Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬಾಟಲಿ ನೀರು ಎಷ್ಟು ಸುರಕ್ಷಿತ.....?

ಬಾಟಲಿ ನೀರು ಎಷ್ಟು ಸುರಕ್ಷಿತ.....?

ಇಸ್ಮತ್ ಫಜೀರ್ಇಸ್ಮತ್ ಫಜೀರ್21 May 2016 10:50 PM IST
share
ಬಾಟಲಿ ನೀರು ಎಷ್ಟು ಸುರಕ್ಷಿತ.....?

ಬಾಲಿವುಡ್ ನಟಿ ತಬು ಬೇಡಿಕೆಯಲ್ಲಿದ್ದ ಕಾಲದಲ್ಲಿ (ಸುಮಾರು ಹದಿನೈದು ವರ್ಷಗಳಿಗೂ ಹಿಂದಿನ ಮಾತು) ಸಿನೆಮಾ ಪತ್ರಕರ್ತರೊಬ್ಬರಿಗೆ ಸಂದರ್ಶನ ನೀಡುತ್ತಾ ‘‘ನಾನು ಸ್ನಾನ ಮಾಡುವುದೂ ಮಿನರಲ್ ವಾಟರ್‌ನಲ್ಲಿ’’ ಎಂದಿದ್ದನ್ನು ಪತ್ರಿಕೆಯೊಂದರಲ್ಲಿ ಓದಿದ ನೆನಪು. ಆ ಕಾಲದಲ್ಲಿ ಅದು ಶ್ರೀಮಂತಿಕೆಯ ‘ಅಹಂ’ನ ಮಾತಾಗಿತ್ತು. ಸುಮಾರು ಆರೇಳು ವರ್ಷಗಳ ಹಿಂದಿನವರೆಗೂ ಕೈಯಲ್ಲಿ ಮಿನರಲ್ ವಾಟರ್ ಬಾಟಲ್ ಹಿಡಿದುಕೊಂಡು ತಿರುಗಾಡುವುದು ನಮ್ಮ ಮಂಗಳೂರಿನಲ್ಲಂತೂ ಸ್ವಲ್ಪ ಮಟ್ಟಿಗೆ ಹೈ ೈ ಜೀವನಶೈಲಿಯ ಸಂಕೇತವಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಇಂದು ಕೂಲಿ ಕಾರ್ಮಿಕನೂ ನಗರ ಪ್ರದೇಶಕ್ಕೆ ಹೋಗುವಾಗ ಒಂದೋ ಮನೆಯಿಂದಲೇ ಬಾಟಲಿಯಲ್ಲಿ ನೀರು ಕಟ್ಟಿಕೊಂಡು ಹೋಗಬೇಕು ಅಥವಾ ದುಡ್ಡು ಕೊಟ್ಟು ಬಾಟಲಿ ನೀರು ಖರೀದಿಸಬೇಕು.

ಈ ಕಾಲಕ್ಕೆ ಅದು ಅನಿವಾರ್ಯವೇ ಆಗಿ ಬಿಟ್ಟಿದೆ. ಇಂದು ಕೆಲವು ವಿದ್ಯಾವಂತ ಜನರಂತೂ ಮನೆಯಿಂದ ಹೊರಗಿರುವಾಗ ಬಾಟಲಿ ನೀರಿನ ಹೊರತಾದ ನೀರನ್ನು ಮುಟ್ಟುವುದೂ ಇಲ್ಲ. ಇತ್ತೀಚೆಗೆ ನೀರಿನ ವ್ಯಾಪಾರೀಕರಣ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಕೆಲವು ಹೊಟೇಲ್‌ಗಳಲ್ಲಿ ಊಟ ಉಪಾಹಾರ ಸೇವಿಸ ಹೋದವರಿಗೆ ಹಿಂದಿನಂತೆ ಟೇಬಲ್ ಮೇಲೆ ನೀರು ತಂದಿಡಲಾಗುವುದಿಲ್ಲ. ನೀರು ಬೇಕೆಂದು ಕೇಳಿದರೆ ಒಂದು ಲೀಟರೋ, ಅರ್ಧ ಲೀಟರೋ ಎಂದು ಕೇಳಿ ನೀರಿನ ಬಾಟಲಿ ತಂದುಕೊಡುತ್ತಾರೆ. ಐಶಾರಾಮಿ ಹೋಟೆಲ್‌ಗಳಲ್ಲಂತೂ ಇದು ಸಾಮಾನ್ಯ. ಇತ್ತೀಚೆಗೆ ನನಗೆ ಕಾಸರಗೋಡಿನ ಬಳಿಯ ಪುಟ್ಟ ಕ್ಯಾಂಟೀನೊಂದರಲ್ಲಿ ಇಂತಹ ಅನುಭವ ಆಗಿದೆ. ರೈಲ್ವೆ ಸ್ಟೇಷನ್, ಬಸ್‌ಸ್ಟ್ಯಾಂಡ್‌ಗಳಲ್ಲಿರುವ ಎಲ್ಲ ಗೂಡಂಗಡಿಗಳಲ್ಲೂ ಬಾಟಲಿ ನೀರು ಲಭ್ಯವಿರುತ್ತವೆ. ನಗರ ಅರೆನಗರ ಕುಗ್ರಾಮವಲ್ಲದ ಹಳ್ಳಿಗಳ ಹೆಚ್ಚಿನೆಲ್ಲಾ ಅಂಗಡಿಗಳಲ್ಲಿ ಬಾಟಲಿ ನೀರು ಲಭ್ಯ. ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಂತೂ ಬಾಟಲಿ ನೀರೇ ರಾರಾಜಿಸುತ್ತಿರುತ್ತವೆ. ಇದನ್ನು ಈ ಕಾಲದಲ್ಲಿ ಶ್ರೀಮಂತಿಕೆಯಂತಲೋ, ಹೈ ೈ ಜೀವನ ಶೈಲಿಯಂತಲೋ ಅನ್ನುವಂತಿಲ್ಲ ಅಷ್ಟರ ಮಟ್ಟಿಗೆ ಇದು ಅನಿವಾರ್ಯವಾಗಿಬಿಟ್ಟಿದೆ.

ಹೀಗೆಲ್ಲ ನಾವು ದುಡ್ಡು ಕೊಟ್ಟು ಖರೀದಿಸುವ ನೀರು ಎಷ್ಟರ ಮಟ್ಟಿಗೆ ಶುದ್ಧ ಮತ್ತು ಸುರಕ್ಷಿತ......? ಭಾರತದ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಬಾಟಲಿ ನೀರುಗಳಲ್ಲಿ ಶೇ.40 ತೀರಾ ಅಸುರಕ್ಷಿತ ಎಂದು ಹಲವು ಅಧ್ಯಯನಗಳು ಬಹಿರಂಗಪಡಿಸಿವೆ. ಉಳಿದ ಶೇ. 60 ಬಾಟಲಿ ನೀರುಗಳಲ್ಲಿ ಅರ್ಧದಷ್ಟು ನೀರನ್ನು ಕುಡಿಯುವುದಕ್ಕೂ ಮುನ್ಸಿಪಾಲಿಟಿ ನಳ್ಳಿಗಳ ನೀರನ್ನು ಕುಡಿಯುವುದಕ್ಕೂ ವ್ಯತ್ಯಾಸವೇನಿಲ್ಲ. Ethnic health court ಎಂಬ ಖಾಸಗಿ ಸಂಸ್ಥೆಯೊಂದರ ಅಧ್ಯಯನದ ಪ್ರಕಾರ ಭಾರತದಲ್ಲಿ ವಾರ್ಷಿಕ 50 ಕೋಟಿ ಮಿನರಲ್ ವಾಟರ್ ಬಾಟಲ್‌ಗಳು ಮಾರಾಟವಾಗುತ್ತವೆ. ಎಲ್ಲಾ ಮಿನರಲ್ ವಾಟರ್ ಬಾಟಲ್‌ಗಳ ಹೊರಮೈಯಲ್ಲಿ Crush the bottle after drink ಎಂಬ ಸೂಚನೆಯನ್ನು ಬರೆದಿರುತ್ತದೆ. ಬಾಟಲಿಗಳು ಮರುಬಳಕೆಯಾಗಬಾರದು ಎಂಬ ಕಾರಣಕ್ಕಾಗಿ ಈ ಸೂಚನೆಯನ್ನು ಬರೆಯಲಾಗುತ್ತದೆ. ಆದರೆ ಶೇ.40 ಬಾಟಲಿಗಳು ಮರುಬಳಕೆಯಾಗುತ್ತವೆ ಎಂಬ ಸತ್ಯವನ್ನುETHNIC HEALTH COURT
ಬಹಿರಂಗಪಡಿಸಿದೆ. ಮಾಲಿನ್ಯ ರಹಿತ, ಶುದ್ಧ ಮತ್ತು ನೀರಿನಿಂದ ಹರಡುವ ಕಾಯಿಲೆಗಳ ಭಯವಿಲ್ಲ ಎಂಬ ಕಾರಣಕ್ಕಾಗಿಯೇ ಹೆಚ್ಚಿನವರು ಮಿನರಲ್ ವಾಟರನ್ನು ಆಶ್ರಯಿಸುತ್ತಾರೆ. ಆದರೆ ಅನೇಕ ನೀರಿನ ದಂಧೆಕೋರರು ರಸ್ತೆ ಬದಿಯಲ್ಲಿ ಎಸೆಯಲ್ಪಟ್ಟ ಬಾಟಲಿಗಳನ್ನು ಸಂಗ್ರಹಿಸಿ ಅದನ್ನು ಮರುಬಳಕೆ ಮಾಡುತ್ತಾರೆ.

