ಹೊಸತನವಿಲ್ಲದ ಕಲೆ ಉಳಿಯಲು ಸಾಧ್ಯವಿಲ್ಲ: ಹೊಸ್ತೋಟು
ಉಡುಪಿ, ಮೇ 22: ಹೊಸತನದ ಆಲೋಚನೆ ಇಲ್ಲದಿದ್ದರೆ ಕಲೆಯನ್ನು ಉಳಿಸಿ ಬೆಳೆಸಲು ಸಾಧ್ಯವಿಲ್ಲ. ಆಧುನಿಕತೆಯ ಆಡಂಬರದಲ್ಲಿ ಕಲೆ ಮರೆಯಾಗಿ ಹೋಗದಂತೆ ಪರಂಪರೆಯನ್ನು ಉಳಿಸಿಕೊಂಡು ಹೊಸ ಆಲೋಚನೆಗೆ ಅವಕಾಶ ನೀಡಬೇಕು ಎಂದು ಹಿರಿಯ ಯಕ್ಷಗಾನ ಕಲಾವಿದ ಹೋಸ್ತೋಟ ಮಂಜುನಾಥ ಭಾಗವತ ಹೇಳಿದ್ದಾರೆ.ುಪಿ ಯಕ್ಷಗಾನ ಕಲಾರಂಗದ ವತಿಯಿಂದ ರವಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾದ ಮಂಟಪಾಭಿನಂದನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಂಟಪ ಉಪಾಧ್ಯಾರು ಯಕ್ಷಗಾನದಲ್ಲಿ ಹೊಸತನದ ಆಲೋಚನೆಯನ್ನು ಮಾಡಿದರು. ಜನರು ಕಲೆಯತ್ತ ಆಕ ರ್ಷಿಸುವಂತೆ ವಿಭಿನ್ನ ರೀತಿಯ ಪ್ರಯೋಗಗಳನ್ನು ಮಾಡಿ ಯಶಸ್ವಿಯಾದರು. ಏಕವ್ಯಕ್ತಿ ಪ್ರದರ್ಶನದ ಮೂಲಕ ಯಕ್ಷಗಾನದಲ್ಲಿ ಹೊಸತನಕ್ಕೆ ಚಾಲನೆ ನೀಡಿದ ಕೀರ್ತಿ ಮಂಟಪ ಉಪಾಧ್ಯಾರಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು.ತಿಥಿಯಾಗಿಎಚ್.ಶ್ರೀಧರ್ ಹಂದೆ ಮಾತನಾಡಿದರು. ಮಂಟಪ ಪ್ರಭಾಕರ ಉಪಾಧ್ಯ ಉಪಸ್ಥಿತರಿದ್ದರು.
Next Story





