ಸಜಿಪಮುನ್ನೂರು: ಅಪ್ರಾಪ್ತೆಯ ಅತ್ಯಾಚಾರಕ್ಕೆ ಯತ್ನ; ದೂರು
ಬಂಟ್ವಾಳ, ಮೇ 21: ತಾಲೂಕಿನ ಸಜಿಪಮುನ್ನೂರು ಗ್ರಾಮದ ಮರ್ತಾಜೆ ಎಂಬಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ 11ರ ಹರೆಯದ ಬಾಲಕಿಯನ್ನು ಸ್ಥಳೀಯ ನಿವಾಸಿ ಕಿಶೋರ್ ಎಂಬಾತ ಕೈ ಹಿಡಿದು ಎಳೆದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಲ್ಲಿನ ನಿವಾಸಿ, 11ರ ಹರೆಯದ ಬಾಲಕಿಯು ಇಲ್ಲಿಗೆ ಸಮೀಪದ ಅಜ್ಜಿ ಮನೆಗೆಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿ ಕಿಶೋರ್ ಅತ್ಯಾಚಾರಕ್ಕೆ ಯತ್ನಿಸಿದಾಗ ಬಾಲಕಿ ಬೊಬ್ಬೆ ಹಾಕಿದ್ದಾಳೆ. ತಕ್ಷಣವೇ ಆರೋಪಿ ಅಲ್ಲಿಂದ ಓಡಿ ಹೋಗಿ ತಪ್ಪಿಸಿಕೊಂಡಿದ್ದು, ಕೂಡಲೇ ಆರೋಪಿಯನ್ನು ಬಂಧಿಸುವಂತೆ ಬಾಲಕಿ ಹೆತ್ತವರು ದೂರಿನಲ್ಲಿ ಆಗ್ರಹಿಸಿದ್ದಾರೆ.
Next Story





