Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಾಲ ಕೂಡಿ ಬಂದಿದೆ: ಬ್ಯಾಂಕುಗಳ...

ಕಾಲ ಕೂಡಿ ಬಂದಿದೆ: ಬ್ಯಾಂಕುಗಳ ವಿಲೀನಕ್ಕೆ

ರಮಾನಂದ ಶರ್ಮಾ, ಬೆಂಗಳೂರುರಮಾನಂದ ಶರ್ಮಾ, ಬೆಂಗಳೂರು21 May 2016 10:52 PM IST
share
ಕಾಲ ಕೂಡಿ ಬಂದಿದೆ: ಬ್ಯಾಂಕುಗಳ ವಿಲೀನಕ್ಕೆ

ಎರಡು ದಶಕಗಳಿಂದ ಸದಾ ಸುದ್ದಿ ಮಾಡುತ್ತಿದ್ದ ‘ಬ್ಯಾಂಕುಗಳ ವಿಲೀನ’ಕ್ಕೆ ಕಾಲಕೂಡಿ ಬಂದಂತಿದೆ. ಇದರ ಮೊದಲ ಹೆಜ್ಜೆಯಾಗಿ ಸ್ಟೇಟ್ ಬ್ಯಾಂಕ್ ಆ್ ಇಂಡಿಯಾ ಮತ್ತು ಅದರ ಸಹವರ್ತಿ ಬ್ಯಾಂಕುಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್‌ಗಳು ತಮ್ಮ ನಿರ್ದೇಶಕ ಮಂಡಳಿಯ ಮೂಲಕ ಪ್ರಸ್ತಾಪ ಮಾಡಿದ್ದು, ಸ್ಟೇಟ್ ಬ್ಯಾಂಕ್‌ನ ಕೇಂದ್ರೀಯ ಮಂಡಳಿ ಮತ್ತು ಹಣಕಾಸು ಮಂತ್ರಾಲಯ ಅನುಮೋದನೆ ಮಾಡಬೇಕಾಗಿದೆ. ಕಳೆದ ಎರಡು ದಶಕಗಳಿಂದ ಸರಕಾರ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದು, ಈ ವಿಲೀನಕ್ಕೆ ಅನುಮೋದನೆ ತ್ವರಿತವಾಗಿ ದೊರಕುವುದು ಖಚಿತ. ಇದರ ಬೆನ್ನ ಹಿಂದೆ ಬ್ಯಾಂಕ್ ಆ್ ಇಂಡಿಯಾ, ಯುಕೋ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕುಗಳಿಗೆ, ಬೇರೆ ದೊಡ್ಡ ಬ್ಯಾಂಕುಗಳಲ್ಲಿ ವಿಲೀನ ವಾಗಲು ಸರಿಯಾದ ಬ್ಯಾಂಕನ್ನು ಕಂಡುಕೊಳ್ಳುವಂತೆ ನಿರ್ದೇಶಿಸಲಾಗಿದೆ ಎಂದು ಎಕಾನಾಮಿಕ್ ಪತ್ರಿಕೆಗಳು ವರದಿ ಮಾಡಿವೆ.

