ಅತಿಯಾದ ಧಗೆಯು ನಿಮ್ಮ ದೇಹಕ್ಕೆ ಹಾನಿಕರ
ಭಾರತೀಯ ಹವಾಮಾನ ಇಲಾಖೆಯು ಉತ್ತರ ಮತ್ತು ಮಧ್ಯ ಭಾರತದಲ್ಲಿ ತೀವ್ರ ಬಿಸಿ ಗಾಳಿಯ ಎಚ್ಚರಿಕೆಯನ್ನು ನೀಡಿದೆ. ಆದರೆ ಮಾನವನ ದೇಹದ ಮೇಲೆ ಈ ಧಗೆ ಯಾವ ರೀತಿ ಪರಿಣಾಮ ಬೀರಲಿದೆ? ಸಾಮಾನ್ಯ ಬಿಸಿಯ ಸ್ಥಿತಿಯಲ್ಲಿ ದೇಹವು ಬೆವರುವ ಮೂಲಕ ತಂಪು ಮಾಡಿಕೊಳ್ಳುತ್ತದೆ. ಆದರೆ ಕೆಲವೊಮ್ಮೆ ಬೆವರು ಸಾಕಾಗುವುದಿಲ್ಲ. ಅಂತಹ ಸಮಯದಲ್ಲಿ ದೇಹದ ಶಾಖ ಏರುತ್ತದೆ. ಅದು ಮೆದುಳು ಅಥವಾ ಮೆದುಳಿನ ಮುಖ್ಯ ಅಂಗಗಳು, ಮೂತ್ರಕೋಶ ಮತ್ತು ಯಕೃತ್ತಗಳಿಗೆ ನಷ್ಟವುಂಟು ಮಾಡಬಹುದು. ಹಿರಿಯರು ಮತ್ತು ಮಕ್ಕಳಿಗೆ ಈ ಸಮಸ್ಯೆ ಹೆಚ್ಚು. ರೋಗಿಗಳಿಗೆ, ರಕ್ತದೊತ್ತಡ ಇರುವವರಿಗೂ ಬೇಸಗೆಯ ಧಗೆ ಒಳ್ಳೆಯದಲ್ಲ.
ಬೇಸಗೆಯ ಧಗೆಯು ಮಾನವ ದೇಹದ ಮೇಲೆ ಈ ಕೆಳಗಿನ ಮೂರು ಹಂತಗಳಲ್ಲಿ ದಾಳಿ ನಡೆಸುತ್ತದೆ.
ಬಿಸಿಯಿಂದಾಗುವ ಬಿರುಕುಗಳು
ಬಿಸಿಲಿಗೆ ಮೈಯೊಡ್ಡುವ ವ್ಯಕ್ತಿ ದೇಹದಲ್ಲಿ ಇಲೆಕ್ಟ್ರೊಲೈಟ್ ಸಮತೋಲನ ಕಳೆದುಕೊಳ್ಳುತಾನೆ. ಅತಿಯಾದ ಬೆವರಿನಿಂದ ಇದು ಸಂಭವಿಸುತ್ತದೆ. ಈ ಮೊದಲು ಹಂತವನ್ನು ಹೀಟ್ ಕ್ರಾಂಪ್ಸ್ (ಬಿಸಿಯ ಬಿರುಕು) ಎನ್ನಲಾಗುತ್ತದೆ. ಈ ಹಂತದಲ್ಲಿ ಜನರಿಗೆ ಕಾಲು ಮತ್ತು ಹೊಟ್ಟೆ ನೋವು ಬರುತ್ತದೆ. ಇದೇ ಕಾರಣಕ್ಕೆ ಬೇಸಗೆಯಲ್ಲಿ ಅತಿಯಾಗಿ ನೀರು ಕುಡಿಯಬೇಕು ಎಂದು ಸಲಹೆ ನೀಡುವುದು. ನೀರಿಗೆ ಉಪ್ಪು, ಸಕ್ಕರೆ ಮತ್ತು ಲಿಂಬೆ ರಸ ಬೆರೆಸಿದರೆ ಇನ್ನೂ ಉತ್ತಮ. ಇದು ಇಲೆಕ್ಟ್ರೊಲೈಟ್ ಸಮತೋಲನ ಕಾಪಾಡುತ್ತದೆ ಎಂದು ರಾಜಸ್ಥಾನದ ಸರ್ದಾರ್ ಪಟೇಲ್ ಮೆಡಿಕಲ್ ಕಾಲೇಜ್ ಮುಖ್ಯ ಪ್ರೊಫೆಸರ್ ಡಾ ಆರ್ ಪಿ ಅಗರ್ವಾಲ್ ಹೇಳುತ್ತಾರೆ.
