ಯಾರ ವಿರುದ್ಧವೂ ಪ್ರತೀಕಾರವಿಲ್ಲ: ಪಿಣರಾಯಿ ವಿಜಯನ್
.jpg)
ಅಲಪ್ಪುಝ, ಮೇ 24: ಯಾವುದೇ ರೀತಿಯ ಪ್ರತೀಕಾರಗಳು ಯಾರ ವಿರುದ್ಧವೂ ನಡೆಸುವುದಿಲ್ಲ ಆದರೆ ಕಾನೂನಿನ ಕೈಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುವುದು ಎಂದು ನಿಯೋಜಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ . ಕೋಮು ವಿಧ್ವಂಸಕ ಶಕ್ತಿಗಳ ವಿರುದ್ಧ ಈ ಚುನಾವಣೆಯ ತೀರ್ಪು ಬಂದಿದೆ. ನಾಡಿನಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವ ಸಲುವಾಗಿ ಜನತೆ ಈ ತೀರ್ಪು ನೀಡಿದೆ ಎಂದು ಪುನ್ನಂಪ್ರದಲ್ಲಿ ಪಿಣರಾಯಿ ಹೇಳಿದ್ದಾರೆ.
ಪರಂಪರಾಗತ ಕ್ಷೇತ್ರಗಳ ಪುನರ್ ನಿರ್ಮಾಣವನ್ನು ಬಯಸಿ ನೀಡಿರುವ ಈ ತೀರ್ಪಿನಲ್ಲಿ ಕಾರ್ಮಿಕರು ಉತ್ಸುಕತೆ ತೋರಿಸಿದ್ದಾರೆ ಎಂಬುದು ಚುನಾವಣೆಯಿಂದ ಸ್ಪಷ್ಟವಾಗಿದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
Next Story





