ರಾಜ್ಯಮಟ್ಟದ ಯುವಜನ ಮೇಳ ಸಮಾರೋಪ: ಬೆಂಗಳೂರು-ಬೆಳಗಾವಿ ವಿಭಾಗಕ್ಕೆ ಸಮಗ್ರ ಪ್ರಶಸ್ತಿ

ಉಡುಪಿ, ಮೇ 23: ಉಡುಪಿ ಜಿಪಂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಯುವಜನ ಮೇಳದ ಯುವಕರ ವಿಭಾಗದಲ್ಲಿ ಬೆಂಗಳೂರು ವಿಭಾಗ ಹಾಗೂ ಯುವತಿಯರ ವಿಭಾಗದಲ್ಲಿ ಬೆಳಗಾವಿ ವಿಭಾಗವು ಸಮಗ್ರ ಪ್ರಶಸ್ತಿ ಗೆದ್ದುಕೊಂಡಿವೆ.
ಯುವಕರ ವಿಭಾಗದಲ್ಲಿ ಬೆಳಗಾವಿ ವಿಭಾಗವು ದ್ವಿತೀಯ ಮತ್ತು ಮೈಸೂರು ತೃತೀಯ ಹಾಗೂ ಯುವತಿಯರ ವಿಭಾಗದಲ್ಲಿ ಕಲಬುರಗಿ ದ್ವಿತೀಯ ಮತ್ತು ಬೆಂಗಳೂರು ತೃತೀಯ ಸ್ಥಾನವನ್ನು ಪಡೆದುಕೊಂಡಿವೆ. ಇಂದು ಅಜ್ಜರಕಾಡು ಪುರಭವನದಲ್ಲಿ ಜರಗಿದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಾಲಾಜಿ, ಕಾರ್ಯದರ್ಶಿ ಚಿತ್ತಪ್ಪ, ಉಡುಪಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್‌ಕುಮಾರ್ ಶೆಟ್ಟಿ, ಕಾರ್ಕಳ ತಾಲೂಕು ಕ್ರೀಡಾಕಾರಿ ನಾರಾಯಣ ರಾವ್ ಉಪಸ್ಥಿತರಿದ್ದರು.
ಇತರ ಸ್ಪರ್ಧೆಗಳ ವಿಜೇತರ ವಿವರ ಇಂತಿದೆ
ಯುವಕರ ವಿಭಾಗ:
ಭಾವಗೀತೆ: ಪ್ರ-ಗೋಪಾಲ ಸಣ್ಣಕ್ಕಿ, ಬೆಂಗಳೂರು ಗ್ರಾ., ದ್ವಿ-ಪವನ್, ಮಂಡ್ಯ, ತೃ-ಶ್ರೀರಾಮ, ದ.ಕ. ರಂಗಗೀತೆ: ಪ್ರ-ಅರುಣ್ ಕುಮಾರ್, ತುಮಕೂರು, ದ್ವಿ-ಗೋಪಾಲ ಸಣ್ಣಕ್ಕಿ, ಬೆಂಗಳೂರು ಗ್ರಾ., ತೃ-ಸತೀಶ್ ಶಿವಪ್ಪಯ್ಯನ ಮಠ ಧಾರವಾಡ. ಲಾವಣಿ: ಪ್ರ-ನಿಂಗಪ್ಪಸೊಲ್ಲಾಪುರ, ಕೊಪ್ಪಳ, ದ್ವಿ-ರಾಮು ಬೆಂಗಳೂರು ಗ್ರಾ., ತೃ-ಮಹೇಶ್ ಜಗ್ಗಲ್, ಗದಗ. ಗೀಗೀ ಪದ: ಪ್ರ- ಶ್ರೀಮಾರುತೇಶ್ವರ ಯುವಕ ಸಂಘ ಕೊಪ್ಪಳ, ದ್ವಿ- ಜೈ ಹನುಮ ಯುವಕ ಸಂಘ, ಉತ್ತರ ಕನ್ನಡ, ತೃ-ಸ್ವಾಮಿ ವಿವೇಕಾನಂದ ಕಲಾಬಳಗ, ಚಿಕ್ಕಬಳ್ಳಾಪುರ. ಏಕಪಾತ್ರಾಭಿನಯ: ಪ್ರ-ಸಿದ್ದು ಉಳ್ಳಾಗಡ್ಡಿ, ಕೊಪ್ಪಳ, ದ್ವಿ-ಎಲ್ಲಪ್ಪ ಸುಳ್ಳದ, ಧಾರವಾಡ, ತೃ-ಪ್ರಕಾಶ ಗೊಂಡಬಾಳ ಕೊಪ್ಪಳ. ಭಜನೆ: ಪ್ರ- ಗುರು ಶಾಂತೇಶ್ವರ ಕಲಾತಂಡ, ಧಾರವಾಡ, ದ್ವಿ-ಜೇನುಕಲ್ ಸಿದ್ದೇಶ್ವರ ಯುವಕ ಸಂಘ, ಹಾಸನ, ತೃ-ಮಾರುತೇಶ್ವರ ಭಜನಾ ಸಂಘ, ಕೊಪ್ಪಳ. ಕೋಲಾಟ: ಪ್ರ- ಶ್ರೀಕೃಷ್ಣ ಯುವಕ ಸಂಘ, ಕೊಪ್ಪಳ, ದ್ವಿ-ರಾಜೇಶ್ವರ ಯುವಕ ಮಂಡಳಿ, ಉತ್ತರಕನ್ನಡ, ತೃ-ಕರ್ನಾಟಕ ಯುವಕ ಮಂಡಳಿ, ಕೊಪ್ಪಳ. ವೀರಗಾಸೆ: ಪ್ರ-ಕಲ್ಲೇಶ್ವರ ಯುವಕ ಸಂಘ ತುಮಕೂರು, ದ್ವಿ- ಗೋವಿಂದ ನಾಯ್ಕ ಮತ್ತು ತಂಡ ಮೈಸೂರು, ತೃ- ಈಶ್ವರ ಯುವಕ ಮಂಡಲ, ಉತ್ತರಕನ್ನಡ.