ಶಾಖದ ಬಳಲಿಕೆ (ಹೀಟ್ ಎಕ್ಸಾಸ್ಷನ್)
ಬೇಸಗೆಯ ಶಾಖಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವವರು ದೇಹದಲ್ಲಿ ನೀರು ಮತ್ತು ಇಲೆಕ್ಟ್ರೊಲೈಟ್ ಬದಲಿಸುವುದು ಕಡಿಮೆಯಾಗಿ ಬೆವರು ಕಳೆದುಕೊಳ್ಳುತ್ತಾರೆ. ಇದರಿಂದ ಹೀಟ್ ಎಕ್ಸಾಸ್ಷನ್ ಅಥವಾ ಶಾಖದ ಬಳಲಿಕೆಯಾಗುತ್ತದೆ. ಈ ಹಂತದಲ್ಲಿ ಮೆದುಳಿಗೆ ರಕ್ತದ ಪ್ರಸರಣ ನಿಂತುಬಿಡುತ್ತದೆ. ಬಿರುಕುಗಳ ಜೊತೆಗೆ ಶಾಖದ ಬಳಲಿಕೆ ಅನುಭವಿಸುವವರಿಗೆ ವಾಂತಿ, ಸುಸ್ತು ಅಥವಾ ಮಂದವಾದ ದೃಷ್ಟಿಯ ಸಮಸ್ಯೆಯೂ ಆಗಬಹುದು. ಹೀಗಾಗಿ ಚಟುವಟಿಕೆ ಮುಂದುವರಿಸಲು ಸಾಧ್ಯವಾಗದೆ ಪ್ರಜ್ಞಾಹೀನರಾಗಬಹುದು.
ಹೀಟ್ ಸ್ಟ್ರೋಕ್ ಅಥವಾ ಬಿಸಿಲಿನ ಹೊಡೆತ
ಬಿಸಿಲಿನ ಬಳಲಿಕೆಯ ಹಂತದಲ್ಲಿ ಚಿಕಿತ್ಸೆ ತೆಗೆದುಕೊಳ್ಳದೆ ಇದ್ದಲ್ಲಿ ಬಿಸಿಲಿನ ಹೊಡೆತ ಸಂಭವಿಸಬಹುದು. ಇದು ಜೀವಕ್ಕೆ ಅಪಾಯಕಾರಿ ಹಂತ. ಇಲ್ಲಿ ಬೆವರಿನ ಗ್ರಂಥಿಗಳು ಬಳಲಿಕೆಯಾಗಿ ಹೆಚ್ಚು ಬೆವರನ್ನು ಬಿಡಲು ಅಸಮರ್ಥವಾಗುತ್ತವೆ. ನೀರಿನ ಅಂಶ ದೇಹದಲ್ಲಿ ಇಲ್ಲವಾದಾಗ ಶಾಖ ವೇಗವಾಗಿ ಏರುತ್ತದೆ. ದೇಹವನ್ನು ತಂಪಾಗಿಸಲು ದ್ರವ ಪದಾರ್ಥ ಇಲ್ಲದಾಗ ಆಂತರಿಕ ರಕ್ಷಣಾ ಸಾಮರ್ಥ್ಯ ದುರ್ಬಲವಾಗುತ್ತದೆ ಮತ್ತು ಮೂಲ ತಾಪ ಏರುತ್ತದೆ ಎನ್ನುತ್ತಾರೆ ಡಾ ಅಗರ್ವಾಲ್. ಈ ಹಂತದಲ್ಲಿ ದೇಹದ ಶಾಖ 105 ಡಿಗ್ರಿ ಸೆಲ್ಷಿಯಸ್ ತಲುಪುವುದನ್ನೇ ಹೀಟ್ ಸ್ಟ್ರೋಕ್ ಎನ್ನುತ್ತಾರೆ.
ಈ ಹಂತದಲ್ಲಿರುವವರ ದೇಹದ ತಾಪವನ್ನು ತಕ್ಷಣವೇ ಕೆಳಗಿಳಿಸಬೇಕು. ಅದಕ್ಕಾಗಿ ಎಸಿ ರೂಮಿಗೆ ಕೊಂಡೊಯ್ಯುವುದು, ಆಸ್ಪತ್ರೆಗೆ ಸೇರಿಸುವುದು ಮಾಡಬಹುದು. ಆಸ್ಪತ್ರೆಯಲ್ಲಿ ಇವರಿಗೆ ಕೂಲರ್ ರೂಮಲ್ಲಿ ಇರಿಸಿ ಸ್ಪಾಂಜ್ ಬಾತ್ ಮಾಡುತ್ತಾರೆ.
ಹೀಟ್ ಸ್ಟ್ರೋಕ್ ಇದ್ದವರನ್ನು ತಕ್ಷಣವೇ ತಂಪು ಮಾಡದೆ ಇದ್ದಲ್ಲಿ ಮೆದುಳಿನ ಹೆಮರೇಜ್ ಆಗುವುದು ಮತ್ತು ಉಸಿರಾಟದ ತೊಂದರೆಯಗುತ್ತದೆ. ಇದು ಡೆಲಿರಿಯಂ, ಸೀಜರ್ಸ್ ಅಥವಾ ಕೋಮಾಗೆ ಕಾರಣವಾಗಲಿದೆ. ಅಂತಿಮವಾಗಿ ಮಾರಕ ಸ್ವರೂಪ ಪಡೆಯುತ್ತದೆ. ನಿಧಾನವಾಗಿ ದೇಹದ ಅವಯವಗಳು ಪ್ರತಿಕ್ರಿಯಿಸುವುದು ನಿಂತು ಹೋಗಿ ದೇಹದ ಅಂಗಾಂಶಗಳು ಕೆಲಸ ಮಾಡುವುದಿಲ್ಲ. ಇದರಿಂದಾಗಿ ರೀನಲ್ ಮತ್ತು ಲಿವರ್ ವೈಫಲ್ಯವೂ ಆಗಬಹುದು.