Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಬ್ರೆಡ್, ಬರ್ಗರ್, ಪಿಝ್ಝೆಗಳಲ್ಲಿ...

ಬ್ರೆಡ್, ಬರ್ಗರ್, ಪಿಝ್ಝೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ

ಆರೋಗ್ಯ ಇಲಾಖೆಯಿಂದ ತನಿಖೆಗೆ ಆದೇಶ

ವಾರ್ತಾಭಾರತಿವಾರ್ತಾಭಾರತಿ24 May 2016 10:25 PM IST
share

ಹೊಸದಿಲ್ಲಿ, ಮೇ 24: ಭಾರತದಲ್ಲಿ ಮಾರಾಟವಾಗುವ ಬ್ರೆಡ್ ಹಲವಾರು ವಿಷಕಾರಕ ರಾಸಾಯನಿಕಗಳಿಂದ ಕೂಡಿದ್ದು ಥೈರಾಯ್ಡೆ ಸಮಸ್ಯೆ ಮತ್ತು ಕ್ಯಾನ್ಸರ್ ಉಂಟು ಮಾಡಬಹುದು ಎಂದು ಸೆಂಟರ್ ಫಾರ್ ಸಾಯನ್ಸ್ ಆ್ಯಂಡ್ ಎನ್ವಿರಾನ್ಮೆಂಟ್ ಹಲವಾರು ಪರೀಕ್ಷೆಗಳ ಮೂಲಕ ಪತ್ತೆ ಹಚ್ಚಿದ್ದು ಕೇಂದ್ರ ಆರೋಗ್ಯ ಸಚಿವಾಲಯ ಈ ನಿಟ್ಟಿನಲ್ಲಿ ತನಿಖೆಗೆ ಆದೇಶಿಸಿದೆ.

ಐದು ಜನಪ್ರಿಯ ಬಹುರಾಷ್ಟ್ರೀಯ ಸಂಸ್ಥೆಗಳಾದ ಕೆಎಫ್‌ಸಿ, ಪಿಝ್ಝೆ ಹಟ್, ಡೊಮಿನೋಸ್, ಸಬ್ ವೇ, ಮೆಕ್ ಡೊನಾಲ್ಡ್ಸ್ ಹಾಗೂ ಸ್ಲೈಸ್ ಆಫ್ ಇಟಲಿ ಇಲ್ಲಿನ ಉತ್ಪನ್ನಗಳಲ್ಲಿಯೂ ಅತ್ಯಧಿಕ ರಾಸಾಯನಿಕ ಅಂಶಗಳಿವೆಯೆಂದು ಸಿಎಸ್ಸಿ ವರದಿ ತಿಳಿಸಿದೆ.
ಪ್ರತಿ ದಿನ ಎರಡು ಸ್ಲೈಸ್ ಬ್ರೆಡ್ ತಿಂದರಷ್ಟೇ ಥೈರಾಯ್ಡೆ ಮತ್ತು ಕ್ಯಾನ್ಸರ್ ಅಪಾಯ ಸೃಷ್ಟಿಸಲು ಸಾಕು,’’ಎನ್ನುತ್ತಾರೆ ಸಿಎಸ್ಸಿ ಉಪ ನಿರ್ದೇಶಕ ಚಂದ್ರ ಭೂಷಣ್.
  ದಿಲ್ಲಿಯ ಹಲವಾರು ಅಂಗಡಿಗಳಿಂದ 38 ಸ್ಯಾಂಪಲ್‌ಗಳನ್ನು ಪರೀಕ್ಷಿಸಿ ಅವುಗಳಲ್ಲಿರುವ ಪೊಟ್ಯಾಶಿಯಂ ಬ್ರೊಮೇಟ್ ಹಾಗೂ ಪೊಟ್ಯಾಶಿಯಂ ಐಯೊಡೇಟ್ ಅಂಶಗಳಿಗಾಗಿ ಪರೀಕ್ಷೆಗೊಡ್ಡಲಾಯಿತು, ‘‘84 ಶೇ. ಕ್ಕಿಂತಲೂ ಅಧಿಕ ಉತ್ಪನ್ನಗಳಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾದವು,’’ಎಂದು ಭೂಷಣ್ ಹೇಳಿದ್ದಾರೆ. ವೈಟ್ ಬ್ರೆಡ್‌ನಲ್ಲಿ ಅತ್ಯಧಿಕ ರಾಸಾಯನಿಕ ಅಂಶಗಳು ಪತ್ತೆಯಾದರೆ ಬಹುಧಾನ್ಯ ಬ್ರೆಡ್‌ನಲ್ಲಿ ಕಡಿಮೆ ರಾಸಾಯನಿಕ ಅಂಶಗಳು ಪತ್ತೆಯಾದವು.
ಬೇಕ್ ಮಾಡುವ ಮೊದಲು ಹಿಟ್ಟಿಗೆ ಪೊಟ್ಯಾಶಿಯಂ ಬ್ರೊಮೇಟ್ ಹಾಗೂ ಪೊಟ್ಯಾಶಿಯಂ ಐಯೊಡೇಟ್ ಹಿಂದೆಯೇ ಉಪಯೋಗಿಸಲಾಗುತ್ತಿದ್ದರೂ, ವಿಶ್ವ ಸಂಸ್ಥೆಯ ಎಚ್ಚರಿಕೆಯ ನಂತರ ಚೀನಾ, ಶ್ರೀಲಂಕಾ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳು ಅವನ್ನು ನಿಷೇಧಿಸಿದ್ದವು. ಆದರೆ ಭಾರತದಲ್ಲಿ ಮಾತ್ರ ಈ ಉತ್ಪನ್ನಗಳು ನಿಷೇಧಗೊಂಡಿರಲಿಲ್ಲ.
  ಸಿಎಸ್ಸಿ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ‘‘ಈ ಬಗ್ಗೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಹೇಳಲಾಗಿದೆ. ಗಾಬರಿ ಪಡುವ ಅಗತ್ಯವಿಲ್ಲ. ತನಿಖಾ ವರದಿ ಶೀಘ್ರದಲ್ಲಿಯೇ ಹೊರಬರಲಿದೆ,’’ಎಂದರು.
  
