ಚುಟುಕು ಸುದ್ದಿಗಳು
ಚಿನ್ನಾಭರಣ ಏಜೆಂಟ್ ದರೋಡೆ ಪ್ರಕರಣನ್ನೋರ್ವ ಆರೋಪಿಯ ಬಂಧನಾ
ಕಾಸರಗೋಡು, ಮೇ 22: ಚಿನ್ನಾಭರಣ ಏಜೆಂಟ್ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ವಿಟ್ಲದ ತೌಫೀಕ್(32) ಎಂದು ಗುರುತಿಸಲಾಗಿದೆ.ರ ಜನವರಿ 12ರಂದು ರಾತ್ರಿ ಕಾಸರಗೋಡು ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ತಂಡವೊಂದು ಒಂದೂವರೆ ಕಿಲೋ ಚಿನ್ನಾಭರಣ ಮತ್ತು 4.36 ಲಕ್ಷ ರೂ. ದರೋಡೆ ಮಾಡಿತ್ತು.
ಪ್ರಕರಣದಲ್ಲಿ 11 ಮಂದಿ ಆರೋಪಿಗಳಿದ್ದು, ಈ ಪೈಕಿ ನಾಲ್ವರನ್ನು ಈ ಹಿಂದೆ ಬಂಧಿಸಲಾಗಿದೆ. ಆರು ಮಂದಿ ತಲೆಮರೆಸಿಕೊಂಡಿದ್ದಾರೆ.
ಪೈವಳಿಕೆ ಬಾಯಿಕಟ್ಟೆಯ ಗುಜರಿ ಹಮೀದ್(30), ವಿಟ್ಲ ಉಕ್ಕುಡದ ಅಬ್ದುಲ್ ರಝಾಕ್(23), ಪಿ. ಮನ್ಸೂರ್(32), ಪೈವಳಿಕೆ ಅಂಬಿಕಾನದ ಅಬ್ದುಲ್ ಅಝೀಝ್(26)ನನ್ನು ಈ ಹಿಂದೆ ಬಂಧಿಸಲಾಗಿತ್ತು.ರ್ಧ ಕಿಲೋ ಚಿನ್ನಾಭರಣ ಮತ್ತು ನಗದು ಇನ್ನೂ ವಶಪಡಿಸಿಕೊಳ್ಳಬೇಕಿದೆ.
ಹೊಳೆಗೆ ಬಿದ್ದು ಮಹಿಳೆ ಮೃತ್ಯು
ಸುಬ್ರಹ್ಮಣ್ಯ, ಮೇ 22: ಪಂಜ ಗ್ರಾಮದ ಕೂತ್ಕುಂಜ ಬತ್ತಿಕಟ್ಟೆ ನಿವಾಸಿ ಕೂಲಿಕಾರ್ಮಿಕೆ ದೇವಕಿ(66) ಎಂಬವರು ಹೊಳೆ ದಾಟುವಾಗ ನೀರಿನ ಕಂದಕಕ್ಕೆ ಜಾರಿ ಬಿದ್ದು ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.
ಶನಿವಾರ ಬೆಳಗ್ಗೆ ಕೆಲಸಕ್ಕೆಂದು ತೆರಳಿದ್ದ ಇವರು ಸಂಜೆ ಮನೆಗೆ ವಾಪಸ್ ಬರುತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮನೆಗೆ ಸಾಗುವ ದಾರಿಯಲ್ಲಿ ಹರಿಯುತ್ತಿದ್ದ ಹೊಳೆ ದಾಟುತ್ತಿದ್ದ ಅವರಿಗೆ ನೀರಿದ್ದ ಹೊಂಡದ ಅರಿವು ಇಲ್ಲದೆ ಆಯತಪ್ಪಿ ಆಳವಾದ ನೀರಿನ ಹೊಂಡಕ್ಕೆ ಜಾರಿ ಬಿದ್ದಿದ್ದಾರೆ.
ಬೇಸಿಗೆಯಲ್ಲಿ ನೀರಿನ ಅಭಾವ ಕಂಡು ಬಂದ ಹಿನ್ನಲೆಯಲ್ಲಿ ಹೊಳೆ ನಡುವೆ ನೀರು ಸಂಗ್ರಹಕ್ಕಾಗಿ ಜೆಸಿಬಿ ಯಂತ್ರದ ಮೂಲಕ ಕೆಲ ದಿನಗಳ ಹಿಂದೆ ಹೊಂಡ ತೆಗೆದಿಡಲಾಗಿತ್ತು. ಅದನ್ನು ಹಾಗೆಯೆ ಬಿಡಲಾಗಿತ್ತು. ಹೊಳೆಯ ಮೇಲ್ಭಾಗದಲ್ಲಿದ್ದ ಅಣೆಕಟ್ಟಿನ ನೀರನ್ನು ಏಕಾಏಕಿ ಕೆಳಗೆ ಹರಿಯ ಬಿಟ್ಟಿದ್ದರಿಂದ ಹೊಂಡದಲ್ಲಿ ನೀರು ತುಂಬಿತ್ತು. ನೀರಿನ ಪ್ರಮಾಣದ ಬಗ್ಗೆ ಅವರಿಗೆ ಗಮನಕ್ಕೆ ಬಾರದೆ ಇರುವುದು ಘಟನೆ ನಡೆಯಲು ಕಾರಣ ಎನ್ನಲಾಗಿದೆ. ರವಿವಾರ ಬೆಳಗ್ಗೆ ಮಹಿಳೆಯೊಬ್ಬರು ಹೊಳೆ ಬದಿಗೆ ತೆರಳಿದ್ದ ವೇಳೆ ಮಹಿಳೆಯ ಮೃತದೇಹ ಇರುವುದು ಅವರ ಗಮನಕ್ಕೆ ಬಂದಿದೆ. ಘಟನೆ ಸಂಬಂಧ ಸುಬ್ರಹಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.