ಅದಕ್ಕೆ ಯಾವುದಾದರೊಂದು ವಿಳಾಸವೇ ಇಲ್ಲದ ಲೇಬಲ್ ಹಚ್ಚಿ ಅಥವಾ ವಿಳಾಸವಿದ್ದರೂ ಅಸ್ತಿತ್ವವೇ ಇಲ್ಲದ ಕಂಪೆನಿಯ ಹೆಸರು ಹಾಕಿ ಮಾರುಕಟ್ಟೆಗೆ ಬಿಡುತ್ತಾರೆ. ಕೆಲವರಂತೂ ಇನ್ನಷ್ಟು ಮುಂದೆ ಹೋಗಿ ಬಹುರಾಷ್ಟ್ರೀಯ ಕಂಪೆನಿಗಳ ಹೆಸರಿನ ಲೇಬಲನ್ನೇ ಹಚ್ಚಿ ಬಿಡುತ್ತಾರೆ. ಸಾಮಾನ್ಯವಾಗಿ ನೀರಿನ ಬಾಟಲಿಗಳಿಗೆ ಬಳಸುವ ಪ್ಲಾಸ್ಟಿಕ್ ತೆಳುವಾಗಿರುವುದರಿಂದ plastic recycling  ಉದ್ಯಮದಲ್ಲಿ ಅವುಗಳಿಗೆ ಅಂತಹ ಬೇಡಿಕೆಯೇನಿಲ್ಲ. ಆದರೆ ಗುಜರಿ ಮಾರುಕಟ್ಟೆಗಳಲ್ಲಿ ವಿಶೇಷವಾದ ಬೇಡಿಕೆಯಿದೆ. ಚಿಂದಿ ಆಯುವ ಮಕ್ಕಳಿಂದ ಮತ್ತು ಮಹಿಳೆಯರಿಂದ ನೀರಿನ ಬಾಟಲಿಗಳನ್ನು ಖರೀದಿಸುವ ವ್ಯಾಪಾರಿಗಳು ಅದಕ್ಕೆ ಬೆಲೆಯನ್ನೂ ನೀಡುತ್ತಾರೆ. ತೂತು ಬಿದ್ದ ಅಥವಾ ಹರಿದ ಬಾಟಲಿಗಳ ಹೊರತಾಗಿ ನಜ್ಜುಗುಜ್ಜಾದ ಬಾಟಲಿಗಳಿಗೂ ಗುಜರಿ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಕೇವಲ  plastic recycling  ಗೆ ಹೋಗುವುದಾದರೆ ತೂತು ಬಿದ್ದರೇನು.....? ಬಾಟಲಿ ಹರಿದರೇನು.....? ನೀರಿನ ದಂಧೆಯಲ್ಲಿ ಬಾಟಲಿ 
Recycleಮಾಡುವ ಪ್ರಮೇಯವೇ ಬರುವುದಿಲ್ಲ. ಕ್ರಶ್ ಮಾಡಿ ಎಸೆದ ಬಾಟಲಿ ಹರಿದಿಲ್ಲವಾದರೆ ಅದರ ನಜ್ಜುಗುಜ್ಜನ್ನು ನಾಜೂಕಾಗಿ ಸರಿಪಡಿಸಿ ಅದಕ್ಕೆ ಲೇಬಲ್ ಹಚ್ಚಿ ಅದಕ್ಕೆ ನಳ್ಳಿ ನೀರನ್ನೇ ತುಂಬಿಸಲಾಗುತ್ತದೆ. ಇನ್ನು ಕೆಲವೆಡೆ ಮಲಿನ ನೀರನ್ನು ದೊಡ್ಡ ತೊಟ್ಟಿಗಳಲ್ಲಿ ತುಂಬಿಸಿ ಅದಕ್ಕೆ ನೀರು ಶುದ್ಧೀಕರಿಸುವ ಪೌಡರನ್ನೋ, ದ್ರಾವಣವನ್ನೋ ಹಾಕಲಾಗುತ್ತದೆ. ಆಗ ಮಲಿನ ನೀರಿನ ಕಲ್ಮಶಗಳು ತೊಟ್ಟಿಯ ತಳಭಾಗದಲ್ಲಿ ಸೇರುತ್ತವೆ. ತೊಟ್ಟಿಯ ಮೇಲ್ಭಾಗದ ನೀರಿಗೆ ಸಹಜವಾಗಿಯೇ ಶುದ್ಧ ನೀರಿನ ಬಣ್ಣ ಮಾತ್ರ ಬರುತ್ತದೆ. ನೋಡುವ ಕಣ್ಣುಗಳು ಅದರ ಬಣ್ಣದಿಂದ ಮಾತ್ರ ಅದರ ಶುದ್ಧತೆ ಅಳೆಯಲು ಸಾಧ್ಯ.

