ಕೇರಳ: ಹಿರಿಯ ಸಿಪಿಎಂ ನಾಯಕ ಅನಿರುದ್ಧನ್ ನಿಧನ

ತಿರುವನಂತಪುರಂ, ಮೇ 23: ಹಿರಿಯ ಸಿಪಿಎಂ ನಾಯಕ, ಮಾಜಿ ಶಾಸಕ ಕೆ. ಅನಿರುದ್ಧನ್(91) ನಿಧನರಾಗಿದ್ದಾರೆ. ರವಿವಾರ ರಾತ್ರೆ 11.55ಕ್ಕೆ ವಯುದಕ್ಕಾಡ್ ಗ್ರೇಸ್ ಕಾಟೇಜ್‌ನಲ್ಲಿ ಅವರು ನಿಧನರಾದರು.
ವಯೋಸಹಜ ಅಸೌಖ್ಯದಿಂದಾಗಿ ಅವರು ಬಹುಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. 1963ರಲ್ಲಿ ಎರಡನೆ ವಿಧಾನಸಭೆಯ ಸದಸ್ಯರಾಗಿದ್ದ ಅವರು ಟ್ರೇಡ್ ಯೂನಿಯನ್ ಕಾರ್ಯಕರ್ತರಾಗಿ ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಸರಕಾರಿವಿಮೆನ್ಸ್ ಕಾಲೇಜ್‌ನ ನಿವೃತ್ತ ಅಧ್ಯಾಪಕಿ ಫ್ರೊ.ಕೆ.ಸುಧರ್ಮಾ ಅವರ ಪತ್ನಿಯಾಗಿದ್ದಾರೆ. ಆಟ್ಟಿಂಗಲ್ ಎಂಪಿ ಡಾ. ಸಂಪತ್, ಎ. ಕಸ್ತೂರಿ(ಇಂಜಿನಿಯರ್) ಮಕ್ಕಳು. ಲಿಸಿ ಸಂಪತ್, ಲಲಿತಾ ಕಸ್ತೂರಿ ಸೊಸೆಯಂದಿರು.
Next Story





