Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವರ್ಣವ್ಯವಸ್ಥೆ ಜಾತಿವ್ಯವಸ್ಥೆ ಯಾದ ಬಗೆ

ವರ್ಣವ್ಯವಸ್ಥೆ ಜಾತಿವ್ಯವಸ್ಥೆ ಯಾದ ಬಗೆ

ರಘೋತ್ತಮ ಹೊ.ಬ.ರಘೋತ್ತಮ ಹೊ.ಬ.23 May 2016 10:45 PM IST
share
ವರ್ಣವ್ಯವಸ್ಥೆ ಜಾತಿವ್ಯವಸ್ಥೆ ಯಾದ ಬಗೆ

ಜಾತಿ ಭಾರತದ ಸಾಮಾಜಿಕ ವ್ಯವಸ್ಥೆಯ ಪೀಡೆ ಎಂಬುದು ಎಲ್ಲರಿಗೂ ತಿಳಿದಿದೆ. ಪ್ರಜ್ಞಾವಂತರಿಗೆ ಅದರ ನಿರ್ಮೂಲನೆಯಾಗಬೇಕೆಂಬ ಕಳಕಳಿಯೂ ಇದೆ. ಅಂತಹ ಕಳಕಳಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರರ ಕಳಕಳಿ ಸದಾ ಒಂದು ಕೈಮೇಲು. ಯಾಕೆಂದರೆ ಅಂಬೇಡ್ಕರರು ಜಾತಿಯ ಮೂಲವನ್ನು ಪತ್ತೆ ಹಚ್ಚುವ ಯತ್ನ ನಡೆಸಿದ್ದಾರೆ. ಮೂಲ ಪತ್ತೆಯಾದರೆ ಚಿಕಿತ್ಸೆ ಸುಲಭ ಎಂಬುದಷ್ಟೆ ಇಲ್ಲಿ ಬಾಬಾಸಾಹೇಬರ ನಿಲುವು. ಅಂಬೇಡ್ಕರರ ಈ ಪತ್ತೆಹಚ್ಚುವ ಕ್ರಿಯೆಯಲ್ಲಿ ಪತ್ತೆಯಾದ ಸತ್ಯವೆಂದರೆ ಜಾತಿವ್ಯವಸ್ಥೆಯ ಮೂಲ ವರ್ಣವ್ಯವಸ್ಥೆ ಎಂಬುದು. ಜಾತಿ ಮತ್ತು ಹಿಂದೂ ಧರ್ಮಕ್ಕೆ ಯಾವ ಸಂಬಂಧವಿದೆ? ಅಂಬೇಡ್ಕರರ ಉತ್ತರವನ್ನಿಲ್ಲಿ ದಾಖಲಿಸುವುದಾದರೆ... ‘‘ತಮ್ಮ ನಡುವೆ ಯಾವುದೇ ಅಭಿಪ್ರಾಯ ಭೇದವಿದ್ದರೂ ಹಿಂದೂಗಳು ವಿಧೇಯರಾಗಿದ್ದರೆ ಎಂಬ ಭಾವ ಉಕ್ಕಿಸುವಂತಹ ಯಾವುದಾದರೂ ತತ್ವ ಹಿಂದೂ ಧರ್ಮದಲ್ಲಿದೆಯಾ? ಖಂಡಿತ ಇಲ್ಲ. ನನ್ನ ದೃಷ್ಟಿಯಲ್ಲಿ ಅಂತಹ ತತ್ವ ಯಾವುದಾದರೂ ಇದೆ ಎನ್ನುವುದಾದರೆ ಅದು ಜಾತಿ ತತ್ವ ಮಾತ್ರ.