ಅತ್ತ ಆಲ್ ಇಂಡಿಯಾ ಬ್ರೆಡ್ ಮ್ಯಾನುಫ್ಯಾಕ್ಚರರ್ಸ್‌ ಎಸೋಸಿಯೇಶನ್ ತಾನು ಸಿಎಸ್ಸಿ ವರದಿಯನ್ನು ಇನ್ನಷ್ಟೇ ನೋಡಬೇಕಿದೆ ಎಂದು ಹೇಳಿದೆ. ‘‘ಭಾರತದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರವು ಪೊಟ್ಯಾಶಿಯಂ ಬ್ರೊಮೇಟ್ ಮತ್ತು/ಅಥವಾ ಪೊಟ್ಯಾಶಿಯಂ ಐಯೊಡೇಟನ್ನು ಬ್ರೆಡ್‌ನಲ್ಲಿ ಗರಿಷ್ಠ 50 ಪಿಪಿಎಂ ಹಾಗೂ ಬೇಕರಿ ಉತ್ಪನ್ನಗಳಿಗೆ ಗರಿಷ್ಠ 20 ಪಿಪಿಎಂ ಉಪಯೋಗಿಸಲು ಅನುಮತಿಸುತ್ತದೆ,’’ಎಂದು ಅಸೋಸಿಯೇಶನ್ ಹೇಳಿದೆ.
 
ಸ್ಯಾಂಡ್‌ವಿಚ್ ಬ್ರೆಡ್, ಪಾವ್, ಬನ್ ಹಾಗೂ ವೈಟ್ ಬ್ರೆಡ್‌ನಲ್ಲಿ ಈ ಎರಡು ರಾಸಾಯನಿಕಗಳು ಅತ್ಯಧಿಕ ಪ್ರಮಾಣದಲ್ಲಿವೆಯೆಂದು ಹಾಗೂ ಹಾರ್ವೆಸ್ಟ್ ಗೋಲ್ಡ್, ಬ್ರಿಟಾನಿಯಾ ಮತ್ತು ಪರ್ಪೆಕ್ಟ್ ಬ್ರೆಡ್ ಉತ್ಪನ್ನಗಳಲ್ಲಿ ಅತ್ಯಧಿಕ ರಾಸಾಯನಿಕಗಳಿವೆಯೆಂದು ಸಿಎಸ್ಸಿ ವರದಿ ತಿಳಿಸಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X