ಶ್... ಗದ್ದಲ ಮಾಡಬೇಡಿ, ನಿಮ್ಮ ಮನೆ ಹಿತ್ತಲಲ್ಲಿರುವ ಆ ಮರಕ್ಕೆ ಗಟ್ಟಿ ನಿದ್ದೆ !

ರಾತ್ರಿ ಸಮಯದಲ್ಲಿ ಗಿಡಗಳು ಅಥವಾ ಮರಗಳಿಂದ ಹೂಗಳನ್ನು ಕೀಳಬಾರದು! ಏಕೆಂದರೆ ಆ ಮರ-ಗಿಡಗಳು ನಿದ್ದೆ ಮಾಡುತ್ತಿರಬಹುದು ಎಂದು ಹೊಸ ಸಂಶೋಧನೆಯೊಂದು ಹೇಳೀದೆ. ಹಗಲಿನ ವೇಳೆ ಮತ್ತು ರಾತ್ರಿಯ ವೇಳೆ ಸಸ್ಯಗಳ ರಚನೆಯ ಬಗ್ಗೆ ಅಧ್ಯಯನ ಮಾಡಿದ ಸಂಶೋಧಕರು ಈ ವಿಷಯವನ್ನು ಹೇಳಿದ್ದಾರೆ.
ಬಹಳಷ್ಟು ಜೀವವಿರುವ ಜೀವಿಗಳು ಹಗಲು ಮತ್ತು ರಾತ್ರಿಯ ಸರಪಣಿಗೆ ತಮ್ಮ ಜೀವನವನ್ನು ಹೊಂದಿಸಿಕೊಂಡಿರುತ್ತವೆ. ಸಸ್ಯಗಳೂ ಇದಕ್ಕೆ ಹೊರತೇನಲ್ಲ. ಬೆಳಗಿನ ಜಾವದಲ್ಲಿ ಹೂಗಳು ತೆರೆದುಕೊಳ್ಳುತ್ತವೆ. ಕೆಲವು ಮರಗಳ ಎಲೆಗಳು ರಾತ್ರಿ ಸಮಯದಲ್ಲಿ ಮುಚ್ಚಿಕೊಂಡಿರುತ್ತವೆ. ಸಂಶೋಧಕರು ಸಸ್ಯಗಳ ಹಗಲು ಮತ್ತು ರಾತ್ರಿಯ ಸರಪಣಿಯನ್ನು ಬಹಳ ಧೀರ್ಘ ಸಮಯದಿಂದ ಅಧ್ಯಯನ ಮಾಡುತ್ತಿದ್ದಾರೆ. ಮರಗಳು ರಾತ್ರಿ ನಿದ್ದೆ ಮಾಡುತ್ತವೆಯೇ ಎನ್ನುವುದು ಅವರ ಅಧ್ಯಯನದ ಉದ್ದೇಶವಾಗಿತ್ತು. ಆಸ್ಟ್ರಿಯ, ಫಿನ್ಲಾಂಡ್ ಮತ್ತು ಹಂಗೇರಿಯ ಸಂಶೋಧಕರ ತಂಡವು ಪೂರ್ಣವಾಗಿ ಬೆಳೆದ ಮರಗಳು ಲೇಸರ್ ಸ್ಕಾನರುಗಳನ್ನು ಚಲನೆಗಾಗಿ ಬಳಸುವುದನ್ನು ಕಂಡುಕೊಂಡಿದೆ. ನಮ್ಮ ಫಲಿತಾಂಶಗಳು ಹೇಳಿರುವ ಪ್ರಕಾರ ಇಡೀ ಮರ ರಾತ್ರಿ ನಿದ್ದೆ ಮಾಡುತ್ತದೆ. ಎಲೆಗಳು ಮತ್ತು ಕೊಂಬೆಗಳ ಸ್ಥಿತಿಯನ್ನು ನೋಡಿ ಇದನ್ನು ಅರ್ಥಮಾಡಿಕೊಳ್ಳಬಹುದು ಎಂದು ಫಿನ್ಲಾಂಡ್ ಜಿಯೋಸ್ಪಾಷಿಯಲ್ ಸಂಶೋಧನಾ ಸಂಸ್ಥೆಯ ಅಧ್ಯಯನಕಾರ ಎಟು ಪುಟೊನೆನ್ ಹೇಳಿದ್ದಾರೆ.
ಆದರೆ ಬದಲಾವಣೆ ಹೆಚ್ಚೇನು ದೊಡ್ಡದಾಗಿರುವುದಿಲ್ಲ. ಆದರೆ ಅವು ವ್ಯವಸ್ಥಿತವಾಗಿ ಮತ್ತು ಕರಾರುವಕ್ಕಾಗಿದೆ ಎಂದು ಪುಟೊನೆನ್ ಹೇಳಿದ್ದಾರೆ. ಎರಡು ಭಿನ್ನ ಮರಗಳ ಮೇಲೆ ಎರಡು ಬಾರಿ ಈ ಪ್ರಯೋಗ ನಡೆಸಲಾಗಿದೆ. ಮೊದಲ ಮರವು ಫಿನ್ಲಾಂಡಲ್ಲಿದ್ದರೆ, ಮತ್ತೊಂದು ಮರವನ್ನು ಆಸ್ಟ್ರಿಯದಲ್ಲಿ ಆರಿಸಿಕೊಳ್ಳಲಾಗಿದೆ. ಎರಡೂ ಪರೀಕ್ಷೆಗಳನ್ನು ಶಾಂತ ಪರಿಸರದಲ್ಲಿ, ಗಾಳಿ ಅಥವಾ ತಂಪು ಇಲ್ಲದಾಗ ಮಾಡಲಾಗಿದೆ. ಎಲೆಗಳು ಮತ್ತು ಕೊಂಬೆಗಳು ನಿಧಾನವಾಗಿ ನಿದ್ದೆಗೆ ಜಾರುವುದು ಕಂಡು ಬಂದಿದೆ. ಸೂರ್ಯನ ಕಿರಣಗಳು ಬೀಳುವುದಕ್ಕಿಂತ ಕೆಲವು ಗಂಟೆಗಳ ಮೊದಲು ಮರಗಳು ಅತೀ ಸಣ್ಣ ಪೊಸಿಷನಿಗೆ ಬಂದಿರುವುದು ಕಂಡಿದೆ. ಈ ಬದಲಾವಣೆಯು 5 ಮೀಟರಿನ ಮರಗಳಿಗೆ ಕೇವಲ 10 ಸೆಂಟಿಮೀಟರುಗಳಷ್ಟೇ ಕಂಡು ಬಂದಿದೆ. ಮರಗಳು ಸೂರ್ಯನಿಂದಾಗಿ ಎಚ್ಚೆತ್ತುಕೊಳ್ಳುತ್ತವೆಯೇ ಅಥವಾ ಆಂತರಿಕ ಲಯದಿಂದಲೇ ಎನ್ನುವುದು ಇನ್ನೂ ತಿಳಿದಿಲ್ಲ.
ಕೃಪೆ: www.news18.com