ಹಿಂದುತ್ವಕ್ಕೆ ಸಂಬಂಧಿಸಿದಂತೆ ಅದರ ಮೂಲ ತಿರುಳು ಏನನ್ನು ಒಳಗೊಂಡಿದೆ ಎಂಬುದರ ಬಗ್ಗೆ ಅಭಿಪ್ರಾಯ ಭೇದವಿರಬಹುದು. ಆದರೆ ಹಿಂದುತ್ವದ ಅವಿಭಾಜ್ಯ ಮತ್ತು ಅತ್ಯಗತ್ಯ ಭಾಗ ಜಾತಿ ಎಂಬುದರ ಬಗ್ಗೆ ಯಾವುದೇ ಅನುಮಾನವಿಲ್ಲ. ಪ್ರತಿಯೊಬ್ಬ ಹಿಂದೂ ಆತ ಶಾಸನಬದ್ಧ ಹಿಂದೂವಲ್ಲದಿದ್ದರೂ ಕೂಡ ಜಾತಿಯನ್ನು ನಂಬುತ್ತಾನೆ. ಹಾಗೆಯೇ ಪ್ರತಿಯೊಬ್ಬ ಹಿಂದೂ ಹೌದು, ನಾನು ಶಾಸನಬದ್ಧ ಹಿಂದೂ ಎಂದು ಆತ ಹೆಮ್ಮೆಪಟ್ಟುಕೊಂಡರೂ ಆತ ಕೂಡ ಒಂದು ಜಾತಿಯನ್ನು ಹೊಂದಿರುತ್ತಾನೆ. ಒಬ್ಬ ಹಿಂದೂ ಹಿಂದೂಧರ್ಮದಲ್ಲಿ ಹೇಗೆ ಹುಟ್ಟಿರುತ್ತಾನೆಯೋ ಅದಕ್ಕಿಂತ ಹೆಚ್ಚಿಗೆ ಆತ ಒಂದು ಜಾತಿಯಲ್ಲಿ ಹುಟ್ಟಿರುತ್ತಾನೆ. ನಿಜಕ್ಕೂ ಹೇಳಬೇಕೆಂದರೆ, ಒಬ್ಬ ವ್ಯಕ್ತಿ ಆತ ಒಂದು ಜಾತಿಯಲ್ಲಿ ಹುಟ್ಟಿಲ್ಲವೆಂದರೆ ಆತ ಹಿಂದೂ ಧರ್ಮದಲ್ಲಿ ಹುಟ್ಟಲು ಸಾಧ್ಯವೇ ಇಲ್ಲ. ಈ ಕಾರಣದಿಂದಾಗಿ ಹಿಂದೂ ಧರ್ಮ ಮತ್ತು ಜಾತಿ ಪರಸ್ಪರ ಪ್ರತ್ಯೇಕಿಸಲಾಗದಂತಹವುಗಳಾಗಿವೆ’’ ಈ ನಿಟ್ಟಿನಲ್ಲಿ ಸ್ಪಷ್ಟ, ಜಾತಿ ಪದ್ಧತಿ ಮತ್ತು ಹಿಂದುತ್ವದ ಸಂಬಂಧ ಅವಿನಾಭಾವ ಎಂಬುದು. ಹಾಗೆ ಸ್ಪಷ್ಟಪಡಿಸಿಕೊಳ್ಳುತ್ತಾ ಅಂಬೇಡ್ಕರರು ಅದರ ಮೂಲ ಹುಡುಕಹೊರಡುತ್ತಾರೆ. ಅಸ್ಪಶ್ಯತೆಯ ಮೂಲ ಜಾತಿ ವ್ಯವಸ್ಥೆಯಲ್ಲಿದೆ. ಜಾತಿವ್ಯವಸ್ಥೆಯ ಮೂಲ ವರ್ಣವ್ಯವಸ್ಥೆಯಲ್ಲಿದೆ.

