Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಐದು ರಾಜ್ಯಗಳ ಫಲಿತಾಂಶವೂ ಎರಡು...

ಐದು ರಾಜ್ಯಗಳ ಫಲಿತಾಂಶವೂ ಎರಡು ರಾಷ್ಟ್ರೀಯ ಪಕ್ಷಗಳೂ!

ಕು.ಸ.ಮಧುಸೂದನ ರಂಗೇನಹಳ್ಳಿಕು.ಸ.ಮಧುಸೂದನ ರಂಗೇನಹಳ್ಳಿ22 May 2016 10:55 PM IST
share
ಐದು ರಾಜ್ಯಗಳ ಫಲಿತಾಂಶವೂ ಎರಡು ರಾಷ್ಟ್ರೀಯ ಪಕ್ಷಗಳೂ!

ಅಂತೂ ಎರಡು ತಿಂಗಳಷ್ಟು ದೀರ್ಘವಾದ ಚುನಾವಣಾ ಪ್ರಕ್ರಿಯೆಗಳು ಮುಗಿದು ಐದೂ ರಾಜ್ಯಗಳ ವಿಧಾನಸಭಾ ಫಲಿತಾಂಶಗಳು ಹೊರಬಂದಿವೆ. ಬಹುತೇಕ ಮಾಧ್ಯಮಗಳು ಇದನ್ನು ಭಾಜಪದ ಮಹಾವಿಜಯವೆಂದೂ, ಕಾಂಗ್ರೆಸ್ ಮುಕ್ತ ಭಾರತದತ್ತ ದೊಡ್ಡ ದಾಪುಗಾಲೆಂದು ವರ್ಣಿಸಿ ತಮ್ಮ ನಿಜ ಬಣ್ಣವನ್ನು ಬಯಲು ಮಾಡಿಕೊಂಡಿವೆ. ಇನ್ನು ಕಾಂಗ್ರೆಸ್ ಪರವಾದ ಕೆಲ ಮಾಧ್ಯಮಗಳು ಈ ಫಲಿತಾಂಶ ಬಹುತೇಕ ನಿರೀಕ್ಷಿತವಾಗಿದ್ದು ಕಾಂಗ್ರೆಸ್ಸನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಗುಟುರು ಹಾಕುತ್ತಿವೆ. ಈ ಎರಡು ವಾದಗಳನ್ನೂ ಪಕ್ಕಕ್ಕಿಟ್ಟು ಸತ್ಯಾನ್ವೇಷಣೆಯ ದೃಷ್ಟಿಯಿಂದ ಫಲಿತಾಂಶವನ್ನು ವಿಶ್ಲೇಷಣೆ ಮಾಡುವುದರಿಂದ ಮಾತ್ರ ನಿಜವನ್ನು ಅರಿಯಬಹುದಾಗಿದೆ. ಹಾಗೆ ನೋಡಿದರೆ ಈ ಫಲಿತಾಂಶಗಳಿಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ಅಷ್ಟೇನು ಸಂಭ್ರಮಿಸುವ ಅಗತ್ಯವಿಲ್ಲ. ಯಾಕೆಂದರೆ ಕಾಂಗ್ರೆಸ್ ತನ್ನ ಪಾಲಿಗೆ ಬಹುಮುಖ್ಯವಾದ ಎರಡು ರಾಜ್ಯಗಳನ್ನು ಕಳೆದುಕೊಂಡಿದ್ದರೆ, ನಾನೀಗಾಗಲೇ ನಿಜವಾದ ರಾಷ್ಟ್ರೀಯ ಪಕ್ಷವಾಗಿದ್ದೇನೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಭಾಜಪ ದಕ್ಷಿಣದ ಮೂರು ರಾಜ್ಯಗಳಿಂದ ಗೆದ್ದಿರುವುದು ಒಂದು ಸ್ಥಾನ ಮಾತ್ರ!. ಇನ್ನು ಅದು ಗೆದ್ದಿರುವ ಅಸ್ಸಾಂ ಸಹ ಅದೇನು ಸ್ವಂತಬಲದಿಂದ ಗೆದ್ದಿಲ್ಲ.