ಯಾಕೆ ಈ ವಿಲೀನ?
   ಅಂತಾರಾಷ್ಟ್ರೀಯ ಮಟ್ಟದಲ್ಲಿ, 50 ದೊಡ್ಡ ಬ್ಯಾಂಕುಗಳ ಪಟ್ಟಿಯಲ್ಲಿ ಭಾರತದ ಒಂದೇ ಒಂದು ಬ್ಯಾಂಕ್ ಇಲ್ಲ. ಭಾರತದಲ್ಲಿ ದೊಡ್ಡ ಬ್ಯಾಂಕ್ ಎಂದು ಕರೆಸಿಕೊಳ್ಳುವ ಸ್ಟೇಟ್ ಬ್ಯಾಂಕ್ ಆ್ ಇಂಡಿಯಾ ಜಗತ್ತಿನ 100 ದೊಡ್ಡ ಬ್ಯಾಂಕುಗಳ ಪಟ್ಟಿಯಲ್ಲಿ 62ನೆ ಸ್ಥಾನದಲ್ಲಿದೆ. ಭಾರತದ ಬ್ಯಾಂಕುಗಳ ಶೇರು ಬಂಡವಾಳ ವಿದೇಶಿ ಬ್ಯಾಂಕ್‌ಗಳಿಗೆ ಹೋಲಿಸಿದರೆ ತೀರಾ ಕಡಿಮೆ ಇದ್ದು, ವಿದೇಶಿ ಬ್ಯಾಂಕ್‌ಗಳು ನಮ್ಮ ಬ್ಯಾಂಕ್ ಗಳ ಸಂಗಡ ಹಣಕಾಸು ವ್ಯವಹಾರ ಮಾಡಲು ಹಿಂಜರಿಯುತ್ತವೆ. ಇತ್ತೀಚೆಗೆ ಮಧ್ಯ ಪ್ರಾಚ್ಯದ ಒಂದು ಸಣ್ಣ ಬ್ಯಾಂಕ್, ಬಂಡವಾಳ ಕೊರತೆ ಹೆಸರಿನಲ್ಲಿ ಭಾರತದ ಒಂದು ಬ್ಯಾಂಕ್‌ನ ಲೆಟರ್ ಆ್ ಕ್ರೆಡಿಟನ್ನು ಮಾನ್ಯ ಮಾಡಲು ಮೀನಾಮೇಷ ಎಣಿಸಿತ್ತಂತೆ. ಅದೇ ರೀತಿ ಸಾವಿರಾರು ಕೋಟಿಯ ಸಾಲದ ಬೇಡಿಕೆಯನ್ನು ಯಾವುದೇ ಒಂದು ಬ್ಯಾಂಕ್ ಒಕ್ಕೂಟದ ಸಹಾಯವಿಲ್ಲದೇ ಸ್ಪಂದಿಸಲು ಸಾಧ್ಯವಾಗದಿರುತ್ತಿದ್ದು, ಸರಕಾರ ಬ್ಯಾಂಕುಗಳ ವಿಲೀನ ಮಾಡಿ ಅಂತಾರಾಷ್ಟ್ರೀಯ ಮಟ್ಟದ ಬ್ಯಾಂಕುಗಳ ಸ್ಥಾಪನೆಗೆ ಮುಂದಾಗಿದೆ. ಅಂತೆಯೇ ಸರಕಾರ ಕಳೆದ ಎರಡು ದಶಕಗಳಿಂದ ಅಂದಿನ ನಿವೃತ್ತ ಬ್ಯಾಂಕ್ ಚೇರ್ಮನ್ ನರಸಿಂಹನ್‌ರ ನೇತೃತ್ವದಲ್ಲಿ 1991 ಮತ್ತು 1998ರಲ್ಲಿ ಎರಡು ವಿಸ್ತೃತ ವರದಿಯನ್ನು ಪಡೆದು ಬ್ಯಾಂಕ್‌ಗಳ ವಿಲೀನದ ಬಗೆಗೆ ವಿವರವಾದ ಕಾರ್ಯಸೂಚಿಯನ್ನು ಸಿದ್ಧ್ದಪಡಿಸಿತ್ತು. ಅದರೆ, ಕೇಂದ್ರದಲ್ಲಿ ಆಡಳಿತದ ಬದಲಾವಣೆ ಮತ್ತು ಹಲವಾರು ಅನಿವಾರ್ಯ ಕಾರಣಗಳಿಂದ ವಿಲೀನದ ಪ್ರಕ್ರಿಯೆಗೆ ಚಾಲನೆ ಸಿಗಲಿಲ್ಲ.

ಈಗೇಕೆ ವಿಲೀನಕ್ಕೆ ಆತುರ?
ಪ್ರಧಾನಿಯವರು ಕರೆದ ಬ್ಯಾಂಕ್ ಉನ್ನತಾಕಾರಿಗಳ ‘‘ಜ್ಞಾನಸಂಗಮ’’ ಸಭೆಯಲ್ಲಿ ಈ ವಿಚಾರ ಸಾಕಷ್ಟು ಚರ್ಚೆಯಾಗಿದೆ ಎಂದು ಹೇಳಲಾಗುತ್ತಿದ್ದು ಮತ್ತು ವಿಶ್ವ ಬ್ಯಾಂಕಿನ ಒತ್ತಡವೂ ಇದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಬ್ಯಾಂಕಿಂಗ್ ಉದ್ಯಮದಲ್ಲಿ ಸುಸ್ತಿ ಸಾಲದ ಪ್ರಮಾಣ 6.90ಶೇ. ಏರಿದ್ದು, ಈ ಹಣಕಾಸು ವರ್ಷದಲ್ಲಿ ಈ ವರೆಗೆ 8 ಬ್ಯಾಂಕುಗಳು 14,000 ಕೋಟಿ ರೂ. ನಷ್ಟ ಅನುಭವಿಸಿದ್ದು, ಬ್ಯಾಂಕಿಂಗ್‌ನ ನಿರ್ವಹಣಾ ವೆಚ್ಚವನ್ನು ವಿಲೀನದ ಮೂಲಕ ತಗ್ಗಿಸುವ ಅನಿವಾರ್ಯತೆಯೂ ಇದೆ ಎಂದು ವಿಶ್ಲೇಷಕರು ಆಭಿಪ್ರಾಯ ಪಡುತ್ತಿದ್ದಾರೆ.

