Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕ್ಷಮೆ ಯಾಚಿಸಿದ ವಿಮಾನಯಾನ ಸಂಸ್ಥೆ

ಕ್ಷಮೆ ಯಾಚಿಸಿದ ವಿಮಾನಯಾನ ಸಂಸ್ಥೆ

ನಿಗದಿತ ಯಾನ ದಿಢೀರ್ ರದ್ದು; ಕಾನೂನು ಸಮರಕ್ಕಿಳಿದ ಬಂಟ್ವಾಳದ ಯುವಕ

ವಾರ್ತಾಭಾರತಿವಾರ್ತಾಭಾರತಿ23 May 2016 11:40 AM IST
share
ಕ್ಷಮೆ ಯಾಚಿಸಿದ ವಿಮಾನಯಾನ ಸಂಸ್ಥೆ

ಮಂಗಳೂರು, ಮೇ 23: ಬೆಂಗಳೂರು - ಮಂಗಳೂರು ವಿಮಾನಯಾನವನ್ನು ದಿಢೀರ್ ರದ್ದುಗೊಳಿಸಿದ್ದಕ್ಕೆ ಬೆಂಗಳೂರಿನ ಖಾಸಗಿ ವಿಮಾನ ಕಂಪೆನಿಯೊಂದು ಬಂಟ್ವಾಳ ಮೂಲದ ಯುವಕನಲ್ಲಿ ಪತ್ರ ಬರೆದು ಕ್ಷಮೆ ಯಾಚಿಸಿದೆ ಎಂದು ವಿಜಯಕರ್ನಾಟಕ ವರದಿ ಮಾಡಿದೆ. 

ಕಂಪೆನಿ ಬರೆದ ಕ್ಷಮೆಯಾಚನೆ ಪತ್ರದಿಂದ ತೃಪ್ತಿಪಟ್ಟುಕೊಳ್ಳದ ಪ್ರಯಾಣಿಕ, ಇದೀಗ ತನಗಾದ ಆರ್ಥಿಕ ನಷ್ಟವನ್ನು ಪ್ರಶ್ನಿಸಿ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದ್ದಾರೆ. ತಾಂತ್ರಿಕ ಕಾರಣದಿಂದಾಗಿ ವಿಮಾನ ಯಾನ ರದ್ದುಗೊಂಡಿರುವುದಾಗಿ ವಿಮಾನ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ತಿಳಿಸಿದ್ದಾರೆ. 

ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಆಶೀಕ್ ಕುಕ್ಕಾಜೆ ಎಂಬವರು ಮಾ. 27ರಂದು ಬೆಂಗಳೂರಿನಿಂದ ಮಂಗಳೂರು ಪ್ರಯಾಣಿಸಲು ಬೆಂಗಳೂರು ಮೂಲದ ಕಂಪೆನಿಯಿಂದ ಮಾ. 24 ರಂದು ಟಿಕೆಟ್ ಬುಕ್ಕಿಂಗ್ ಮಾಡಿದ್ದರು. ಮಾ. 27ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿದ ಆಶೀಕ್ ಅವರಿಗೆ ವಿಮಾನ ದಿಢೀರ್ ರದ್ದುಗೊಂಡಿರುವುದಾಗಿ ಕಂಪೆನಿ ಸಿಬ್ಬಂದಿ ಸೂಚಿಸಿದ್ದರು. ಕಂಪೆನಿಯ ಈ ನಿಲುವಿನಿಂದಾಗಿ ವೃದ್ಧರು, ಗರ್ಭಿಣಿಯರು, ಮಕ್ಕಳು ಕೂಡ ಸಂಕಷ್ಟಕ್ಕೆ ಸಿಲುಕಿದರು. ಪರ್ಯಾಯ ವಿಮಾನ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಲು ವಿನಂತಿಸಿದರೂ, ಕಂಪೆನಿ ಸಿಬ್ಬಂದಿ ಸಿರಾಕರಿಸಿದ್ದರು. ವಿಮಾನ ಪ್ರಯಾಣ ದಿಢೀರ್ ರದ್ದುಗೊಂಡ ಹಿನ್ನೆಲೆಯಲ್ಲಿ ಪರದಾಟ ನಡೆಸಿದ ಪ್ರಯಾಣಿಕರು ಏರ್ ಪೋರ್ಟ್ ನಿಂದ ವಾಪಸ್ ಬರಬೇಕಾಯಿತು ಎಂದು ಆಶೀಕ್ ಕುಕ್ಕಾಜೆ, ಕಂಪೆನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 