ಬದಲಾಗಿ ಅಸ್ಸಾಂ ಗಣ ಪರಿಷತ್ ಮತ್ತು ಬೋಡೋ ಪೀಪಲ್ಸ್ ಫ್ರಂಟ್ ಎಂಬ ಎರಡು ಪ್ರಾದೇಶಿಕ ಪಕ್ಷಗಳ ಊರುಗೋಲುಗಳ ಸಹಾಯದಿಂದಷ್ಟೇ ಗೆಲ್ಲಲು ಸಾದ್ಯವಾ ಗಿದೆ. ತಾನು ಹಿಂದುತ್ವದ ಯಾವ ಅಜೆಂಡಾವನ್ನು ಬಳಸಿ ರಾಜಕಾರಣ ಮಾಡುವುದಿಲ್ಲ, ಬದಲಿಗೆ ಅಭಿವೃದ್ದಿಯ ವಿಚಾರ ಮತ್ತು ನರೇಂದ್ರ ಮೋದಿಯವರ ವರ್ಚಸ್ಸಿನಿಂದಲೇ ಚುನಾವಣೆಗಳನ್ನು ಗೆಲ್ಲುತ್ತೇನೆ ಎಂದು ಹೇಳಿಕೊಂಡು ಬಂದ ಭಾಜಪ ಈ ಎರಡೂ ಹೇಳಿಕೆಗಳನ್ನು ಸುಳ್ಳಾಗಿಸಿದೆ. ಮೊದಲಿಗೆ ಅಸ್ಸಾಮಿನಲ್ಲಿ ಅದು ನಡೆಸಿದ್ದು ಮತೀಯ ರಾಜಕಾರಣದ ಇನ್ನೊಂದು ಮುಖವನ್ನಷ್ಟೇ!. ಅಸ್ಸಾಮಿನ ಅಭಿವೃದ್ಧಿಯ ಬಗ್ಗೆಯಾಗಲಿ, ಅಲ್ಲಿನ ಚಹಾತೋಟದ ಕಾರ್ಮಿಕರ ಸಮಸ್ಯೆಯನ್ನಾಗಲಿ ಅದು ಚುನಾವಣೆಯ ಮುಖ್ಯ ವಿಷಯವನ್ನಾಗಿಸಲೇ ಇಲ್ಲ. ಬದಲಿಗೆ ಬಾಂಗ್ಲಾ ದೇಶದಿಂದ ಬಂದಿರುವ ಮುಸ್ಲಿಮ್ ಅಕ್ರಮ ವಲಸಿಗರ ಸಮಸ್ಯೆಯನ್ನೇ ಮುಖ್ಯವಿಚಾರವನ್ನಾಗಿ ತನ್ನ ಪ್ರಚಾರದಲ್ಲಿ ಬಳಸಿಕೊಂಡಿತು. ಇದಕ್ಕೆ ತಕ್ಕಂತೆ ಅಸ್ಸಾಂ ಗಣಪರಿಷತ್ತ್ ಮತ್ತು ಬೋಡೋ ಸಂಘಟನೆಗಳೂ ಮೂಲನಿವಾಸಿಗಳ ಹಕ್ಕುಗಳ ಭಾವನಾತ್ಮಕ ವಿಷಯದಿಂದಲೇ ಬದುಕಿರುವಂತಹ ಪಕ್ಷಗಳಾಗಿದ್ದು ಭಾಜಪದ ಮತೀಯ ರಾಜಕಾರಣಕ್ಕೆ ಪಕ್ಕವಾದ್ಯಗಳಾಗಿ ಕಾರ್ಯನಿರ್ವಹಿಸಿದವು.