‘‘ವರ್ಣವ್ಯವಸ್ಥೆಯ ಮೂಲ ಬ್ರಾಹ್ಮಣರ ಶಾಸ್ತ್ರಪುರಾಣಗಳಲ್ಲಿದೆ (ಶೃತಿ-ಸ್ಮತಿಗಳಲ್ಲಿದೆ)’’ ಎಂಬುದನ್ನು ಕಂಡುಕೊಳ್ಳುತ್ತಾರೆ. ಒಟ್ಟಾರೆ ಅಂಬೇಡ್ಕರರಷ್ಟು ಕರಾರುವಕ್ಕಾಗಿ ಭಾರತದ ಜನಸಾಮಾನ್ಯನಿಗೆ ಜಾತಿವ್ಯವಸ್ಥೆಯ ಮೂಲವನ್ನು ಬಿಡಿಸಿಟ್ಟವರು ಮತ್ತೊಬ್ಬರಿರಲಿಕ್ಕಿಲ್ಲ. ಜಾತಿ ವಿನಾಶ ಎಂಬ ಕೃತಿಯನ್ನೇ ಅವರು ಬರೆದಿದ್ದಾರೆಂದರೆ.. ತಮ್ಮ ಈ ಜಾತಿವಿನಾಶದ ಹಾದಿಯಲ್ಲಿ ಅಂಬೇಡ್ಕರರು ಜಾತಿ ಅದಕ್ಕೆ ಮೂ ವರ್ಣಾಶ್ರಮ ಧರ್ಮ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ಇಡೀ ದೇಶ ಹೇಗೆ ಮಗ್ಗಿ ಒಪ್ಪಿಸುತ್ತದೆಯೋ ಅಂತಹ ವರ್ಣವ್ಯವಸ್ಥೆ ಎಂದು ದಾಖಲಿಸುತ್ತಾರೆ. ಈ ವಾದವನ್ನು ಅಂದರೆ ಜಾತಿಗೆ ಮೂಲ ವರ್ಣವ್ಯವಸ್ಥೆ ಎಂಬುದನ್ನು ಒಂದಿಷ್ಟು ಮಂದಿ ಒಪ್ಪುವುದಿಲ್ಲ. ಹೇಗೆ ಎಂಬ ಪ್ರಶ್ನೆ ಇಡುತ್ತಾರೆ. ಅಂಬೇಡ್ಕರ್ ಹೇಳುತ್ತಾರೆ, ‘‘ಬ್ರಾಹ್ಮಣವಾದ ವರ್ಣವನ್ನು ಜಾತಿಯಾಗಿ ಪರಿವರ್ತಿಸಿತು. ಅದರರ್ಥ ಸಾಮಾಜಿಕ ಅಂತಸ್ತು ಮತ್ತು ಉದ್ಯೋಗವನ್ನು ಬ್ರಾಹ್ಮಣವಾದ ವಂಶಪಾರಂಪರ್ಯಗೊಳಿಸಿತು.’’ ಹೌದು, ವಂಶಪಾರಂಪರ್ಯ... ಪ್ರಪಂಚದ ಎಲ್ಲಿಯೂ ಇಲ್ಲದ ಕಸಗುಡಿಸುವವನ ಮಗನೊಬ್ಬ ಕಸಗುಡಿಸಬೇಕು, ಕ್ಷೌರಿಕನ ಮಗನೊಬ್ಬ ಕ್ಷೌರವೃತ್ತಿಯನ್ನೇ ಮಾಡಬೇಕು, ಬಟ್ಟೆ ಒಗೆಯುವವನ ಮಗನೊಬ್ಬ ಬಟ್ಟೆ ಒಗೆಯಬೇಕು, ಕುರಿ ಕಾಯುವವನ ಮಗನೊಬ್ಬ ಕುರಿಕಾಯಬೇಕು... ಹೀಗೆ ಉದ್ಯೋಗ ಮಾಡುವವರನ್ನು ಅದೇ ಉದ್ಯೋಗದ ಹೆಸರಿನ ಒಂದು ಗುಂಪಿಗೆ ಅರ್ಥಾತ್ ವಂಶಪಾರಂಪರ್ಯಕ್ಕೆ, ಜಾತಿಗೆ ಕಟ್ಟಿಹಾಕಿದ್ದು, ಅಲ್ಲಿಯೇ ಕೊಳೆಯುವಂತೆ ಮಾಡಿದ್ದು ಅದು ಭಾರತದಲ್ಲಷ್ಟೆ. ಅಂಬೇಡ್ಕರ್ ಹೇಳುತ್ತಾರೆ ‘‘ಅದನ್ನು ಧರ್ಮದ ನೀತಿ ನಿಯಮಗಳನ್ನು ಹೇರಿ ಕಾನೂನು ಕ್ರಮದಲ್ಲಿ ವರ್ಣವನ್ನು ಜಾತಿಯಾಗಿ ಪರಿವರ್ತಿಸುವ ಮೂಲಕ ತರಲಾಯಿತು.’’ ಹಾಗಿದ್ದರೆ ವರ್ಣದಿಂದ ಜಾತಿಯಾಗಿ ಈ ಪರಿವರ್ತನೆ ಅದು ಹೇಗಾಯಿತು? ಅಂಬೇಡ್ಕರ್ ಹೇಳುತ್ತಾರೆ, ‘‘ಆ ಪರಿವರ್ತನೆಯನ್ನು ನಿಧಾನವಾಗಿ ಹಂತಗಳ ಮೂಲಕ ಸಾಧಿಸಲಾಗಿದೆ. ಹಾಗೆ ವರ್ಣವನ್ನು ಜಾತಿಯಾಗಿ ಪರಿವರ್ತಿಸುವಾಗ ಮೂರು ಹಂತಗಳು ಸುಸ್ಪಷ್ಟವಾಗಿ ಗೋಚರಿಸುತ್ತವೆ.

