ಹಿರಿಯ ಅಧಿಕಾರಿಗಳನ್ನು ಕೊಲ್ಲಲು ರಾಜ್ಯಪಾಲರಲ್ಲಿ ಅನುಮತಿ ಕೇಳಿದ ಸರಕಾರಿ ಅಧಿಕಾರಿ
ಕಿರುಕುಳದಿಂದ 'ಮೋಕ್ಷ' ಪಡೆಯುವ ಉದ್ದೇಶ

ಬೆಂಗಳೂರು: ಕರ್ನಾಟಕ ರಾಜ್ಯಪಾಲರಿಗೆ ಇತ್ತೀಚೆಗೆ ಬಂದ ಮನವಿಯೊಂದು ತೀರಾ ವಿಚಿತ್ರವಾಗಿತ್ತು. ಚಿತ್ರದುರ್ಗ ಜಿಲ್ಲೆಯ ಪಂಚಾಯ್ತಿ ಕಾರ್ಯದರ್ಶಿಯೊಬ್ಬರು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ, ತಮಗೆ ಕಿರುಕುಳ ನೀಡುತ್ತಿರುವ ವ್ಯವಸ್ಥಾಪಕ ಹಾಗೂ ಇತರ ಇಬ್ಬರು ಸಹೋದ್ಯೋಗಿಗಳನ್ನು ಹತ್ಯೆ ಮಾಡಲು ಅನುಮತಿ ಕೋರಿದ್ದಾರೆ. ಮೇ 19ರಂದು ಬರೆದ ಈ ಪತ್ರದ ಪ್ರತಿ ಮಾಧ್ಯಮಕ್ಕೆ ಲಭ್ಯವಾಗಿದೆ. ಈ ಹಿಟ್ ಲಿಸ್ಟ್‌ನಲ್ಲಿರುವ ಅಧಿಕಾರಿಗಳು, ತಮ್ಮ ಜೀವಕ್ಕೆ ಅಪಾಯವಿದೆ ಎಂದು ವಿವರಿಸಿ ಕಾರ್ಯದರ್ಶಿ ವಿರುದ್ಧ ದೂರು ದಾಖಲಿಸಿದ್ದಾರೆ.
ಗ್ರಾಮಲೆಕ್ಕಿಗರಾಗಿರುವ ಎಂ.ಎಸ್.ಮೋಕ್ಷಕುಮಾರ್ ಎಂಬುವವರು, ರಾಜ್ಯಪಾಲರನ್ನು ಉದ್ದೇಶಿಸಿ ಈ ಪತ್ರ ಬರೆದಿದ್ದು, ಇದರ ಪ್ರತಿಯನ್ನಯ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಳುಹಿಸಿದ್ದಾರೆ. ಮೋಕ್ಷಕುಂಆರ್ ಅವರನ್ನು ತಕ್ಷಣ ಅಮಾನತು ಮಾಡಲಾಗಿದ್ದು, ವಿಚಾರಣೆ ನಡೆಯುತ್ತಿದೆ.
ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ನೀಡಿದ ನಿರ್ದೇಶನವನ್ನು ಕೂಡಾ ಲೆಕ್ಕಿಸದೇ ಇಬ್ಬರು ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಸಂಪೂರ್ಣ ವೇತನ ನೀಡುತ್ತಿಲ್ಲ ಎಂದು ಆಪಾದಿಸಿದ್ದಾರೆ. ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಂದ ಐದು ಪತ್ರಗಳು ಬಂದಿದ್ದರೂ, ಇವರು ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ನಾನು ಹತಾಶನಾಗಿದ್ದೇನೆ. ಒಂದು ವರ್ಷದ ಬಳಿಕವೂ ಪೂರ್ಣ ವೇತನ ನನಗೆ ಸಿಗುತ್ತಿಲ್ಲ. ಚಿತ್ರದುರ್ಗ ಜಿಲ್ಲಾಪಂಚಾಯ್ತಿ ವ್ಯವಸ್ಥಾಪಕ ಜೆ.ಚಂದ್ರಶೇಖರ್ ಹಾಗೂ ಸಹೋದ್ಯೋಗಿಗಳಾದ ಕೆ.ವಿ.ಸುನೀಲ್ ಹಾಗೂ ಶ್ರೀಧರ್ ಎಂಬವರು, ನಿಮ್ಮ ಪತ್ರವನ್ನು ನಿರ್ಲಕ್ಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಹತ್ಯೆ ಮಾಡಲು ನಿಮ್ಮ ಅನುಮತಿ ಕೋರುತ್ತಿದ್ದೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ರಾಜ್ಯಪಾಲರಿಗೆ ಸುಧೀರ್ಘ ಪತ್ರ ಬರೆದಿದ್ದಾರೆ. ಆದರೆ ಈ ಬಗ್ಗೆ ಇದುವರೆಗೆ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ. ಚಂದ್ರಶೇಖರ್ ಅವರ ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತಕ್ಷಣದಿಂದ ಅವರನ್ನು ಅಮಾನತು ಮಾಡಿ, ತನಿಖೆಗೆ ಆದೇಶಿಸಲಾಗಿದೆ. ಅವರ ಹಾಜರಾಗಿ ವಿವರಗಳು ಸಮರ್ಪಕವಾಗಿ ಲಭ್ಯವಿಲ್ಲದ ಕಾರಣ ಪೂರ್ಣ ವೇತನ ನೀಡುತ್ತಿಲಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.







