ಫ್ರೆಂಚ್ ಓಪನ್ ಟೂರ್ನಿ: ಕ್ವಿಟೋವಾ ಎರಡನೆ ಸುತ್ತಿಗೆ
.jpg)
ಪ್ಯಾರಿಸ್,ಮೇ 22: ಝೆಕ್‌ನ 10ನೆ ಶ್ರೇಯಾಂಕದ ಆಟಗಾರ್ತಿ ಪೆಟ್ರಾ ಕ್ವಿಟೋವಾ ರವಿವಾರ ಇಲ್ಲಿ ಆರಂಭವಾದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಎರಡನೆ ಸುತ್ತಿಗೆ ತಲುಪಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಎರಡು ಬಾರಿಯ ವಿಂಬಲ್ಡನ್ ಚಾಪಿಯನ್ ಕ್ವಿಟೋವಾ ಮಾಂಟೆನೆಗ್ರೊದ ಡಂಕಾ ಕೊವಿನಿಕ್‌ರನ್ನು 6-2, 4-6, 7-5 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.
ಆರು ತಿಂಗಳ ಹಿಂದೆ ಪ್ಯಾರಿಸ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಫ್ರೆಂಚ್ ಓಪನ್ ಟೂರ್ನಿಗೆ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಸ್ಟೇಡಿಯಂನ ಗೇಟ್ ಬಳಿ ಬ್ಯಾಗ್‌ಗಳ ತಪಾಸಣೆ ನಡೆಸುತ್ತಿದ್ದ ಕಾರಣ ಸಾಮಾನ್ಯಕ್ಕಿಂತ ದೊಡ್ಡದಾದ ಸರತಿ ಸಾಲು ಕಂಡು ಬಂದಿತ್ತು.
ಕಿರ್ಗಿಯೊಸ್‌ಗೆ ಜಯ:
ಆಸ್ಟ್ರೇಲಿಯದ ಯುವ ಆಟಗಾರ ನಿಕ್ ಕಿರ್ಗಿಯೊಸ್ ಫ್ರೆಂಚ್ ಓಪನ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಎರಡನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಮೊದಲ ಸೆಟ್‌ನ ಸೋಲಿನಿಂದ ಬೇಗನೆ ಹೊರ ಬಂದಿರುವ ಕಿರ್ಗಿಯೊಸ್ ಇಟಲಿಯ ಮಾರ್ಕೊ ಸೆಕಿನಾಟೊರನ್ನು 7-6(8/6), 7-6(8/6), 6-4 ಸೆಟ್‌ಗಳ ಅಂತರದಿಂದ ಮಣಿಸಿದರು.
17ನೆ ಶ್ರೇಯಾಂಕದ ಕಿರ್ಗಿಯೊಸ್ ಮುಂದಿನ ಸುತ್ತಿನಲ್ಲಿ ಡಚ್‌ನ ಐಗೊರ್ ಸಿಜ್ಲಿಂಗ್‌ರನ್ನು ಎದುರಿಸಲಿದ್ದಾರೆ.







