ಏರ್ ಆ್ಯಂಬುಲೆನ್ಸ್ ಪತನ; ಇಬ್ಬರಿಗೆ ಗಂಭೀರ ಗಾಯ

ದಿಲ್ಲಿ, ಮೇ 24: ಏರ್ ಆ್ಯಂಬುಲೆನ್ಸ್ ಪತನಗೊಂಡ ಘಟನೆ ದಿಲ್ಲಿಯ ನಜಫ್‌ಗಡದ ಕೈರ್ ಗ್ರಾಮದಲ್ಲಿ ಇಂದು ಸಂಭವಿಸಿದೆ.
ಪಾಟ್ನಾದಿಂದ ದಿಲ್ಲಿಗೆ ಬರುತ್ತಿದ್ದ ಏರ‍್ ಆ್ಯಂಬುಲೆನ್ಸ್ ಪತನಗೊಂಡ ಪರಿಣಾಮವಾಗಿ ಇಬ್ಬರು ಗಾಯಗೊಂಡಿದ್ದಾರೆ.
ಒಟ್ಟು ಏಳು ಮಂದಿ ಏರ‍್ ಆ್ಯಂಬುಲೆನ್ಸ್ ನಲ್ಲಿ ಪ್ರಯಾಣಿಸುತ್ತಿದ್ದರು.ಈ ಪೈಕಿ ಐವರು ಅಪಾಯದಿಂದ ಪಾರಾಗಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಎಂಜಿನ್ ವೈಫಲ್ಯದಿಂದಾಗಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
Next Story





