ವರ್ಗಾವಣೆಗೊಂಡ ಐಜಿಪಿ ಅಮೃತ್‌ಪಾಲ್;ಎಸ್.ಪಿ.ಶರಣಪ್ಪರಿಗೆ ಬೀಳ್ಕೊಡುಗೆ ಸಮಾರಂಭ

ಮಂಗಳೂರು.ಮೆ.22; ವರ್ಗಾವಣೆಗೊಂಡ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಮೃತ್ ಪಾಲ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಸ್.ಡಿ.ಶರಣಪ್ಪ ನವರಿಗೆ ಉಡುಪಿ ಹಾಗೂ ದಕ್ಷಿಣ ಜಿಲ್ಲಾ ಪೊಲೀಸ್ ಅಧಿಕಾರಿಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಗರದಲ್ಲಿಂದು ನಡೆಯಿತು. ಸಮಾರಂಭವನ್ನುದ್ದೇಶಿ ಮಾತನಾಡಿದ ಅಮೃತ್‌ಪಾಲ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.ಸಹಕಾರ ನೀಡಿದ ಪೊಲೀಸ್ ಇಲಾಖೆಯ ಹಾಗೂ ಇತರ ಇಲಾಖೆಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಮಂಗಳೂರು ಪೊಲೀಸ್ ಕಮೀಶನರ್ ಚಂದ್ರಶೇಖರ್ ಮಾತನಾಡುತ್ತಾ,ಪೊಲೀಸ್ ಇಲಾಖೆಯ ಬಗ್ಗೆ ಸಾಕಷ್ಟು ಅನುಭವ ಮತ್ತು ಮಾಹಿತಿ ಹೊಂದಿದ್ದ ವ್ಯಕ್ತಿಯಾಗಿದ್ದರು.ಎಸ್.ಪಿ.ಶರಣಪ್ಪ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯಹೊಂದಿದ್ದ ಉತ್ತಮ ಪೊಲೀಸ್ ಅಧಿಕಾರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ.ಶರಣಪ್ಪ ಮಾತನಾಡುತ್ತಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅವಧಿ ತೃಪ್ತಿ ತಂದಿದೆ.ಹಲವು ಸವಾಲುಗಳನ್ನು ಎದುರಿಸಬೇಕಾಗಿತ್ತು.ಸಾರ್ವಜನಿಕರ ಹಾಗೂ ಇಲಾಖೆಯ ಅಧಿಕಾರಿಗಳ ಮತ್ತು ಮೇಲಧಿಕಾರಿಗಳ ಸಹಾಯದಿಂದ ಅವುಗಳನ್ನು ನಿಭಾಯಿಸಲು ಸಾಧ್ಯವಾಯಿತು.ಒಂದು ಪ್ರಕರಣದಲ್ಲಿ ರಾಜ್ಯದ ಉಚ್ಛ ನ್ಯಾಯಾಲಯ ಅಮಾನತು ಆದೇಶ ಹೊರಡಿಸಿದಾಗ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸಿ ನ್ಯಾಯದೊರಕಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಿರುವುದು ಪ್ರಮುಖ ಘಟನೆಯಾಗಿದೆ.ಈ ಪ್ರಕರಣದಲ್ಲಿ ಹಲವು ಹಿರಿಯ ಅಧಿಕಾರಿಗಳು ಸಹಾಯ ನೀಡಿದ್ದಾರೆ.ರಾಜ್ಯ ಸರಕಾರವು ನ್ಯಾಯಾಲಯದಲ್ಲಿ ಪ್ರಕರಣದಾಖಲಿಸಲು ಕಾನೂನು ಬದ್ಧವಾದ ಸಹಕಾರವನ್ನು ನೀಡಿರುವುದು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ನಡೆದ ಘಟನೆಯಾಗಿದೆ ಎಂದು ಎಸ್‌ಪಿ ಶರಣಪ್ಪ ತಿಳಿಸಿದರು.ಅಪರಾಧ ನಡೆಯದಂತೆ ತಡೆಯುವುದು ಪೊಲೀಸರ ಪ್ರಮುಖ ಕೆಲಸ ,ಕೆಲವೊಮ್ಮೆ ಸಮಾಜದಲ್ಲಿ ಅಪರಾಧ ನಡೆದರೆ ಅದನ್ನು ಪತ್ತೆ ಹಚ್ಚುವಿದೆ ಪೊಲೀಸ್ ಇಲಾಖೆಯ ಪ್ರಮುಖ ಕೆಲಸ ಈ ನಿಟ್ಟಿನಲ್ಲಿ ನಾವು ಕಾರ್ಯಕ್ಷಮತೆಯನ್ನು ತೋರಿಸುವುದು ಮುಖ್ಯ ಎಂದು ಶರಣಪ್ಪ ತಿಳಿಸಿದರು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಎಸ್.ಪಿ ಅಣ್ಣಾಮಲೈ ಮಾತನಾಡುತ್ತಾ ,ಐಜಿಪಿ ಅಮೃತ್‌ಪಾಲ್ ಬಹುಮುಖಿ ಜ್ಞಾನವನ್ನು ಹೊಂದಿದ್ದ ಅನುಭವಿ ಪೊಲೀಸ್ ಅಧಿಕಾರಿಯಾಗಿದ್ದರು.ಉತ್ತಮ ಮಾರ್ಗದರ್ಶಕರಾಗಿದ್ದರು ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ,ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತ ಕುಮಾರ್,ಪುತ್ತೂರು ಎಎಸ್‌ಪಿ ,ಕಾರ್ಕಳ ಎಎಸ್‌ಪಿ,ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ,ನಿವೃತ್ತ ಎಸ್.ಪಿ ಹರಿಶ್ಚಂದ್ರ,ಡಾ.ಮಹಾಬಲ ಶೆಟ್ಟಿ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಶುಭಕೋರಿದರು.ಐಜಿಪಿ ಅಮೃತ್‌ಪಾಲ್‌ರ ಪತ್ನಿ ಮಂಜುಳಾ ಅಮೃತ್‌ಪಾಲ್, ಡಾ.ಎಸ್.ಪಿ.ಶರಣಪ್ಪರ ಪತ್ನಿ ಯಾಲಿನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







