ಇ. ಚಂದ್ರಶೇಖರನ್‌ರಿಗೆ ಸಚಿವಸ್ಥಾನ : ಕೇರಳದ ದಕ್ಷ ರಾಜಕಾರಣಿಗೆ ಸಂದಗೌರವ

ಕಾಸರಗೋಡು, ಮೇ 24: ನಿಸ್ವಾರ್ಥ ರಾಜಕೀಯ ಜೀವನಕ್ಕಾಗಿ ಇ. ಚಂದ್ರಶೇಖರನ್‌ರಿಗೆ ಸಚಿವ ಸ್ಥಾನ ಹಾಗೂ ವಿಧಾನಸಭೆಯಲ್ಲಿ ಸಿಪಿಐಯ ನಾಯಕನ ಸ್ಥಾನವು ಲಭಿಸಿದೆ. 2011ರಲ್ಲಿ ಕಾಂಞಂಗಾಡ್ ಕ್ಷೇತ್ರ ಪುನರ್ವಿಂಗಡನೆಯಾದಾಗ ಮೊದಲ ಬಾರಿ 12,000 ಮತಗಳಿಂದ ಎದುರಾಳಿಯನ್ನು ಅವರು ಸೋಲಿಸಿದ್ದರು. ಶಾಸಕರೆಂಬ ನೆಲೆಯಲ್ಲಿ ಸಾರ್ವಜನಿಕರ ಸಮ್ಮತಿಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಙಂಗಾಡ್ ಕ್ಷೇತ್ರದ ನಿಕಟ ಪ್ರತಿಸ್ಪರ್ಧಿಯನ್ನು ಬಹುದೂರದಲ್ಲಿರಿಸಿ 26011 ಮತಗಳ ಭಾರೀ ಅಂತರದಿಂದ ವಿಜಯಿಯಾಗಿ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ. 1948 ಡಿಸೆಂಬರ್ 28ಕ್ಕೆ ಪೆರುಂಬಳದ ಕಮ್ಯುನಿಸ್ಟ್ ಗ್ರಾಮದಲ್ಲಿ ಪಿ.ಕುಂಞರಾಮನ್ ನಾಯರ್. ಎಡಯಿಲ್ಲಂ ಪಾರ್ವತಿಯಮ್ಮ ನಾಯರ್‌ರ ಮಗನಾಗಿ ಜನಿಸಿದ ಚಂದ್ರಶೇಖರನ್ ಒಕ್ಕಲುಗಳ ನ್ಯಾಯಕ್ಕಾಗಿ ಕ್ರಾಂತಿ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಮ್ಯುನಿಸ್ಟ್ ಪಕ್ಷದಲ್ಲಿ ಸಕ್ರಿಯರಾದರು.
ಕಬಡ್ಡಿ,ಫುಟ್ ಆಗಾರನಾಗಿ ಅಡ್ಡಾಡುತ್ತಿದ್ದ ಚಂದ್ರಶೇಖರನ್‌ರನ್ನು ಪಕ್ಷಕ್ಕೆ ಕರೆತಂದುದು ಇತ್ತೀಚೆಗೆ ನಿಧನರಾದ ಸಹೋದರ ಇ.ಕೆ. ಮಾಸ್ಟರ್. ಆಧುನಿಕ ಜಾಮಿನ್ದಾರರ ವಿರುದ್ಧ ಹೋರಾಟ ಚಂದ್ರಶೇಖರನ್‌ರನ್ನು ಜನನಾಯಕನನ್ನಾಗಿ ಮಾಡಿತು. ಚಮ್ಮನಾಡ್ ಪ್ರಮುಖ ಕಾಂಗ್ರೆಸ್ ನಾಯಕ ಅತಿಕ್ರಮಿಸಿದ್ದ ಜಮೀನನ್ನು ಹೋರಾಟದ ಮೂಲಕ ಲ್ಯಾಂಡ್ ಬ್ಯಾಂಕ್‌ನ ಅಧೀನಕ್ಕೆ ತರುವಲ್ಲಿ ಯಶಸ್ವಿಯಾದರು. ಎ,ಐ.ವೈ.ಎಫ್ ಜಿಲ್ಲಾ ಕಾರ್ಯದರ್ಶಿಯಾಗಿದ್ದಾಗ ಕಾಸರಗೋಡು ಜಿಲ್ಲೆ ಹೋರಾಟದ ಮುಂಚೂಣಿಯಲ್ಲಿದ್ದರು. ಪರವನಡುಕ್ಕಂ ಎಲ್‌ಪಿ ಸ್ಕೂಲ್, ಸರಕಾರಿ ಹೈಸ್ಕೂಲ್‌ನಲ್ಲಿ ಎಸೆಸೆಲ್ಸಿಯವರೆ ಕಲಿತ ನಂತರ ಸರ್ವೇ ಟ್ರೈನಿಂಗ್ ಪಡೆದರು.
