ಬೊಲೆರೊ ಕಮರಿಗೆ: ಪಾದಚಾರಿ ಅಪಾಯದಿಂದ ಪಾರು
ಕಡಬ, ಮೇ.23. ಬೊಲೆರೊವೊಂದು ಪಾದಚಾರಿಯೋರ್ವರಿಗೆ ಢಿಕ್ಕಿ ಹೊಡೆದು ಕಮರಿಗೆ ಬಿದ್ದ ಘಟನೆ ಸೋಮವಾರ ಮರ್ಧಾಳದಲ್ಲಿ ನಡೆದಿದೆ.
ಬಿಳಿನೆಲೆಯಿಂದ ಕಡಬ ಕಡೆಗೆ ತೆರಳುತ್ತಿದ್ದ ಬೊಲೆರೊ ವಾಹನವು ಮರ್ಧಾಳ ಹಾಲು ಸೊಸೈಟಿ ಸಮೀಪ ವಾಹನವೊಂದಕ್ಕೆ ಸೈಡ್ ಕೊಡುವ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿನ ನಾಮಫಲಕಕ್ಕೆ ಢಿಕ್ಕಿ ಹೊಡೆದು ಚರಂಡಿಗೆ ಬಿದ್ದಿದೆ. ಆ ಸಂದರ್ಭದಲ್ಲಿ ಪಾದಚಾರಿಯೋರ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
Next Story