ತೆರಿಗೆ ಮಾಹಿತಿ ಕಾರ್ಯಾಗಾರ
ಭಟ್ಕಳ, ಮೇ 23: ಗೌಡ ಸಾರಸ್ವತ ಸಮಾಜ ಕಲ್ಯಾಣ ಸೇವಾ ಸಮಿತಿಯು ಭಟ್ಕಳ ತಾಲೂಕು ಸ್ವ ಸಮಾಜ ವ್ಯಾಪಾರಸ್ಥರಿಗಾಗಿ ತೆರಿಗೆ ಮಾಹಿತಿ ಕಾರ್ಯಾಗಾರವನ್ನು ಭಟ್ಕಳದ ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಸಭಾಗೃಹದಲ್ಲಿ ಹಮ್ಮಿಕೊಂಡಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಸಿ.ಎ. ನಂದಗೋಪಾಲ ಶೆಣೈ, ಸಿ.ಎ ಕಾಲಿನ್ ರೊಡ್ರಿಗಸ್ ಇವರು ವ್ಯಾಟ್, ಟಿ.ಡಿ.ಎಸ್, ಹೊಸ ತೆರಿಗೆ ಜಿ.ಎಸ್.ಟಿ ಹಾಗೂ ಅತಿಮುಖ್ಯವಾಗಿ ತೆರಿಗೆ ತುಂಬುವುದರಿಂದ ವ್ಯಾಪಾರಸ್ಥರಿಗಾಗುವ ಲಾಭದ ಬಗ್ಗೆ ಸಚಿತ್ರ ಸಹಿತ ವಿವರಣೆ ನೀಡಿದರು. ಪ್ರಾಮಾಣಿಕವಾಗಿ ತೆರಿಗೆಯನ್ನು ಪಾವತಿಸುವುದರಿಂದ ಭಾರತ ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು. ಭಟ್ಕಳ ತಾಲೂಕಿನ ನೂರಾರು ವ್ಯಾಪಾರಸ್ಥರು ಹಾಜರಿದ್ದು, ತೆರಿಗೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಉದ್ಯಮಿಗಳಾದ ರಾಜೇಶ್ ನಾಯಕ, ಶ್ರೀನಿವಾಸ ಕಾಮತ್, ಉಮೇಶ್‌ಕಾಮತ್, ಪ್ರಮೋದ್ ಬಡಾಳ ಉಪಸ್ಥಿತರಿದ್ದರು. ಮಂಜುನಾಥ ಪ್ರಭು ನಿರೂಪಿಸಿದರು. ಅಧ್ಯಕ್ಷ ಕಿರಣ್ ಶಾನುಬಾಗ್ ಸ್ವಾಗತಿಸಿದರು, ಶ್ರೀನಾಥ ಪೈ ವಂದಿಸಿದರು.
Next Story