ಡೊಳ್ಳು ಕುಣಿತ: ಪ್ರ-ಜುಮನಾಳ ಸಿದ್ದೇಶ್ವರ ಸಾಂಸ್ಕೃತಿಕ ಸಂಘ, ಬಾಗಲಕೋಟೆ, ದ್ವಿ-ಶ್ರೀಗಜಾನನ ಡೊಳ್ಳಿನ ಸಂಘ, ಶಿವಮೊಗ್ಗ, ತೃ-ಅಭಿನಯ ಜಾನಪದ ಹವ್ಯಾಸಿ ಸಂಘ, ಉಡುಪಿ. ಜಾನಪದ ನೃತ್ಯ: ಪ್ರ- ಜೈ ಕಿಸಾನ್ ಯುವಕ ಸಂಘ, ಗದಗ, ದ್ವಿ-ಹೊನ್ನಪ್ಪಮತ್ತು ತಂಡ, ಮಂಡ್ಯ, ತೃ-ಲಕ್ಷ್ಮೀ ನಾರಾಯಣ ತಂಡ ಬೆಂಗಳೂರು ಗ್ರಾ. ಜಾನಪದ ಗೀತೆ: ಪ್ರ- ರಾಮು ಮತ್ತು ತಂಡ, ಬೆಂಗಳೂರು ಗ್ರಾ., ದ್ವಿ-ಕರುನಾಡು ಯುವಕ ಸಂಘ, ಮಂಡ್ಯ, ತೃ- ಶ್ರೀಗುರು ಪುಟ್ಟರಾಜ ಸಾಂಸ್ಕೃತಿಕ ಸಂಘ, ರಾಯಚೂರು.
ಚರ್ಮವಾದ್ಯ ಮೇಳ: ಪ್ರ- ಈ ಭೂಮಿ ತಮಟೆ ಕಲಾ ಸಂಘ, ಬಸಹಳ್ಳಿ ಅಗ್ರಹಾರ ಕೋಲಾರ, ದ್ವಿ-ಅಭಿನಯ ಜಾನಪದ ಹವ್ಯಾಸಿ ಸಂಘ, ಉಡುಪಿ, ತೃ- ವೀರಭದ್ರೇಶ್ವರ ಯುವಕ ಮಂಡಳಿ, ನರಗುಂದ, ಗದಗ. ಸಣ್ಣಾಟ: ಪ್ರ- ಶ್ರೀಗುರು ಪುಟ್ಟರಾಜ ಸಾಂಸ್ಕೃತಿಕ ಸಂಘ, ರಾಯಚೂರು, ದ್ವಿ-ಮಿತ್ರಬಳಗ, ಸುಳ್ಯ ದ.ಕ., ತೃ-ಲಕ್ಷ್ಮೀದೇವಿ ಸಣ್ಣಾಟ ಕಲಾ ಸಂಘ, ಬೆಳಗಾವಿ. ದೊಡ್ಡಾಟ: ಪ್ರ-ಕಲ್ಲೇಶ್ವರ ಯುವಕ ಸಂಘ, ತುಮಕೂರು, ದ್ವಿ-ಈಶ್ವರ ಯುವಕ ಮಂಡಲ ಉತ್ತರಕನ್ನಡ, ತೃ-ಮಿತ್ರ ಬಳಗ, ಸುಳ್ಯ ದ.ಕ. ಯಕ್ಷಗಾನ: ಪ್ರ- ವೈವ ಯುವಕ ಮಂಡಲ ಉಡುಪಿ, ದ್ವಿ-ಯುವಶಕ್ತಿ ಯುವಕ ಸಂಘ, ಉ.ಕ.ಯುವತಿಯರ ವಿಭಾಗ
ಭಾವಗೀತೆ: ಪ್ರ- ಹೆಚ್.ಎಂ.ಲಲಿತಾ, ಬಳ್ಳಾರಿ, ದ್ವಿ- ಪ್ರಿಯಾಂಕಾ ಅರೆಸಿದ್ಧಿ, ಬೆಳಗಾವಿ, ತೃ-ಸುವರ್ಣ ಬೆಂಗಳೂರು ಗ್ರಾ. ರಂಗಗೀತೆ: ಪ್ರ- ಭಾಗ್ಯಶ್ರೀ ಹುನಗುಂದ, ಗದಗ, ದ್ವಿ-ಚಂದ್ರಕಲಾ ಕೊಡಗು, ತೃ-ಜಿ.