 ಭಾಜಪದ ವಕ್ತಾರರು ಹೇಳಿಕೊಳ್ಳುವಂತೆ ಪ್ರಧಾನಿ ಮೋದಿಯವರ ವರ್ಚಸ್ಸು ಇಲ್ಲಿ ಕೆಲಸ ಮಾಡಿದ್ದರೆ ಪಶ್ಚಿಮ ಬಂಗಾಳದಲ್ಲಿ ಮತ್ತು ದಕ್ಷಿಣದ ಮೂರೂ ರಾಜ್ಯಗಳಲ್ಲಿಯೂ ಆ ಅಲೆ ಕೆಲಸ ಮಾಡಬೇಕಿತ್ತು. ಆದರೆ ಮೋದಿಯವರ ಅಲೆಯ ಅವಧಿ ಮುಗಿದು ಹೋಗಿದ್ದು, ಇದೀಗ ಭಾಜಪ ಮತ್ತೆ ತನ್ನ ಹಳೆಯ ಮತೀಯವಾದದ ಚಾಳಿಯನ್ನೇ ನಂಬಿಕೊಂಡು ರಾಜಕಾರಣ ಮಾಡುವ ಸ್ಥಿತಿ ಬಂದೊದಗಿದೆ. ಇದಕ್ಕೆ ಸಾಕ್ಷಿಯೆಂದರೆ ಅದು ಕೇರಳದಲ್ಲಿ ಭಾರತ್ ಜನಸೇನಾ ಧರ್ಮ ಎಂಬ ಸಂಘಟನೆಯೊಡನೆ ಚುನಾವಣಾ ಮೈತ್ರಿ ಮಾಡಿಕೊಂಡಿದ್ದು. ಈಳವಾ ಜನಾಂಗದವರು ಸಾಂಪ್ರದಾಯಿಕವಾಗಿ ಎಡರಂಗದ ಬೆಂಬಲಿಗರಾಗಿದ್ದು, ಅವರ ಮತಗಳನ್ನು ಒಡೆದು ತಾನು ಲಾಭಗಳಿಸಿ ಕೊಳ್ಳುವ ಉದ್ದೇಶದಿಂದ ಮಾಡಿಕೊಂಡ ಈ ಮೈತ್ರಿ ಅದಕ್ಕೆ ಯಾವ ಲಾಭವನ್ನೂ ತರಲಿಲ್ಲ. ಜೊತೆಗೆ ಅಲ್ಲಿ ಗೆದ್ದ ಏಕೈಕ ಸ್ಥಾನವೂ ಸಹ ಮಾಜಿ ಸಚಿವ ರಾಜಗೋಪಾಲರ ವೈಯುಕ್ತಿಕ ವರ್ಚಸ್ಸಿನಿಂದ ಸಿಕ್ಕಿದ್ದಾಗಿತ್ತು. ಇದರ ಜೊತೆಗೆ ಈ ಕ್ಷೇತ್ರದಲ್ಲಿ ಯುಡಿಎಫ್ ಭಾಜಪಕ್ಕೆ ಅನುಕೂಲಕರವಾಗುವಂತೆ ನಡೆದುಕೊಂಡಿತೆಂಬ ಸುದ್ದಿಯೂ ಇದೆ.
   ಇನ್ನು ಕಾಂಗ್ರೆಸ್ಸಿನ ವಿಚಾರಕ್ಕೆ ಬಂದರೆ ಅದು ನಿಧಾನವಾಗಿ ತನ್ನ ರಾಷ್ಟ್ರೀಯ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. ಈಗಾಗಲೇ ಉತ್ತರ ಮತ್ತು ಪಶ್ಚಿಮದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಅದು ಇದೀಗ ಪೂರ್ವ ಮತ್ತು ದಕ್ಷಿಣದಲ್ಲಿಯೂ ನೆಲೆ ಕಳೆದುಕೊಳ್ಳುವತ್ತ ಸಾಗುತ್ತಿದೆ.