ಅವುಗಳಲ್ಲಿ ಮೊದಲ ಹಂತ, ವರ್ಣಪದ್ಧತಿಯ ಅವಧಿಯನ್ನು ಅಂದರೆ ವ್ಯಕ್ತಿಯ ಉದ್ಯೋಗ ಮತ್ತು ಅಂತಸ್ತನ್ನು ನಿರ್ದಿಷ್ಟ ಕಾಲಮಿತಿಯವರೆಗಷ್ಟೆ ಮಿತಿಗೊಳಿಸಿದ ಹಂತ. ಎರಡನೆಯ ಹಂತ, ವರ್ಣಪದ್ಧತಿಯ ಪ್ರಕಾರದ ಸದರಿ ವ್ಯಕ್ತಿಯ ಅಂತಸ್ತು ಮತ್ತು ಉದ್ಯೋಗವನ್ನು ಆತನ ಜೀವಿತ ಅವಧಿಗಷ್ಟೆ ಸೀಮಿತಗೊಳಿಸಿದ ಹಂತ. ಕಡೆಯದಾಗಿ ಮೂರನೆಯ ಹಂತದಲ್ಲಷ್ಟೆ, ವ್ಯಕ್ತಿಯ ಉದ್ಯೋಗ ಮತ್ತು ಅಂತಸ್ತನ್ನು ಆತನ ಜೀವಿತ ಅವಧಿಯನ್ನು ಮೀರಿ ಅವನ ಮಗಳಿಗೆ ಅಥವಾ ಮಗನಿಗೆ ಅದನ್ನು ಆರೋಪಿಸಲಾಯಿತು, ಅರ್ಥಾತ್ ವಂಶಪಾರಂಪರ್ಯಗೊಳಿಸಲಾದ ಹಂತ.’’ ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಹೇಳುತ್ತಾರೆ ‘‘ಧರ್ಮದ ಮೂಲಕ ಮನುಷ್ಯ ಮನುಷ್ಯ ಸಂಬಂಧವನ್ನು ಸಾಮಾಜಿಕ ಶ್ರೇಣೀಕರಣಗೊಳಿಸಿ(ವರ್ಣ), ಪವಿತ್ರೀಕರಣಗೊಳಿಸಿ ಅದು ಚಿರಾಯು(ಶಾಶ್ವತ)ವಾಗಿರುವಂತೆ ಮತ್ತು ಅತಿಕ್ರಮಿಸಲಾಗದಂತೆ ಮೀಸಲಿಟ್ಟುಕೊಂಡ ಪ್ರಪಂಚದ ಏಕೈಕ ಜನಾಂಗವೆಂದರೆ ಅದು ಹಿಂದೂಗಳಷ್ಟೆ’’ (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.5, ಪು.190). ವಿವರಿಸುವುದಾದರೆ, ಅಂಬೇಡ್ಕರರ ಪ್ರಕಾರ ‘‘ಮೊದಲ ಹಂತದಲ್ಲಿ ಅಂತಸ್ತು ಮತ್ತು ಉದ್ಯೋಗದ ಆಧಾರದ ಮೇಲೆ ವ್ಯಕ್ತಿಯ ವರ್ಣವನ್ನು 4 ವರ್ಷಗಳ ಸೀಮಿತ ಅವಧಿಗೆ ನಿಯುಕ್ತಿಗೊಳಿಸಲಾಗುತ್ತಿತ್ತು. ಹಾಗೆ ವ್ಯಕ್ತಿಯ ವರ್ಣವನ್ನು ನಿಯುಕ್ತಿಗೊಳಿಸುತ್ತಿದ್ದ ಅಧಿಕಾರಿಗಳು ಮನು ಮತ್ತು ಸಪ್ತಋಷಿಗಳು ಎಂಬ ಅಧಿಕಾರಿಗಳಾಗಿದ್ದರು.