1970ರಲ್ಲಿ ಎಐವೈಎಫ್ ಕಾಸರಗೋಡು ತಾಲೂಕು ಕಾರ್ಯದರ್ಶಿ, 75ರಲ್ಲಿ ಅವಿಭಜಿತ ಕಣ್ಣೂರು ಜಿಲ್ಲಾ ಕಾರ್ಯದರ್ಶಿ 76ರಲ್ಲಿ ಎಐವೈಎಫ್ ರಾಜ್ಯ ಕೌನ್ಸಿಲ್ ಸದಸ್ಯ, 79ರಲ್ಲಿ ಕಣ್ಣೂರು ಜಿಲ್ಲಾ ಸೆಕ್ರಟರಿಯೇಟ್ ಸದಸ್ಯ, 79-84ರವರೆಗೆ ಚೆಮ್ಮನಾಡ್ ಗ್ರಾಮ ಪಂಚಾಯತ್ ಸದಸ್ಯ, 87ರಲ್ಲಿ ಸಿಪಿಐ ಕಾಸರಗೋಡು ಜಿಲ್ಲಾ ಸಹಾಯಕ ಕಾರ್ಯದರ್ಶಿ, 98ರಲ್ಲಿ ರಾಜ್ಯ ಕೌನ್ಸಿಲ್ ಸದಸ್ಯ, 91ರಲ್ಲಿ ಕ್ಯಾಂಪ್ಕೊ ನಿರ್ದೇಶಕ ಮಂಡಳಿ ಸದಸ್ಯ. 2008ರಲ್ಲಿ ಲ್ಯಾಂಡ್ ರಿಫೋಂಸ್ ಸಮಿತಿ ಸದಸ್ಯ ಎಂಬ ನೆಲೆಯಲ್ಲಿ ಕಾರ್ಯನಿರ್ವಹಿಸಿದ್ದರು. ಈಗ ರಾಜ್ಯ ಸಿಪಿಐ ಸೆಕ್ರಟರಿಯೇಟ್ ಸದಸ್ಯ ಆಗಿದ್ದಾರೆ.
ಪತ್ನಿ:ಸಾವಿತ್ರಿ, ಏಕಪುತ್ರಿ ನೀಲಿ ಚಂದ್ರನ್ ಕೇರಳ ವಿಶ್ವವಿದ್ಯಾನಿಯಲಯದ ಕಾರ್ಯವಟ್ಟಂ ಕ್ಯಾಂಪಸ್‌ನಲ್ಲಿ ಎಂಫಿಲ್ ವಿದ್ಯಾರ್ಥಿನಿಯಾಗಿದ್ದಾರೆ. ಸಹೋದರ, ಸಹೋದರಿಯರು: ಮಾಲತಿ, ಮಣಿಟೀಚರ್, ಇ.ಕೃಷ್ಣನ್ ನಾಯರ್, ರೋಹಿಣಿ, ದಿವಂಗತ ಇ.ಕೆ ನಾಯರ್, ರಾಚಂದ್ರನ್ ನಾಯರ್, ದಾಕ್ಷಾಯಣಿಯಮ್ಮ ಆಗಿದ್ದಾರೆ. ಇ. ಚಂದ್ರ ಶೇಖರನ್‌ರ ವಿಳಾಸ: ಪಾರ್ವತಿ, ಪೆರುಂಬಳ, ಕಳನಾಡ್, ಕಾಸರಗೋಡು.