 ವಿಲೀನದ ಪರಿಣಾಮ ಏನು?
   ಈ ವಿಲೀನದಿಂದ ಸ್ಟೇಟ್ ಬ್ಯಾಂಕ್ ಸಹವರ್ತಿ ಬ್ಯಾಂಕ್‌ಗಳಿಂದ 5000 ಕೋಟಿ ಫಿಕ್ಸೆಡ್ ಕ್ಯಾಪಿಟಲ್ ದೊರಕುತ್ತದೆ ಮತ್ತು ಇದರ ಠೇವಣಿ 21 ಲಕ್ಷ ಕೋಟಿ ಮತ್ತು ಸಾಲ 17.5 ಲಕ್ಷ ಕೋಟಿಗೆ ಏರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದರ ಸ್ಥಾನ 59 ರಿಂದ 45ಕ್ಕೆ ಏರುತ್ತದೆ. ಸಿಬ್ಬಂದಿ ಸಂಖ್ಯೆ ಸುಮಾರು 38,000ದಷ್ಟು ಏರಲಿದೆ ಮತ್ತು ಶಾಖೆಗಳ ಸಂಖ್ಯೆ 14,000ದಿಂದ 20,400ಗೆ ಏರಲಿದೆ. ಸ್ಟೇಟ್ ಬ್ಯಾಂಕ್‌ನ ನಿ ವೆಚ್ಚ 100 ಮೂಲಾಂಕಗಳಷ್ಟು ಕಡಿಮೆಯಾಗಲಿದೆ ಮತ್ತು ಸಿಬ್ಬಂದಿ ವೆಚ್ಚ ತಿಂಗಳಿಗೆ 23 ಕೋಟಿ ಹೆಚ್ಚಲಿದೆ. ಈ ಪ್ರಕ್ರಿಯೆಯಲ್ಲಿ ಕೆಲವು ಶಾಖೆಗಳನ್ನು ಮುಚ್ಚ ಬೇಕಾಗುತ್ತದೆ. ಸಿಬ್ಬಂದಿ ಸಂಬಳದ ಏರಿಕೆ ಮತ್ತು ಜೇಷ್ಠತೆ ತಲೆನೋವಾಗುವ ಸಂಭವ ಇದೆ. ಈಗ ಬ್ಯಾಂಕುಗಳಲ್ಲಿ ‘‘ನಿವೃತ್ತಿ ಪರ್ವ’’ ನಡೆಯುತ್ತಿದ್ದು, ವಿಲೀನದಿಂದ ಆಗುವ ಸಿಬ್ಬಂದಿ ಹೆಚ್ಚಳದ ಸಮಸ್ಯೆ ಒಂದೆರಡು ವರ್ಷದಲ್ಲಿ ಸರಿಯಾಗುತ್ತದೆ. ಹಾಗೆಯೇ ಸಿಬ್ಬಂದಿಯ  ಜ್ಞಿಠಿಛಿಜ್ಟಠಿಜಿಟ್ಞ ಕೂಡಾ ಸಮಸ್ಯೆಯಾಗಲಿದೆ. ಒಂದು ಅಂದಾಜಿನ ಪ್ರಕಾರ ಈ ವಿಲೀನದ ಪ್ರಕ್ರಿಯೆ ಪೂರ್ಣವಾಗಲು ಕನಿಷ್ಠ 9 ತಿಂಗಳು ಬೇಕಾಗಬಹುದೆಂದು ಲೆಕ್ಕ ಹಾಕಲಾಗಿದೆ. ಕೆಲವು ಉನ್ನತ ಅಕಾರಿಗಳ ಪುನರ್ವಸತಿ ಕೂಡಾ ಸ್ವಲ್ಪಸಮಸ್ಯೆಯನ್ನು ಮಾಡಬಹುದು ಎನ್ನುವ ಮಾತು ಬ್ಯಾಂಕಿಂಗ್ ವಲಯದಲ್ಲಿ ಕೇಳಿಬರುತ್ತಿದೆ.