ಅಕ್ರಮ ಮದ್ಯ ಮಾರಾಟ: ಇಬ್ಬರ ಸೆರೆ
ಅಮಾಸೆಬೈಲು, ಮೇ 22: ವಿವಿಧೆಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅಮಾಸೆಬೈಲು ಪೊಲೀಸರು ಮೇ 21ರಂದು ಬಂಧಿಸಿದ್ದಾರೆ.
ಶೇಡಿಮನೆ ಗ್ರಾಮದ ಕೆಸ್ಕಾರು ಜೆಡ್ಡು ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳೀಯ ನಿವಾಸಿ ಉದಯ ಪೂಜಾರಿ(49) ಎಂಬವರನ್ನು ಬಂಧಿಸಿ 1,167ರೂ. ವೌಲ್ಯದ ಸೊತ್ತು ಹಾಗೂ ನಗದು ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಮಾಯಾಬಝಾರ್ ಜಂಕ್ಷನ್ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರ್ಡಿ ಶಾಂತ್ರಬೆಟ್ಟುವಿನ ನಾರಾಯಣ ಪೂಜಾರಿ(53) ಎಂಬವರನ್ನು ಬಂಧಿಸಿ 1,115 ರೂ. ವೌಲ್ಯದ ಸೊತ್ತು ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆಲೋಶಿಪ್: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಪಿ, ಮೇ 20: ಕರ್ನಾಟಕ ಶಿಲ್ಪಕಲಾ ಕ್ಷೇತ್ರದಲ್ಲಿ ದುಡಿಯುತ್ತಿರುವ ವಿದ್ವಾಂಸರಿಗೆ ಒತ್ತಾಸೆ ನೀಡುವ ದೃಷ್ಟಿಯಿಂದ ಕರ್ನಾಟಕ ಶಿಲ್ಪಕಲಾ ಅಕಾಡಮಿಯು 2015-16ನೆ ಸಾಲಿನ ಒಂದು ಲಕ್ಷ ರೂಪಾಯಿಗಳ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಫೆಲೋಶಿಪ್ ನೀಡಲು ನಿರ್ಧರಿಸಿದ್ದು, ಫೆಲೋಶಿಪ್‌ಗಳನ್ನು ಬಯಸುವವರು ಪಾರಂಪರಿಕ ಶಾಸ್ತ್ರೀಯ/ಸಮಕಾಲೀನ, ಜಾನಪದ, ಬುಡಕಟ್ಟು ಶಿಲ್ಪಕಲೆಗೆ ಸಂಬಂಧಿಸಿರುವ ವಿಷಯದಲ್ಲಿ ಆಸಕ್ತರಾಗಿರುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಬಗ್ಗೆ ಸಾಕಷ್ಟು ಅರ್ಜಿಗಳು ಬಾರದೇ ಇರುವುದರಿಂದ ಅರ್ಜಿಗಳನ್ನು ಸ್ವೀಕರಿಸುವ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ. ಅಭ್ಯರ್ಥಿಗಳು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಉಚಿತವಾಗಿ ಅರ್ಜಿಗಳನ್ನು ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಕಳುಹಿಸಿಕೊಡಲು ಮೇ 31 ಕೊನೆಯ ದಿನವಾಗಿದೆ ಎಂದು ಪ್ರಕಟನೆೆ ತಿಳಿಸಿದೆ.
ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ
ಬ್ರಹ್ಮಾವರ, ಮೇ 22: ವೈಯಕ್ತಿಕ ಕಾರಣದಿಂದ ಮನನೊಂದ ಚೀರು ಶೆಡ್ತಿ(75) ಎಂಬವರು ಮೇ 20ರಂದು ರಾತ್ರಿ ವೇಳೆ ಮನೆಯ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ುಂದಾಪುರ: ಬಾವಿಗೆ ರಿಂಗ್ ಹಾಕುವ ಕೆಲಸ ಮಾಡುತ್ತಿದ್ದ ಅನೂಬ್ (28) ಎಂಬವರು ಮೇ 21ರಂದು ಕಾಳಾವರ ಗ್ರಾಮದ ವಿಜಯ ಶೆಟ್ಟಿ ಎಂಬವರ ಗೇರುಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ: ವೈಯಕ್ತಿಕ ಕಾರಣದಿಂದ ಮನನೊಂದ ದಿವ್ಯಾ(22) ಎಂಬವರು ಮೇ 21ರಂದು ವಾಸದ ಬಾಡಿಗೆ ಮನೆಯ ಚಾವಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ







