ತುರ್ತು ಸಂಖ್ಯೆ ‘100’ಕ್ಕೆ ಕಾಲ್‌ಡ್ರಾಪ್ ಕಾಟ!

ಹೊಸದಿಲ್ಲಿ, ಮೇ 22: ನೀವು ಅಪಾಯದಲ್ಲಿದ್ದಾಗ ‘100’ ಸಂಖ್ಯೆಗೆ ಕರೆ ಮಾಡಿದಾಗ ‘ಎಲ್ಲ ಮಾರ್ಗಗಳೂ ಕಾರ್ಯನಿರತವಾಗಿವೆ’ ಎಂಬ ಉತ್ತರ ಬಂದಲ್ಲಿ ಆಶ್ಚರ್ಯಗೊಳ್ಳಬೇಡಿ!
ಹೀಗೆ ಕರೆ ನಿರರ್ಥಕವಾಗಿರುವ ವಿಷಯ ಇತ್ತೀಚೆಗೆ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ ಮೆಹ್ರಿಶಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಮಟ್ಟದ ಸಭೆಯೊಂದರಲ್ಲಿ ದಿಲ್ಲಿ ಪೊಲೀಸರು ಪ್ರಸ್ತಾಪಿಸಿದ್ದಾರೆ. ಅದು ಅಪಾಯದ ಗುಂಗಿಯನ್ನೊತ್ತಿ, ಸಮಸ್ಯೆಗೆ ಪರಿಹಾರವೊಂದನ್ನು ಹುಡುಕುವಂತೆ ದೂರಸಂಪರ್ಕ ಸಚಿವಾಲಯಕ್ಕೆ ಸೂಚಿಸುವಂತೆ ಮಾಡಿದೆ.
ತನ್ನ ನಿಯಂತ್ರಣ ಕೊಠಡಿಯಲ್ಲಿ ದಿನವಹಿ ಸರಾಸರಿ 22 ಸಾವಿರ ಕರೆಗಳನ್ನು ಸ್ವೀಕರಿಸುವ ದಿಲ್ಲಿ ಪೊಲೀಸ್, ಜಾಲದಲ್ಲಿನ ಸಮ್ಮರ್ದದ ಕಾರಣದಿಂದ ‘100’ ಸಂಖ್ಯೆಗೆ ಮಾಡಿದ ಹೆಚ್ಚಿನ ಕರೆಗಳು ಸಂಪರ್ಕವಾಗುವುದೇ ಇಲ್ಲವೆಂದು ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ದಿಲ್ಲಿ ಪೊಲೀಸ್, ಡ್ರಾಪ್ ಆದ ಅಥವಾ ಸಮ್ಮರ್ದದಿಂದಾಗಿ ಪೂರ್ಣಗೊಳ್ಳದ ಕರೆಗಳ ಸಂಖ್ಯೆಯನ್ನು ತಿಳಿಸಿಲ್ಲವಾದರೂ, ಅಧಿಕಾರಿಗಳ ಗಮನಕ್ಕೆ ತಂದಿದೆ. ಈ ವಿಷಯ ಭಯಾನಕವಾಗಿದ್ದು, ಶೀಘ್ರ ಪರಿಹಾರದ ಅಗತ್ಯವಿದೆಯೆಂದು ಅದು ಹೇಳಿದೆ.
ಆಕ್ರೋಶಿತ ಕರೆಗಾರರ ಮಾಹಿತಿಯ ಆಧಾರದಲ್ಲಿ, ಈ ಕರೆಗಳಿಗೆ ಉತ್ತರಿಸುವ ಪೊಲೀಸ್ ಸಿಬ್ಬಂದಿಯೂ ಸಮಸ್ಯೆಯ ಆಳವನ್ನು ಗ್ರಹಿಸಿಕೊಂಡಿದ್ದಾರೆ.
ದೂರ ಸಂಪರ್ಕ ಸಚಿವಾಲಯದ ಸಹಾಯದಿಂದ ಈ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆಯೆಂದು ಅಜ್ಞಾತವಾಗುಳಿಯ ಬಯಸಿರುವ ಹಿರಿಯಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸ್ ಸಹಾಯವಾಣಿ ಸಂಖ್ಯೆ 100ರ ಸಮ್ಮರ್ದತೆ ಹಾಗೂ ಹಾಲಿ ಒದಗಿಸಲಾಗಿರುವ ದೂರವಾಣಿ ಮಾರ್ಗಗಳ ಸಂಖ್ಯೆಯ ವಿವರವನ್ನೊದಗಿಸುವಂತೆ ದೂರ ಸಂಪರ್ಕ ಇಲಾಖೆಯು ಎಲ್ಲ ಸರಕಾರಿ ಹಾಗೂ ಖಾಸಗಿ ಸೇವಾ ಪೂರೈಕೆದಾರರಿಗೆ ನಿರ್ದೇಶನ ನೀಡಿದೆ.
ತುರ್ತು ಸಂಖ್ಯೆಗಳಿಗೆ ಬರುವ ಕರೆಗಳನ್ನು ನೇರವಾಗಿ ಸಂಪರ್ಕಿಸಲಾಗುವುದೇ ಅಥವಾ ಮಹಾನಗರ ಟೆಲಿಫೋನ್ ನಿಗಂ ಲಿಮಿಟೆಡ್ (ಎಂಟಿಎನ್‌ಎಲ್) ಮೂಲಕ ಖಚಿತಪಡಿಸುವ ಹೊಣೆಗಾರಿಕೆ ಯಾರದು ಎಂಬುದನ್ನು ಖಚಿತಪಡಿಸುವಂತೆಯೂ ಅವುಗಳಿಗೆ ಸೂಚಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.







