ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ವಸತಿ ಸಮುಚ್ಚಯದಲ್ಲಿ ಕಳ್ಳತನ
ಮಂಗಳೂರು, ಮೇ 24; ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ವಸತಿ ಸಮುಚ್ಚಯದಲ್ಲಿರುವ ಖಾಲಿ ಮನೆಗಳ ಬೀಗವನ್ನು ಒಡೆದು ಕಳವುಗೈದ ಘಟನೆ ಬೈತುರ್ಲಿಯಲ್ಲಿ ನಡೆದಿದೆ.
ಮೇ 21ರಂದು ಗ್ರಾಹಕರೊಬ್ಬರಿಗೆ ವಸತಿ ಸಮುಚ್ಚಯದಲ್ಲಿರುವ ಮನೆಯನ್ನು ತೋರಿಸಲು ಹೋದಾಗ ಕಳವು ಘಟನೆ ಬೆಳಕಿಗೆ ಬಂದಿದೆ. ಎಲ್ಲಾ ಮನೆಯ ಬಾಗಿಲುಗಳನ್ನು ಕೀ ಉಪಯೋಗಿಸಿ ತೆರೆಯಲಾಗಿದ್ದು ಎರಡು ಮನೆಯ ಬಾಗಿಲುಗಳ ಬೀಗವನ್ನು ಒಡೆದು ತೆಗೆಯಲಾಗಿದೆ.
ಎಲ್ಲಾ ಮನೆಗಳ ಬಾತ್‌ರೂಮ್‌ಗಳಲ್ಲಿ ಅಳವಡಿಸಿರುವ ತಾಮ್ರದ ನಳ್ಳಿ ನೀರಿನ ಪೈಪುಗಳನ್ನು ಕಳ್ಳರು ಕಳವುಗೈದಿದ್ದು ಕಳವಾದ ಸೊತ್ತಿನ ಅಂದಾಜು ವೌಲ್ಯ 1.5 ಲಕ್ಷ ರೂ ಆಗಬಹುದು ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





