ಮಂಜೇಶ್ವರ : ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನ ತಡೆದು ಯುವಕನಿಗೆ ಹಲ್ಲೆ

ಮಂಜೇಶ್ವರ : ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನ ತಡೆದು ಯುವಕನಿಗೆ ಸಂಘ ಪರಿವಾರದ ಕಾರ್ಯಕರ್ತರ ತಂಡವೊಂದು ಹಲ್ಲೆಗೈದ ಘಟನೆ ಭಾನುವಾರ ಮಧ್ಯಾಹ್ನ ಹೊಸಂಗಡಿ ಸಮೀಪದ ಬೆಜ್ಜ ಎಂಬಲ್ಲಿ ಸಂಭವಿಸಿದೆ. ಹಲ್ಲೆಯಿಂದ ಗಾಯಗೊಂಡ ಮಚ್ಚಂಪಾಡಿ ನಿವಾಸಿ ಜಾಬಿರ್(24) ನನ್ನು ಕುಂಬಳೆಯ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಮಧ್ಯಾಹ್ನ 2 ಘಂಟೆ ಸುಮಾರಿಗೆ ಪೈವಳಿಕೆಯಿಂದ ಬೆಜ್ಜ ದಾರಿಯಾಗಿ ಟೆಂಪೋವೊಂದರಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಬೆಜ್ಜ ಬಳಿ ಟೆಂಪೋವನ್ನು ತಡೆದ 10 ಮಂದಿಯಷ್ಟು ಸಂಘ ಪರಿವಾರದ ಕಾರ್ಯಕರ್ತರು ಜಾನುವಾರು ಗಳನ್ನು ಕೊಂಡೊಯ್ಯದಂತೆ ಹೇಳಿ ಯುವಕನ ಮೇಲೆ ಬೆದರಿಕೆಯೊಡ್ಡಿ ಹಲ್ಲೆ ನಡೆಸಿರುವುದಾಗಿ ಆಸ್ಪತ್ರೆಗೆ ದಾಖಲಾದ ಜಾಬಿರ್ ಹೇಳಿದ್ದಾನೆ. ಘಟನೆಯಿಂದ 2 ಗುಂಪುಗಳ ಮಧ್ಯೆ ಪರಸ್ಪರ ವಾಗ್ವಾದ ಮತ್ತು ಕಲ್ಲು ತೂರಾಟ ನಡೆಸಿದೆಯೆನ್ನಲಾಗಿದೆ. ಘಟನೆ ತಿಳಿದು ಮಂಜೇಶ್ವರ ಠಾಣಾ ಪೋಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತಿದ್ದಾರೆ.
Next Story