ಕಾಂಗ್ರೆಸ್ ಇನ್ನೂ ಕೂಡ ಮೈತ್ರಿ ರಾಜಕಾರಣದ ಮಹತ್ವವನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ. ಅಸ್ಸಾಮಿನಲ್ಲಿ ಅದು ಮೌಲಾನ ಬದ್ರುದ್ದೀನ್ ಅಜ್ಮಲ್‌ರವರ ಎಐಯುಡಿಎಫ್ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ತೋರಿಸಿದ ನಿರ್ಲಕ್ಷ್ಯ ಅದು ಅಧಿಕಾರವನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಂದು ನಿಲ್ಲಿಸಿತು. ದೇಶದಲ್ಲೇ ಎರಡನೆ ಅತಿ ಹೆಚ್ಚು ಮುಸ್ಲಿಂ ಮತದಾರರಿರುವ ರಾಜ್ಯವಾದ ಅಸ್ಸಾಮಿನಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಮತಗಳಿಸುವಲ್ಲಿ ವಿಫಲವಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.40.8 ರಷ್ಟು ಮತ ಪಡೆದಿದ್ದರೆ, ಎಐಯುಡಿಎಫ್ ಶೇ.13 ರಷ್ಟು ಮತಗಳನ್ನು ಪಡೆದಿದೆ. ಈ ಎರಡೂ ಪಕ್ಷಗಳ ಮತಗಳನ್ನು ಸೇರಿಸಿದರೆ ಶೇ.53.8 ರಷ್ಟಾಗುತ್ತದೆ. ಭಾಜಪ ಮೈತ್ರಿಕೂಟ ಪಡೆದಿರುವುದು ಶೇ.41ರಷ್ಟು ಮತಗಳನ್ನು ಮಾತ್ರ. ಹೀಗಾಗಿ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೆ, ಸ್ವಲ್ಪ ಮಟ್ಟಿನ ಲೆಕ್ಕಾಚಾರ ವ್ಯತ್ಯಾಸವಾಗಿದ್ದರೂ ಭಾಜಪದ ಸರಿಸಮಾನವಾಗಿ ನಿಂತು ಹೋರಾಡಬಹುದಿತ್ತು. ಇಂತಹ ಸುವರ್ಣಾವಕಾಶವನ್ನು ಕಳೆದುಕೊಂಡ ಕಾಂಗ್ರೆಸ್ ಈಗ ಕೈಚೆಲ್ಲಿ ಕೂತಿದೆ. ಅದೇ ರೀತಿ ಭಿನ್ನಮತೀಯ ನಾಯಕರಾದ ಬಿಶ್ವಾಸ್ ಅವರನ್ನು ಹೈಕಮಾಂಡ್ ಪಕ್ಷದಲ್ಲಿ ಉಳಿಸಿಕೊಂಡಿದ್ದರೆ, ಅವರು ಭಾಜಪ ಸೇರಿ ಕಾಂಗ್ರೆಸ್ಸಿಗೆ ಹೊಡೆತ ನೀಡುವ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ.
  

ಈ ದಿಸೆಯಲ್ಲಿ ಕಾಂಗ್ರೆಸ್ಸಿನ ಹೈಕಮಾಂಡ್ ಸಂಪೂರ್ಣವಾಗಿ ವಿಫಲವಾಗಿದೆ. ರಾಹುಲ್ ಗಾಂಧಿಯವರು ಪ್ರಬುದ್ಧರಂತೆ ಮಾತಾಡಿದರೂ, ಅವರಿಂದ ಪ್ರಬುದ್ಧ ನಿರ್ಧಾರಗಳಾಗಲಿ, ಕ್ರಿಯೆಗಳಾಗಲಿ ಕಂಡುಬರುತ್ತಿಲ್ಲ. ಮೋದಿಯವರ ವರ್ಚಸ್ಸು, ಚಾಣಾಕ್ಷ ತಂತ್ರಗಾರಿಕೆಗಳ ಮತ್ತು ಭಾಜಪದ ರಾಜಕಾರಣದ ನಡೆಗಳ ಮುಂದೆ ರಾಹುಲ್ ಮೋಡಿ ಕೆಲಸ ಮಾಡುತ್ತಿಲ್ಲವೆಂಬುದನ್ನು ಕಾಂಗ್ರೆಸ್ ಇನ್ನಾದರು ಅರ್ಥ ಮಾಡಿಕೊಳ್ಳಬೇಕಿದೆ. ಅದನ್ನು ಬಿಟ್ಟು ಈ ಸೋಲುಗಳಿಗೆ ರಾಹುಲ್ ಕಾರಣರಲ್ಲವೆಂದು ಅವರ ಸುತ್ತ ಭ್ರಮೆಯ ಕೋಟೆ ಕಟ್ಟುವುದನ್ನು ನಿಲ್ಲಿಸಬೇಕು. ರಾಹುಲ್ ಅಷ್ಟೇ ತಮ್ಮ ಸುತ್ತ ನೆರೆದಿರುವ ಅವೇ ಹಳೆಯ ಭಟ್ಟಂಗಿಗಳ ವರ್ತುಲದಿಂದ ಹೊರಬಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಪಕ್ಷವನ್ನು ಕಟ್ಟಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳು ಕಾಂಗ್ರೆಸ್‌ಗೆ ಇನ್ನಷ್ಟು ದುರಂತಮ ಯವಾಗಲಿವೆ. ಒಟ್ಟಿನಲ್ಲಿ ಯಾವುದೇ ಪೂವಾಗ್ರಹಗಳಿಲ್ಲದೆ ನೋಡಿದರೆ ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳೇ ಸಾಕಷ್ಟು ಬಲಶಾಲಿಯಾಗಿರುವಂತೆ ಕಾಣುತ್ತಿವೆ. ಇದನ್ನು ಈ ಪಕ್ಷಗಳು ಅರ್ಥ ಮಾಡಿಕೊಂಡು ಮುನ್ನಡೆಯ ಬೇಕಾಗಿದೆ.