ವ್ಯಕ್ತಿಗಳಿಗೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಈ ಮೂರು ವರ್ಣಗಳನ್ನು ಸಂಬಂಧಪಟ್ಟ ವ್ಯಕ್ತಿಗಳ ಮಾನಸಿಕ, ದೈಹಿಕ ಅರ್ಹತೆ ಮತ್ತು ಉದ್ಯೋಗದ ಆಧಾರದ ಮೇಲೆ, ಸಮುದಾಯದ ಹಿತದೃಷ್ಟಿಯಿಂದಷ್ಟೆ ನೀಡಲಾಗುತ್ತಿತ್ತು. ಈ ಮೂರೂ ವರ್ಣಗಳನ್ನು ನೀಡದವರನ್ನು ಅಥವಾ ಉಳಿದವರನ್ನು ಶೂದ್ರರು ಎನ್ನಲಾಗುತ್ತಿತ್ತು. ಹೀಗೆ ನಿಯುಕ್ತಿಗೊಳಿಸಲಾದ ವರ್ಣವು ಕೇವಲ 4 ವರ್ಷಗಳ ಸೀಮಿತ ಅವಧಿಗೆ ಎಂಬುದಿಲ್ಲಿ ಗಮನಾರ್ಹ ಮತ್ತು ಆ ಪ್ರಕ್ರಿಯೆಯಲ್ಲಿ ವ್ಯಕ್ತಿಯ ನಾಲ್ಕು ವರ್ಷಗಳ ಆ ಅವಧಿಯನ್ನು ‘ಯುಗ’ ಎನ್ನಲಾಗುತ್ತಿತ್ತು. ನಾಲ್ಕು ವರ್ಷಗಳ ನಂತರ ವ್ಯಕ್ತಿಗಳ ವರ್ಣಗಳು ಬದಲಾಗುತ್ತಿದ್ದವು ಮತ್ತು ಬದಲಾವಣೆಯ ಈ ಸಮಯವನ್ನು ‘ಮನ್ವಂತರ’ ಎನ್ನಲಾಗುತ್ತಿತ್ತು. ಒಂದಂತು ನಿಜ, ವರ್ಣ ಅದು ಮೊದಲ ಹಂತದಲ್ಲಿ ಕೇವಲ 4 ವರ್ಷಗಳ ಅವಧಿಗಷ್ಟೆ ಸೀಮಿತಗೊಂಡಿತ್ತು.’’ ಎರಡನೆಯ ಹಂತದಲ್ಲಿ ವ್ಯಕ್ತಿಯ ವರ್ಣವನ್ನು ನಿಯುಕ್ತಿಗೊಳಿಸುವ ಪ್ರಕ್ರಿಯೆ ಮನು ಮತ್ತು ಸಪ್ತಋಷಿಗಳಿಂದ ಗುರು ಅಥವಾ ಆಚಾರ್ಯರಿಗೆ ಬಂತು. ಈ ಹಂತದಲ್ಲಿ ಗುರುಕುಲಗಳು ಹುಟ್ಟಿಕೊಂಡವು. ವ್ಯಕ್ತಿಗಳು ಗುರುಕುಲದಲ್ಲಿ 12 ವರ್ಷಗಳು ಅಭ್ಯಾಸ ನಡೆಸಬೇಕಾಗುತ್ತಿತ್ತು. 12 ವರ್ಷಗಳ ಅಭ್ಯಾಸದ ನಂತರ ಅಂತಹ ವ್ಯಕ್ತಿಗಳಿಗೆ ಗುರು ಅಥವಾ ಆಚಾರ್ಯ ವರ್ಣದ ದೀಕ್ಷೆ ನೀಡುತ್ತಿದ್ದರು. ಗುರುಕುಲದಲ್ಲಿ ವರ್ಣ ನಿರ್ಧರಿಸುವ ಈ ಪದ್ಧತಿಯನ್ನು, ಕ್ರಮವನ್ನು ‘ಉಪನಯನ’ ಎನ್ನಲಾಗುತ್ತಿತ್ತು. ಎರಡನೆಯ ಈ ಹಂತದಲ್ಲಿ ಕಂಡುಬಂದ ಒಂದು ವ್ಯತ್ಯಾಸವೆಂದರೆ ವರ್ಣವನ್ನು 4 ವರ್ಷಗಳ ನಿರ್ದಿಷ್ಟ ಅವಧಿಯ ಬದಲಿಗೆ ವ್ಯಕ್ತಿಯ ಜೀವಿತ ಅವಧಿಯವರೆಗೆ ವಿಸ್ತರಿಸಲಾಗಿದ್ದು. ಹಾಗಿದ್ದರೂ ಅದನ್ನು ವಂಶಪಾರಂಪರ್ಯಗೊಳಿಸಲಿಲ್ಲ ಎಂಬುದಿಲ್ಲಿ ಗಮನಾರ್ಹ.

