ಭಟ್ಕಳ: ಬೆಳಕೆಯ ಸಿಂಡಿಕೇಟ್ ಬ್ಯಾಂಕ್ ನೂತನ ಕಟ್ಟಡಕ್ಕೆ ಸ್ಥಳಾಂತರ

ಭಟ್ಕಳ: ಬೆಳಕೆಯ ಸಿಂಡಿಕೇಟ್ ಬ್ಯಾಂಕ್ ನೂತನ ಕಟ್ಟಡಕ್ಕೆ ಸ್ಥಳಾಂತರ ಕಾರ್ಯಕ್ರಮವನ್ನು ಶಾಸಕ ಮಂಕಾಳ ಎಸ್. ವೈದ್ಯ ಅವರುಉದ್ಘಾಟಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕುಗಳು, ಪಟ್ಟಣ ಸಹಕಾರಿ ಬ್ಯಾಂಕುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಜನತೆಗೆ ಉತ್ತಮ ಸೇವೆ ನೀಡುತ್ತಿವೆ. ಅಂದು ರಾಷ್ಟ್ರೀಕೃತ ಬ್ಯಾಂಕುಗಳ ಧೋರಣೆಯೇ ಅದಕ್ಕೆ ಕಾರಣವಾಗಿದ್ದು ಇಂದು ಪರಿಸ್ಥಿತಿ ಬದಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳೂ ಕೂಡಾ ಅವುಗಳೂ ಕೂಡಾ ಸಹಕಾರಿ ಬ್ಯಾಂಕುಗಳಿಗೆ ಪೈಪೆಟಿ ನೀಡುತ್ತವೆ ಎಂದು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕುಗಳಿಂದ ಇಂದು ಹಳ್ಳಿ ಹಳ್ಳಿಗಳಲ್ಲಿ ಬ್ಯಾಂಕಿಂಗ್ ಸೇವೆ ದೊರೆಯುವಂತಾಗಿದ್ದು, ಬಡಜನತೆಗೆ ಸಹ ಬ್ಯಾಂಕಿಂಗ್ ಸೇವೆ ಲಭ್ಯವಾಗಿದೆ. ಶಿಕ್ಷಣಕ್ಕೆ ಇಂದು ಹೆಚ್ಚು ಮಹತ್ವವಿದ್ದು ಅಷ್ಟೇ ದುಬಾರಿಯಾಗಿದೆ. ಇಂತಹ ದುಬಾರಿ ಸಮಯದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳು ಶಿಕ್ಷಣ ಸಾಲವನ್ನು ನೀಡಿ ಅನೇಕರ ಭವಿಷ್ಯ ಉಜ್ವಲವಾಗುವಂತೆ ಮಾಡಿವೆ. ಶಿಕ್ಷಣ ಸಾಲಕ್ಕೆ ಆದ್ಯತೆಯ ಮೇಲೆ ಮಂಜೂರಿ ನೀಡಬೇಕು. ಅಲ್ಲದೇ ಶಾಖಾಧಿಕಾರಿಗಳ ಮಟ್ಟದಲ್ಲಿಯೇ ಹೆಚ್ಚಿನ ಸಾಲವನ್ನು ಮಂಜೂರಿಯಾಗುವಂತೆ ಬ್ಯಾಂಕುಗಳು ನೊೀಡಿಕೊಳ್ಳಬೇಕು ಎಂದೂ ಹೇಳಿದರು.
ಯಾವುದೇ ಬ್ಯಾಂಕ್ ಶಾಖೆ ತೆರೆದರೂ ಸಹ ಅದರ ಬೆಳವಣಿಗೆಯು ಬ್ಯಾಂಕಿನ ಸಿಬ್ಬಂದಿಗಳ ಮೇಲೆ ಅವಲಂಬಿತವಾಗುತ್ತದೆ. ಗ್ರಾಮೀನ ಭಾಗದಲ್ಲಿ ಜನತೆಯ ಅವಶ್ಯಕತೆಗನುಗುಣವಾಗಿ ಸ್ಪಂಧಿಸುವ ಸಿಬ್ಬಂದಿಗಳಿದ್ದರೆ ಉತ್ತಮ ಎಂದ ಅವರು ಕೇವಲ ಐದು ವರ್ಷದಲ್ಲಿ ಗ್ರಾಮೀಣ ಭಾಗದ ಈ ಶಾಖೆ ಮಾಡಿದ ಸಾಧನೆ ಉತ್ತಮವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಸತೀಶ್ ಕಾಮತ್ ವಹಿಸಿದ್ದರು.
ಪ್ರಾವಸ್ತಾವಿಕವಾಗಿ ಮಾತನಾಡಿದ ಕಾರವಾರ ಪ್ರಾದೇಶಿಕ ಕಚೇರಿ ಸಹಾಯಕ ಕಾರ್ಯನಿವಾಹಕ ವ್ಯವಸ್ಥಾಪಕ ರಾಮ ನಾಯ್ಕ ಸಿಂಡಿಕೇಟ್ ಬ್ಯಾಂಕ್ ಗ್ರಾಮೀಣ ಸೇವೆಗೆ ಆದ್ಯತೆಯನ್ನು ನೀಡುತ್ತಿದೆ. 6950 ಗ್ರಾಮಗಳನ್ನು ಬ್ಯಾಂಕಿಂಗ್ ವ್ಯಾಪ್ತಿಗೆ ತಂದೆ ಹೆಮ್ಮೆ ನಮ್ಮ ಬ್ಯಾಂಕಿನದು ಎಂದ ಅವರು ತಮ್ಮ ಬ್ಯಾಂಕ್ ಶಿಕ್ಷಣ ಸಾಲಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತಿದೆ. ಯಾವುದೇ ಒಂದು ಪ್ರತಿಭಾನ್ವಿತ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದು ನಮ್ಮ ಉದ್ದೇಶ ಎಂದರು. ಕಳೆದ ಒಂದು ವರ್ಷದಲ್ಲಿ ಈ ಶಾಖೆಯು ಶೇ.28ರಷ್ಟು ಪ್ರಗತಿಯ ದಾಖಲೆಯನ್ನು ಹೊಂದಿದೆ ಎಂದ ಅವರು 5.60 ಲಕ್ಷ ಠೇವಣಿ ಹೊಂದಿದ ಬ್ಯಾಂಕ್ 3.64 ಕೋಟಿ ವಿವಿಧ ಸಾಲಗಳನ್ನು ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಳಕೆ ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ ನಾಯ್ಕ, ಹೆಸ್ಕಾಂ ಸಲಹಾ ಸಮಿತಿ ಸದಸ್ಯ ಮಂಜುನಾಥ ನಾಯ್ಕ, ಬೆಳಕೆ ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಎಲ್. ನಾಯ್ಕಮುಂತಾದವರು ಉಪಸ್ಥಿತರಿದ್ದರು.
ಬ್ಯಾಂಕಿನ ಶಾಖಾಧಿಕಾರಿ ಜೋಸೆಫ್ ಪೌಲ್ ಸ್ವಾಗತಿಸಿದರು. ಭಟ್ಕಳ ನೆಹರು ರಸ್ತೆ ಶಾಖೆಯ ಸಿಬ್ಬಂದಿ ಶ್ರೀಲೇಖಾ ಪ್ರಾರ್ಥಿಸಿದರು. ಶಾಖೆ ಪ್ರಥಮ ಶಾಖಾಧಿಕಾರಿ ಸದಾಶಿವ ಆಚಾರ್ಯ ನಿರೂಪಿಸಿದರು.







