ನೂತನ ಶಿಕ್ಷಣ ಪದ್ಧತಿ ಜಾರಿಗೆ ಸರಕಾರದ ಪರಿಶೀಲನೆ: ಕಥೇರಿಯಾ
ಫರೂಕಾಬಾದ್(ಉ.ಪ್ರ.),ಮೇ 23:ಹಾಲಿ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಗಳನ್ನು ತರುವ ಮೂಲಕ ನೂತನ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುವ ಬಗ್ಗೆ ಸರಕಾರವು ಗಂಭೀರ ಪರಿಶೀಲನೆ ನಡೆಸುತ್ತಿದೆ ಎಂದು ಕೇಂದ್ರ ಸಹಾಯಕ ಮಾನವ ಸಂಪನ್ಮೂಲ ಸಚಿವ ರಾಂ ಶಂಕರ ಕಥೇರಿಯಾ ಅವರು ಹೇಳಿದ್ದಾರೆ. ರವಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಎಂಟನೆ ತರಗತಿಯವರೆಗೆ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸದಿರುವುದು ಸೇರಿದಂತೆ ಹಾಲಿ ಪದ್ಧತಿಯಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡುವ ಮೂಲಕ ನೂತನ ಶಿಕ್ಷಣ ಪದ್ಧತಿಯ ಜಾರಿಗೆ ಚಿಂತನೆ ನಡೆದಿದೆ. ಭಾರತೀಯ ಶಿಕ್ಷಣ ಪದ್ಧತಿಯನ್ನು ಜಗತ್ತು ಹೆಚ್ಚೆಚ್ಚು ಒಪ್ಪಿಕೊಳ್ಳುತ್ತಿದೆ. ನರೇಂದ್ರ ಮೋದಿ ಸರಕಾರವು 20 ಖಾಸಗಿ ಮತ್ತು ಸರಕಾರಿ ವಿವಿಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಈ ವಿವಿಗಳಲ್ಲಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಲು ಅಂತಾರಾಷ್ಟ್ರೀಯ ಮಟ್ಟದ 500ಕ್ಕೂ ಅಧಿಕ ಪ್ರೊಫೆಸರ್‌ಗಳನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
Next Story