 ತನ್ನ ಮತೀಯ ರಾಜಕಾರಣವನ್ನು ಕೈ ಬಿಟ್ಟು ಜನಪರವಾಗಿ, ಎಲ್ಲ ಸಮುದಾಯದವರ ವಿಶ್ವಾಸವನ್ನು ಗಳಿಸಿಕೊಳ್ಳುವತ್ತ ಭಾಜಪ ಹೆಜ್ಜೆ ಇಡಬೇಕಿದೆ. ಅದೇ ರೀತಿ ಕಾಂಗ್ರೆಸ್ ತಮ್ಮ ಭ್ರಮಾಲೋಕದಿಂದ ಹೊರಬಂದು ಹಳೆಯ ಮುಖಗಳನ್ನು ಕಿತ್ತೊಗೆದು ಯುವಜನತೆಯನ್ನು ಬಳಸಿಕೊಂಡು ಪಕ್ಷವನ್ನು ಮತ್ತೆ ಹೊಸದಾಗಿ ಕಟ್ಟಲು ಪ್ರಯತ್ನಿಸಬೇಕಿದೆ. ಇವೆರಡೂ ಸದ್ಯಕ್ಕೆ ಸಾಧ್ಯವಾಗುತ್ತದೆಯೆಂಬ ನಂಬಿಕೆ ನನಗಿಲ್ಲ. ಯಾಕೆಂದರೆ ಭಾಜಪ ತನ್ನ ಪಥ ಬದಲಿಸಿಕೊಳ್ಳಲು ಸಂಘಪರಿವಾರ ಬಿಡುವುದಿಲ್ಲ. ಅದೇ ರೀತಿ ಯಾವುದೇ ಬದಲಾವಣೆಗೆ ಕಾಂಗ್ರೆಸ್‌ನ ಭಟ್ಟಂಗಿಗಳ ಗುಂಪು ಅವಕಾಶ ಕೊಡುವುದಿಲ್ಲ.
ಹೀಗಾಗಿ ಅಂತಹದೊಂದು ದಿನಕ್ಕಾಗಿ ಕಾಯುತ್ತ ಕೂರುವುದಷ್ಟೇ ನಮ್ಮ ಮುಂದಿರುವ ಆಯ್ಕೆಯೆಂದರೆ ತಪ್ಪಾಗಲಾರದು!
 

share
ಕು.ಸ.ಮಧುಸೂದನ ರಂಗೇನಹಳ್ಳಿ
ಕು.ಸ.ಮಧುಸೂದನ ರಂಗೇನಹಳ್ಳಿ
Next Story
X