ಪ್ರಯಾಣಿಕರ ಈ ಸಮಸ್ಯೆಗೆ ಬಹುತೇಕ ಕಂಪೆನಿಗಳು ಹೀಗೆಯೇ ವರ್ತಿಸುತ್ತಿವೆ. ಪ್ರಯಾಣಿಕರ ಮೇಲೆ ಕಟ್ಟೆಚ್ಚರಗಳಂಥ ನಿಯಮಗಳನ್ನು ವಿಧಿಸುತ್ತಿರುವ ವಿಮಾನ ಕಂಪೆನಿಗಳಿಗೆ ತಮ್ಮ ಎಡವಟ್ಟುಗಳ ಅರಿವು ಆಗದೇ ಇರುವುದು ದುರಂತವಲದಲವೇ ಎಂದು ಆಶೀಕ್ ಕುಕ್ಕಾಜೆ ಪ್ರಶ್ನಿಸಿದ್ದಾರೆ. ತಾಂತ್ರಿಕ ದೋಷಗಳಿದ್ದಲ್ಲಿ ಪ್ರಯಾಣಿಕರಿಗೆ ಕರೆ ಮಾಡಿ ಪೂರ್ವ ಮಾಹಿತಿ ನೀಡಬೇಕು. ವಿಮಾನ ಪ್ರಯಾಣವನ್ನು ಯಾವುದೇ ಮುನ್ಸೂಚನೆ ಇಲ್ಲದೆ, ದಿಢೀರ್ ರದ್ದುಗೊಳಿಸಿರುವುದು ಸರಿಯೇ ಎಂದು ಆಶೀಕ್ ಪ್ರಶ್ನಿಸಿದ್ದಾರೆ. 

ಆಶೀಕ್ ಬರೆದಿರುವ ಪತ್ರಕ್ಕೆ ಉತ್ತರಿಸಿದ ಕಂಪೆನಿ ಅಧಿಕಾರಿಗಳು, ತಾಂತ್ರಿಕ ಕಾರಣದಿಂದಾಗಿ ವಿಮಾನ ಪ್ರಯಾಣವನ್ನು ರದ್ದುಗೊಳಿಸಲಾಗಿದ್ದು, ಈ ಸಮಸ್ಯೆ ಕಂಪೆನಿಯ ನಿಯಂತ್ರಣ ತಪ್ಪಿದೆ. ಈ ಬಗ್ಗೆ ಸಂಬಂಧಿತ ಟ್ರಾವೆಲ್ ಏಜೆಂಟರಿಗೆ ಇ-ಮೇಲ್ ಸಂದೇಶ ಕಳುಹಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಯಾವುದೇ ಅವಘಡದಿಂದಾಗಿ ವಿಮಾನ ಯಾನ ರದ್ದುಗೊಳ್ಳುತ್ತದೆ. ಇದಕ್ಕೆ ಯಾವುದೇ ಪ್ರಯಾಣಿಕರು ತಕರಾರು ಮಾಡುವುದಿಲ್ಲ. ತಂತ್ರಾಂಶ ಮುಂದುವರಿದ ಈ ದಿನಗಳಲ್ಲಿ ವಿಮಾನ ಪ್ರಯಾಣಿಕರಿಗೆ ವೈಯಕ್ತಿಕ ಸಂದೇಶ ಕಳುಹಿಸಲು ಅಸಾಧ್ಯವಾದ ಮಾತಲ್ಲ. ಈ ವ್ಯವಸ್ಥೆಯನ್ನು ವಿಮಾನ ಕಂಪೆನಿಗಳು ಅನುಸರಿಸಲಿ ಎನ್ನುವುದನ್ನು ಆಗ್ರಹಿಸಿ ನ್ಯಾಯಾಲಯಕ್ಕೆ ಮೊರೆ ಹೋಗುವುದಾಗಿ ಆಶೀಕ್ ತಿಳಿಸಿದ್ದಾರೆ. 

ವಿಮಾನ ಪ್ರಯಾಣಿಕರು 2 ತಾಸು ಮೊದಲೇ ಏರ್ ಪೋರ್ಟ್ ತಲುಪುತ್ತಾರೆ. ವಿಮಾನ ಕಂಪೆನಿಯ ನಿಯಮಗಳನ್ನು ಪ್ರಯಾಣಿಕರು ಉಲ್ಲಂಘಿಸಿದರೆ, ಅದಕ್ಕೆ ಪ್ರಯಾಣಿಕರನ್ನು ಹೊಣೆ ಮಾಡಲಾಗುತ್ತದೆ. ವಿಮಾನ ಪ್ರಯಾಣ ದಿಢೀರ್ ರದ್ದುಗೊಂಡರೆ ಅದಕ್ಕೂ ಪ್ರಯಾಣಿಕರನೇ ಹೊಣೆ ಮಾಡುವುದು ಸರಿಯೇ ? ಇದು ಒಂದಿಬ್ಬರ ಸಮಸ್ಯೆಯಲ್ಲ, ಸಾವಿರಾರು ಮಂದಿ ಎದುರಿಸುತ್ತಿರುವ ಸಮಸ್ಯೆ. ಈ ಬಗ್ಗೆ ಕೇಂದ್ರ ಸರಕಾರ ಕ್ರಮ ಜರುಗಿಸಬೇಕು.

 ಆಶೀಕ್ ಕುಕ್ಕಾಜೆ, ವಿಮಾನ ಪ್ರಯಾಣಿಕ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X