ಎಸ್.ಗೀತಾ ಶಿವಮೊಗ್ಗ. ಲಾವಣಿ: ಪ್ರ-ಆಶಾ ಲಕ್ಷ್ಮೀ ಕೊಂಡ್ಲಿ, ಉ.ಕ., ದ್ವಿ-ಗುರುಪ್ರಿಯ ನಾಯಕ್, ದ.ಕ., ತೃ-ಬಸವರಾಜೇಶ್ವರಿ ಕೊಪ್ಪಳ. ಗೀಗೀ ಪದ: ಪ್ರ-ಮಲ ಪ್ರಭಾ ಯುವತಿ ಮಂಡಳ, ಕೊಣ್ಣೂರು, ಗದಗ, ದ್ವಿ-ಬನಶಂಕರಿ ಯುವತಿ ಮಂಡಳಿ ಕೊಪ್ಪಳ, ತೃ-ತಣ್ಣೀರುಬಾವಿ ಯುವತಿ ಮಂಡಳಿ, ದ.ಕ.
ಏಕಪಾತ್ರಾಭಿನಯ: ಪ್ರ-ಕಾವ್ಯಾಶ್ರೀ ದ.ಕ., ದ್ವಿ-ಶಿವರಂಜಿನಿ, ದ.ಕ., ತೃ- ಅನಸೂಯ ಕೊಂಡ್ಲಿ, ಉ.ಕ. ಭಜನೆ: ಪ್ರ-ಆಶಾಲಕ್ಷ್ಮೀ ಕೊಂಡ್ಲಿ, ಉ.ಕ. ದ್ವಿ-ಕಲಾಜ್ಯೋತಿ ಯುವತಿ ಮಂಡಳಿ, ಹಾಸನ, ತೃ-ಗಂಗಮ್ಮ ಮತ್ತು ಸಂಗಡಿಗರು, ಬೀದರ್. ಕೋಲಾಟ: ಪ್ರ- ಕಿತ್ತೂರು ರಾಣಿ ಚೆನ್ನಮ್ಮ ಯುವತಿ ಮಂಡಳಿ, ಶಿವಮೊಗ್ಗ, ತೃ-ರೇಣುಕಾ ಹಾಗೂ ಸಂಗಡಿಗರು ಕೊಪ್ಪಳ.
ಸೋಬಾನೆ ಪದ: ಪ್ರ-ಲಕ್ಷ್ಮೀ ಯುವತಿ ಮಂಡಳಿ, ಉ.ಕ., ದ್ವಿ- ಉಮಾ ದೇವಿ ಮತ್ತು ಸಂಗಡಿಗರು, ಬೀದರ್, ತೃ-ಶ್ರೀಶಕ್ತಿ ಜಾಗೃತಿ ಯುವತಿ ಮಂಡಳಿ, ಶಿವಮೊಗ್ಗ. ಜಾನಪದ ನೃತ್ಯ: ಪ್ರ-ವಿದ್ಯಾ ಎಲ್.ಎಂ. ಮತ್ತು ತಂಡ ಕೋಲಾರ, ದ್ವಿ-ಸ್ಪೂರ್ತಿ ಯುವತಿ ಮಂಡಲ, ರಾಯಚೂರು. ಜಾನಪದ ಗೀತೆ: ಪ್ರ- ಶ್ರೀದೇವಿ ಸಿದ್ದಾಪುರ, ಉ.ಕ., ದ್ವಿ- ಕಲಾಜ್ಯೋತಿ ಯುವತಿ ಮಂಡಲ, ಚಿಕ್ಕಮಗಳೂರು, ತೃ-ಶಾರದಾ ಯುವತಿ ಮಂಡಳಿ ಕೊಪ್ಪಳ. ರಾಗಿ /ಜೋಳ ಬೀಸುವ ಪದ: ಪ್ರ-ದ್ರಾಕ್ಷಾಯಿನಿ ಯುವತಿ ಮಂಡಲ, ಉ.ಕ., ದ್ವಿ-ಮಹೇಶ್ವರಿ ಯುವತಿ ಮಂಡಲ, ಹಾಸನ, ತೃ- ಸೀಶಕ್ತಿ ಜಾಗೃತಿ ಯುವತಿ ಮಂಡಲ ಶಿವಮೊಗ್ಗ.







