ಆದಾಯದಲ್ಲಿ ಉಳಿತಾಯ ಮುಖ್ಯ: ಮಧು ಬಂಗಾರಪ್ಪ

ಸೊರಬ, ಮೇ. 23: ಆದಾಯದ ಸ್ವಲ್ಪಭಾಗವನ್ನು ಉಳಿತಾಯ ಮಾಡುವತ್ತ ಜನತೆ ಗಮನ ಹರಿಸಿದಾಗ ಮುಂದಿನ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎಂದು ಶಾಸಕ ಎಸ್. ಮಧು ಬಂಗಾರಪ್ಪ ನುಡಿದರು.
ರವಿವಾರ ಪಟ್ಟಣದಲ್ಲಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ನ 29 ನೆ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪಟ್ಟಣದಲ್ಲಿ ಹಲವು ಸೌಹಾರ್ದ ಬ್ಯಾಂಕ್‌ಗಳು ಕಾರ್ಯನಿವರ್ ಹಿಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಆರ್ಥಿಕವಾಗಿ ಅನುಕೂವಾಗಲಿದೆ. ಜನತೆ ಕೇವಲ ಸಾಲ ಪಡೆಯುವತ್ತ ಚಿಂತಿಸದೇ, ಉಳಿತಾಯದ ಕಡೆಗೆ ಹೆಚ್ಚಿನ ನಿಗಾ ವಹಿಸಬೇಕು. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಜೊತೆಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದ ಅವರು, ತಮ್ಮ ಕ್ಷೇತ್ರದಲ್ಲಿ ಸೌಹಾರ್ದ ಶಾಖೆಗಳಿಗೆ ವಿಶೇಷವಾದ ಸಹಕಾರವನ್ನು ಕೊಡುತ್ತೇನೆ. ಸಹಕಾರಿ ಸಂಸ್ಥೆಗಳು ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು. ಸಂತ ಸೆಬಾಸ್ಟಿಯನ್ ಚರ್ಚ್‌ನ ಧರ್ಮಗುರು ಪಾ. ವಿಕ್ಟರ್ ಪಾಯಸ್ ಆಶೀರ್ವಚನ ನೀಡಿದರು.
ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಫೆರ್ನಾಂಡಿಸ್ ಮಾತನಾಡಿ, ಬ್ಯಾಂಕಿನ ಇತಿಹಾಸ, ಬೆಳೆದು ಬಂದ ಹಾದಿ, ಬ್ಯಾಂಕ್‌ನಲ್ಲಿರುವ ವಿವಿಧ ಸೌಲಭ್ಯಗಳು, ನೂತನ ತಂತ್ರಜ್ಞ್ಞಾನ ಅಳವಡಿಕೆ ಇತ್ಯಾದಿಗಳ ಮೂಲಕ ರಾಜ್ಯದಲ್ಲಿ ಸೌಹಾದರ್ ಕಾಯ್ದೆಯಡಿಯಲ್ಲಿ ನೋಂದಾಯಿತವಾದ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು. ಈ ಸಂದಭರ್ದಲ್ಲಿ ಮುಖ್ಯ ಅತಿಥಿಗಳಾಗಿ ಪಪಂ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ, ಸದಸ್ಯ ಮಂಚಿ ಹನುಮಂತಪ್ಪ, ಪುರಸಭಾ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜಪ್ಪ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ. ಅಣ್ಣಾಜಿ ಗೌಡ, ಡಾ. ಎಂ.ಕೆ ಭಟ್, ಸೌರಭ ಗಿಫ್ಟ್‌ನ ಎಂ.ಎನ್. ಗುರುಮೂರ್ತಿ, ಅಂಜುಮನ್ ಇಸ್ಲಾಹುಲ್ ಮುಸ್ಲಿಮೀನ್ ಜಾಮಿಯಾ ಮಸೀದಿಯ ಅಧ್ಯಕ್ಷ ಎನ್. ನೂರ್ ಅಹ್ಮದ್, ಸಿಸ್ಟರ್ ಐಡಾ ಡಿಸೋಜಾ, ಅಲೆಗ್ಸಾಂಡರ್ ಡಿಸೋಜಾ, ಜೆ. ಚನ್ನಬಸಪ್ಪ ಗೌಡ, ಪತ್ರಕರ್ತ ಭಾಸ್ಕರ ಶೆಟ್ಟಿ, ಶಶಿಧರ ಗೌಡ, ಅಭಿವೃದ್ಧಿ ವ್ಯವಸ್ಥಾಪಕ ಸುನೀಲ್ ಕುಮಾರ್, ಶಾಖಾ ವ್ಯವಸ್ಥಾಪಕ ಆರ್. ರವಿಚಂದ್ರ ಮತ್ತಿತರರು ಉಪಸ್ಥಿತರಿದ್ದರು.







