ಲಿಬಿಯಕ್ಕೆ ಹೋಗದಂತೆ ಭಾರತ ಸರಕಾರದಿಂದ ನಿಷೇಧ
ಹೊಸದಿಲ್ಲಿ, ಮೇ 24: ಭಾರತೀಯ ಪ್ರಜೆಗಳು ಲಿಬಿಯಕ್ಕೆ ಪ್ರಯಾಣಿಸದಂತೆ ಕೇಂದ್ರಸರಕಾರ ನಿಷೇಧ ವಿಧಿಸಿದೆ. ಉತ್ತರ ಆಫ್ರಿಕದ ದೇಶವಾದ ಲಿಬಿಯದಲ್ಲಿ ಸುರಕ್ಷಾ ವ್ಯವಸ್ಥೆ ಕೆಟ್ಟು ಹೋಗಿದ್ದು ಅಲ್ಲಿರುವ ಭಾರತೀಯರು ಜೀವ ಬೆದರಿಕೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರಸರಕಾರ ಈ ಕ್ರಮಕ್ಕೆ ಮುಂದಾಗಿದೆ. ಯಾವುದೇ ಉದ್ದೇಶದ ಪ್ರಯಾಣಕ್ಕೂ ಸರಕಾರ ಅನುಮತಿ ನೀಡದು. ಎಲ್ಲ ಪ್ರಯಾಣಗಳಿಗೂ ನಿಷೇಧ ಬಾಧಕವೆಂದು ವಿದೇಶ ಸಚಿವಾಲಯ ತಿಳಿಸಿದೆ.
Next Story