಯ ಫಲಿತಾಂಶ ಶನಿವಾರ ಇಲ್ಲಿ ಪ್ರಕಟಿಸಲಾಗಿದ್ದು, ಶೇ. 88.58ರಷ್ಟು ಫಲಿತಾಂಶ ದಾಖಲಿಸಿರುವ ಬಾಲಕಿಯರು ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ
.ಬಾಲಕರು ಶೇ.78.85ರಷ್ಟು ಫಲಿತಾಂಶ ಪಡೆದಿದ್ದಾರೆ.
ದಿಲ್ಲಿಯ ಮೊಂಟ್‌ಫೋರ್ಟ್ ಶಾಲೆಯ ಸುಕ್ರಿತಿ ಗುಪ್ತಾ 500ರಲ್ಲಿ 497 ಅಂಕ ಗಳಿಸುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. ಬಾಲಕಿಯರು ಮೊದಲ ಮೂರು ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ.
ವಲಯವಾರು ಫಲಿತಾಂಶದಲ್ಲಿ ದಕ್ಷಿಣ ಭಾರತ ಇತರರಿಗಿಂತ ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. ತಿರುವನಂತಪುರ ವಲಯ ಶೇ.97.61 ಫಲಿತಾಂಶ ಪಡೆದು ನಂ.1 ಸ್ಥಾನ ಪಡೆದಿದೆ. ಶೇ.92.63 ಫಲಿತಾಂಶ ಪಡೆದಿರುವ ಚೆನ್ನೈ ಎರಡನೆ ಸ್ಥಾನ ಪಡೆದಿದೆ. ಈ ವರ್ಷ ಒಟ್ಟಾರೆ ಶೇ.83.05 ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ ಶೇ. 82 ಫಲಿತಾಂಶ ದಾಖಲಾಗಿತ್ತು.
Next Story