ಉಳಿದ ಬ್ಯಾಂಕುಗಳ ಮೇಲೆ ಪರಿಣಾಮ ಏನಾಗಬಹುದು?
  ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಈಗ ಆರಂಭಿಕ ತೊಡಕು ನಿವಾರಣೆಯಾಗಿದ್ದು, ಇದು ಹಂತ ಹಂತವಾಗಿ ಬ್ಯಾಂಕಿಂಗ್ ಉದ್ಯಮದಲ್ಲಿ, ನಿರೀಕ್ಷಿಸಿದ್ದಕ್ಕಿಂತ ಮೊದಲು ಮತ್ತು ವೇಗವಾಗಿ ಚಾಲನೆ ಪಡೆಯಬಹುದು. ಇದು ನಡೆದರೆ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ದಟ್ಟನೆಯಾಗಿರುವ ಶಾಖೆಗಳನ್ನು ಗ್ರಾಮಾಂತರ ಪ್ರದೇಶಗಳಿಗೆ ಸ್ಥಳಾಂತರ ಮಾಡಬಹುದು. ಬ್ಯಾಂಕುಗಳ ಶಾಖಾ ವಿಸ್ತರಣೆಯ ಹಿಂದೆ ಹೆಚ್ಚಿನ ಚಿಂತನ- ಮಂಥನ ನಡೆಯಬಹುದು. ಈ ಬ್ಯಾಂಕುಗಳು ಬೇರೆ ಬೇರೆ ಹಿನ್ನೆಲೆಯಿಂದ ಬಂದಿರುವುದರಿಂದ, ಸಿಬ್ಬಂದಿ ಮತ್ತು ಕೆಲಸದ ನೀತಿನಿಯಮ ಬದಲಾಯಿಸುವುದು ಕಠಿಣವಾಗುತ್ತದೆ ಮತ್ತು ಈ ಪ್ರಕ್ರಿಯೆ ಮ್ಯಾರಥಾನ್ ಆಗುತ್ತದೆ.

ದ್ವಂದ್ವ ನೀತಿ
 ಸರಕಾರ ಒಂದು ಕಡೆ ಬ್ಯಾಂಕುಗಳ ವಿಲೀನವನ್ನು ಪ್ರೋತ್ಸಾಹಿಸುತ್ತದೆ. ಹಾಗೆಯೇ ಹೊಸ ಬ್ಯಾಂಕುಗಳ ಸ್ಥಾಪನೆಗೆ ಅರ್ಜಿ ಕರೆಯುತ್ತದೆ. ಕೇಳಿದ ತಕ್ಷಣ ಮಂಜೂರಿ ನೀಡುವ ‘ಬ್ಯಾಂಕ್ಸ್ ಆನ್ ಟ್ಯಾಪ್’ ಪರಿಕಲ್ಪನೆ ಸದ್ಯದಲ್ಲಿಯೇ ಬರುವುದಿದೆ. ಈ ದ್ವಂದ್ವ ನೀತಿಯ ಹಿನ್ನೆಲೆ ಮತ್ತು ಅರ್ಥ ಎನ್ನುವ ಜಿಜ್ಞಾಸೆ ಅರ್ಥವಾಗುತ್ತಿಲ್ಲ. ಈ ಮಧ್ಯದಲ್ಲಿ, ವಿಜಯ ಮಲ್ಯರ ಸುಸ್ತಿ ಸಾಲದ ಪ್ರಕರಣದ ನಂತರ, ಬ್ಯಾಂಕುಗಳ ವಿಲೀನ, ಹೊಸ ಬ್ಯಾಂಕುಗಳ ಸ್ಥಾಪನೆಗಿಂತ, ಸುಸ್ತಿ ಸಾಲದಿಂದ ಬ್ಯಾಂಕುಗಳನ್ನು ಮತ್ತು ದೇಶದ ಅರ್ಥವ್ಯವಸ್ಥೆಯನ್ನು ಉಳಿಸುವ ಮತ್ತು ಬಲಗೊಳಿಸುವ ಅದ್ಯತೆಯ ಬಗೆಗೆ ಕೂಗು ಜೋರಾಗಿ ಕೇಳುತ್ತಿದೆ.

share
ರಮಾನಂದ ಶರ್ಮಾ, ಬೆಂಗಳೂರು
ರಮಾನಂದ ಶರ್ಮಾ, ಬೆಂಗಳೂರು
Next Story
X