ದೇವರ ಹೆಸರಲ್ಲಿ ಅಮ್ಮ ಪ್ರಮಾಣ
6ನೆ ಬಾರಿ ಜಯ ಲಲಿತಾ ತಮಿಳುನಾಡಿನ ಮುಖ್ಯ ಮಂತ್ರಿ

ಚೆನ್ನೈ, ಮೇ 23: ತಮಿಳುನಾಡಿನ ಮುಖ್ಯಮುಂತ್ರಿಯಾಗಿ ಜೆ. ಜಯ ಲಲಿತಾ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಸತತ ಎರಡನೆ ಬಾರಿ ತಮಿಳುನಾಡಿನ ಮುಖ್ಯ ಮಂತ್ರಿಯಾಗಿರುವ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರಿಗೆ ಚೆನ್ನೈನ ಮದ್ರಾಸ್ ವಿವಿ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಕೆ.ರೋಸಯ್ಯ ಪ್ರಮಾಣ ವಚನ ಬೋಧಿಸಿದರು.
ಒಟ್ಟು ಆರನೆ ಬಾರಿ ತಮಿಳುನಾಡು ಮುಖ್ಯ ಮಂತ್ರಿ ಸ್ಥಾನವನ್ನು ವಹಿಸಿಕೊಂಡಿರುವ ಜಯ ಲಲಿತಾ ಅವರು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ತಮಿಳುನಾಡು ವಿಧಾನ ಸಭೆಯ 18ನೇ ಮುಖ್ಯಮಂತ್ರಿಯಾಗಿದ್ದಾರೆ
ಅಧಿಕಾರ ವಹಿಸಿಕೊಂಡಿರುವ ಜಯ ಲಲಿತಾ ಅವರು ತಮ್ಮ ಹಿಂದಿನ ಸಚಿವ ಸಂಪುಟದಲ್ಲಿ ಸೇವೆ ಸಲ್ಲಿಸಿದ್ದ ಬಹುತೇಕ ಸಚಿವರುಗಳನ್ನು ಸಚಿವ ಸಂಪುಟದಲ್ಲಿ ಉಳಿಸಿಕೊಂಡಿದ್ದಾರೆ. ಜಯಲಲಿತಾ ಅವರೊಂದಿಗೆ ಸಚಿವ ಸಂಪುಟದ ಒಟ್ಟು 28 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಸಚಿವ ಸಂಪುಟದಲ್ಲಿ ಮುಖ್ಯ ಮಂತ್ರಿ ಜಯಲಲಿತಾ ಸೇರಿದಂತೆ ನಾಲ್ವರು ಮಹಿಳೆಯರು ಇದ್ದಾರೆ.7 ಮಂದಿ ಹೊಸಬರಿಗೆ ಅವಕಾಶ ನೀಡಲಾಗಿದೆ.
ಜಯ ಲಲಿತಾ ನೇತೃತ್ವದ ಎಐಎಡಿಎಂಕೆ ಇತ್ತೀಚಿಗಷ್ಟೇ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 232 ಸ್ಥಾನಗಳ ಪೈಕಿ 134 ಸ್ಥಾನಗಳನ್ನು ಪಡೆಯುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿತ್ತು







