ಬೇಸಗೆಯಲ್ಲಿ ಕೂದಲಿನ ಸಮಸ್ಯೆಗೆ ಆರು ಸಲಹೆಗಳು
ಬೇಸಗೆಯಲ್ಲಿ ಕೂದಲು ಒಣಗುವುದು ಅಥವಾ ಬೆವರಿನಿಂದ ತೇವವಾಗುವುದನ್ನು ತಪ್ಪಿಸಲು ಹಲವು ದಾರಿಗಳಿವೆ. ಇಲ್ಲಿ ಅವುಗಳಲ್ಲಿ ಕೆಲವನ್ನು ಕೊಡಲಾಗಿದೆ.
►ಜಡೆ ಹೆಣೆಯಿರಿ: ಗೋಜಲಾಗಿ ಜಡೆ ಹೆಣೆಯುವುರಿಂದ ನಿಮ್ಮ ಕೂದಲನ್ನು ನಿಯಂತ್ರಣದಲ್ಲಿರಿಸಲು ನೆರವಾಗಲಿದೆ. ಬೇಸಗೆಯ ಶಾಖ ಮತ್ತು ತೇವಾಂಶವು ಕೂದಲು ನೀಟಾಗಿರುವುದನ್ನು ಬಯಸುತ್ತದೆ. ಇದು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಕೂದಲಿನ ಪ್ರಮಾಣವನ್ನೂ ಕಡಿಮೆ ಮಾಡುತ್ತದೆ.
►ಮುಚ್ಚಿಕೊಳ್ಳಿ: ಮತ್ತೊಂದು ಬೇಸಗೆಯ ಕೂದಲಿನ ರಕ್ಷಣೆ ಸಲಹೆಯೆಂದರೆ, ಸ್ಕಾರ್ಫ್ ಅಥವಾ ಟೋಪಿ ಧರಿಸಿ ಸೂರ್ಯನಿಂದ ತಲೆಯನ್ನು ಮುಚ್ಚಿಕೊಳ್ಳಿ. ಇದು ನಿಮ್ಮ ಕೂದಲನ್ನು ಅತಿನೇರಳೆ ಕಿರಣಗಳಿಂದ ರಕ್ಷಿಸುವ ಜೊತೆಗೆ ತೇವಾಂಶವನ್ನೂ ಉಳಿಸುತ್ತದೆ. ಅಲ್ಲದೆ ಇವು ನಿಮ್ಮ ಫ್ಯಾಶನನ್ನು ವೃದ್ಧಿಸಿ ಕೂದಲನ್ನು ರಕ್ಷಿಸುತ್ತದೆ.
►ಪದೇ ಪದೇ ಕೂದಲು ತೊಳೆಯಬೇಡಿ: ಪದೇ ಪದೇ ಕೂದಲು ತೊಳೆಯುವುದರಿಂದ ಹೆಚ್ಚು ಎಣ್ಣೆ ಉತ್ಪತ್ತಿಯಾಗಿ ಮತ್ತು ಹೆಚ್ಚು ಸಲ ಕೂದಲು ತೊಳೆಯುವ ಅಗತ್ಯ ಬರಬಹುದು. ಹೆಚ್ಚುವರಿ ಎಣ್ಣೆ ಹೋಗಲು ಕೂದಲನ್ನು ಸುಮ್ಮನೆ ನೀರಲ್ಲಿ ಅದ್ದಿಕೊಳ್ಳಿ. ಹತ್ತಿ ಉಂಡೆಯನ್ನು ನೀರಿನಲ್ಲಿ ಮುಳುಗಿಸಿ ಹೆಚ್ಚುವರಿ ಎಣ್ಣೆ ತೆಗೆಯುವುದೂ ಉತ್ತಮ ಹಾದಿ.
►ಈಜಿದ ಮೇಲೆ ಸ್ವಚ್ಛ ನೀರಿನ ಸ್ಪ್ರೇ: ಸ್ವಚ್ಛ ನೀರಿನಲ್ಲೇ ಈಜಿದರೂ ಕೊಳದಲ್ಲಿದ್ದ ರಾಸಾಯನಿಕಗಳು ಮತ್ತು ಇತರ ಲವಣಗಳು ಕೂದಲಿಗೆ ಸಮಸ್ಯೆ ಒಡ್ಡಬಹುದು. ಹೀಗಾಗಿ ಈಜಿದ ಮೇಲೆ ಕೂದಲಿಗೆ ಸ್ವಚ್ಛ ನೀರನ್ನು ಚಿಮುಕಿಸಿಕೊಳ್ಳಲು ಮರೆಯಬೇಡಿ.
►ಬ್ರಷ್ ಬದಲು ಅಗಲ ಬಾಚಣಿಗೆ: ಕೂದಲು ಸಿಕ್ಕಾಗದೆ ಇರುವಾಗ ಬಾಚಲು ಬ್ರಷ್ ಬದಲಾಗಿ ದೂರ ದೂರ ಹಲ್ಲಿರುವ ಬಾಚಣಿಗೆ ಬಳಸಿ. ಕೂದಲು ತೇವವಾಗಿದ್ದಾಗ ಎಳೆದು ಸಿಕ್ಕುಬಿಡಿಸಬೇಡಿ.
►ಬಿಸಿ ಎಣ್ಣೆಯಿಂದ ಮಸಾಜ್ ಮಾಡಿ: ತೆಂಗಿನೆಣ್ಣೆ, ಆಲಿವ್ ಅಥವಾ ಅವಕಾಡೋ ಎಣ್ಣೆಗಳಿಂದ ಕೂದಲನ್ನು ಮಸಾಜ್ ಮಾಡಿ. ಎಣ್ಣೆ ಕೂದಲಿನ ಬುಡದವರೆಗೂ ಹೋಗಿ ಕಂಡೀಷನಿಂಗ್ ಮಾಡಲಿ. ನಂತರ ಕೂದಲು ಮಾಯಿಶ್ಚರೈಸ್ ಆಗಬೇಕೇ ವಿನಾ ಜಾರಬಾರದು.
http://www.indiatvnews.com/