ಲ್ಯಾಬೊರೇಟರಿಗಳಿಗೆ ಕಳುಹಿಸಿದಾಗ ಮಾತ್ರ ಅದರ ಅಸಲಿಯತ್ತು ಅರಿಯಬಹುದು. ಈ ರೀತಿಯ ಬಾಟಲಿ ನೀರಿನ ಸೇವನೆಯಿಂದ ನೀರಿನಿಂದ ಹರಡುವ ಕಾಯಿಲೆಗಳಾದ ಭೇದಿ, ಟೈಾಯಿಡ್ ಮತ್ತು ಅತ್ಯಂತ ಅಪಾಯಕಾರಿ ಇಲಿಜ್ವರದಂತಹ ಕಾಯಿಲೆಗಳು ಭಾದಿಸುವ ಸಾಧ್ಯತೆ ನಿಚ್ಚಳ. ಕೆಲವೊಂದು ನೀರಿನ ಬಾಟಲಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರ ಅಸಲಿಯತ್ತು ಸಾಮಾನ್ಯ ಕಣ್ಣಿಗೂ ಕಾಣುತ್ತದೆ. ಬಾಟಲಿಗಳ ಹೊರಮೈಯಲ್ಲಿ ಅಲ್ಪಸ್ವಲ್ಪ ನಜ್ಜುಗುಜ್ಜಿರುತ್ತವೆ. ಬಾಟಲಿಗಳ ಮರುಬಳಕೆ ಮಾಡಿ ಮಿನರಲ್ ವಾಟರ್ ಹೆಸರಿನಲ್ಲಿ ಕಲುಷಿತ ನೀರನ್ನು ನಮಗೆ ಕುಡಿಸದಂತೆ ಮಾಡಲು ಸರಳ ಪರಿಹಾರೋಪಾಯವೊಂದಿದೆ. ನೀರನ್ನು ಬಳಸಿದ ಬಳಿಕ ಖಾಲಿ ಬಾಟಲಿಗೆ ಅದರ ಮುಚ್ಚಳವನ್ನು ಸ್ವಲ್ಪಅದುಮಿ ಬಾಟಲಿಯ ಒಳಗೆ ತೂರಿಸಬೇಕು ಅಥವಾ ಬಾಟಲಿಯ ಬಾಯಿಗಿಂತ ತುಸು ದೊಡ್ಡದಾದ ಕಲ್ಲೊಂದನ್ನು ಬಾಟಲಿಯೊಳಗೆ ತೂರಿಸಿಬಿಡಬೇಕು. ಹೀಗೆ ಮಾಡುವುದರಿಂದ ಬಾಟಲಿಯನ್ನು ಹರಿಯದೇ ಮುಚ್ಚಳವನ್ನು ಹೊರತೆಗೆಯುವುದು ಅಷ್ಟು ಸುಲಭವಲ್ಲ. ಇಂತಹ ಪ್ರಯೋಗಗಳಿಂದ ಸ್ವಲ್ಪ ಮಟ್ಟಿಗೆ ಮಲಿನ ನೀರಿನ ದಂಧೆಗೆ ಹಿನ್ನಡೆ ಕೊಡಬಹುದು. ಆರೋಗ್ಯ ಇಲಾಖೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರತಿಯೊಂದು ಬ್ರ್ಯಾಂಡ್‌ನ ಬಾಟಲಿ ನೀರಿನ ಮೇಲೆ ಹದ್ದಿನ ಕಣ್ಣಿಡಬೇಕಾದುದು ಜನಾರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಅತೀ ಅಗತ್ಯ.
ಆಧಾರ:ETHNIC HEALTH COURT

share
ಇಸ್ಮತ್ ಫಜೀರ್
ಇಸ್ಮತ್ ಫಜೀರ್
Next Story
X