ಆದರೆ... ಮೂರನೆಯ ಹಂತದಲ್ಲಿ ವರ್ಣವನ್ನು ನಿರ್ಧರಿಸುವ ಗುರುಕುಲದ ಈ ಪದ್ಧತಿಯನ್ನೇ ರದ್ದುಗೊಳಿಸಲಾಯಿತು! ಹಾಗೆಯೇ ವರ್ಣವನ್ನು ನಿರ್ಧರಿಸುವ (ಉಪನಯನ ನೀಡುವ) ಗುರುಕುಲದ ಹಕ್ಕನ್ನು ಕೂಡ ಕಿತ್ತುಕೊಳ್ಳಲಾಯಿತು. ಹೀಗೆ ವರ್ಣವನ್ನು ನಿರ್ಧರಿಸುವ ಹಕ್ಕನ್ನು ಗುರುವಿನಿಂದ ಕಿತ್ತು ವ್ಯಕ್ತಿಯ ತಂದೆಗೆ ನೀಡಿದ್ದು ಮನುಸ್ಮತಿ (ಸುಮತೀ ಭಾರ್ಗವ ವಿರಚಿತ) ಎಂಬುದಿಲ್ಲಿ ಉಲ್ಲೇಖಾರ್ಹ. ಈ ಪ್ರಕಾರ ಮನುಸ್ಮತಿಯ ಕಾನೂನು ವರ್ಣ ನಿರ್ಧರಿಸುವ ಉಪನಯನದಲ್ಲಿ ಪರಿಪೂರ್ಣ ಬದಲಾವಣೆ ತಂದು ಶಿಕ್ಷಣದ ನಂತರ ಉಪನಯನ ಎಂಬುದನ್ನು ರದ್ದುಗೊಳಿಸಿ ಶಿಕ್ಷಣಕ್ಕೂ ಮೊದಲೇ ಉಪನಯನ ಎಂಬ ನೀತಿ ಜಾರಿಗೊಳಿಸಿತು. ಹಾಗೆಯೇ ವರ್ಣ ನಿರ್ಧರಿಸುವ ಹಕ್ಕನ್ನು ಗುರುವಿನಿಂದ ಕಿತ್ತು ವ್ಯಕ್ತಿಯ ತಂದೆಗೆ ನೀಡಿದ್ದರಿಂದ ಸ್ವಾಭಾವಿಕವಾಗಿ ಆತ (ತಂದೆ) ಉಪನಯನದ ಸಂದರ್ಭದಲ್ಲಿ ತನ್ನ ಮಗನಿಗೆ ಆತನ ಶಕ್ತಿಸಾಮರ್ಥ್ಯ ನೋಡುವುದನ್ನು ಬಿಟ್ಟು ತಾನು ಈಗ ಯಾವ ವರ್ಣದಲ್ಲಿರುವನೋ ಅದೇ ವರ್ಣವನ್ನು ತನ್ನ ಮಗನಿಗೂ ನೀಡಲಾರಂಭಿಸಿದ. ಪರಿಣಾಮ ವರ್ಣ ವಂಶಪಾರಂಪರ್ಯವಾಯಿತು, ಅದು ಜಾತಿಯಾಗಿ ಪರಿವರ್ತನೆ ಹೊಂದಿತು ಅರ್ಥಾತ್ ಜಾತಿ ಸೃಷ್ಟಿಯಾಯಿತು.

share
ರಘೋತ್ತಮ ಹೊ.ಬ.
ರಘೋತ್ತಮ ಹೊ.ಬ.
Next Story
X