ಉಡುಪಿ: ಆಸ್ಟ್ರೋರ ಒಂದೇ ಚಿತ್ರಕ್ಕೆ ಮೂರು ಪ್ರಶಸ್ತಿ

ಉಡುಪಿ, ಮೇ 22: ಉದಯವಾಣಿ ಪತ್ರಿಕೆಯ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ತೆಗೆದ ಒಂದೇ ಚಿತ್ರಕ್ಕೆ ಮೂರು ಅಂತಾ ರಾಷ್ಟ್ರೀಯ ಬಹುಮಾನ ಲಭಿಸಿದೆ.
ಅಂತಾರಾಷ್ಟ್ರೀಯ ಫೋಟೋಗ್ರಫಿ ಸರ್ಕಿಟ್‌ನಲ್ಲಿ ಆಸ್ಟ್ರೋ ತೆಗೆದ ಇರುವೆ ಚಿತ್ರಕ್ಕೆ ಮಸ್ಕತ್‌ನಲ್ಲಿ ಪಿಎಸ್‌ಓ ರಿಬ್ಬನ್, ರಿಜ್ವಾದಲ್ಲಿ ನಡೆದ ಸ್ಪರ್ಧೆಯಲ್ಲಿ ಯುಪಿಓ ರಿಬ್ಬನ್ ಹಾಗೂ ಸಲ್ಲಾಲ್ಲಹ್‌ನಲ್ಲಿ ಜರಗಿದ ಸ್ಪರ್ಧೆಯಲ್ಲಿ ಪಿಎಸ್‌ಓ ಬ್ರೊಂಜ್ ಬಹುಮಾನ ಲಭಿಸಿದೆ. ಇದೇ ಸ್ಪರ್ಧೆಯಲ್ಲಿ ಇವರ 11 ಚಿತ್ರಗಳು ಸ್ವೀಕೃತಗೊಂಡಿವೆ. ಈ ಸ್ಪರ್ಧೆ ಯನ್ನು ಫೋಟೋಗ್ರಫಿ ಸೊಸೈಟಿ ಆಫ್ ಒಮಾನ್, ಫೆಡರೇಶನ್ ಆರ್ಟ್ ಪೋಟೋಗ್ರಫಿ ಹಾಗೂ ಇಂಟರ್‌ನ್ಯಾಶನಲ್ ಅಸೋಸಿಯೇಶನ್ ಆಫ್ ಅರ್ಚಿಟೆಕ್ಟುರಲ್ ಫೋಟೋಗ್ರಫಿ ಸಂಸ್ಥೆಗಳ ಮಾರ್ಗದರ್ಶನದಲ್ಲಿ ನಡೆದಿದೆ.
Next Story





