ದಿಲ್ಲಿಯ ನಝಫ್‌ಗಡ ಪ್ರದೇಶದ ಕೈರ್ ಗ್ರಾಮದಲ್ಲಿ ಮಂಗಳವಾರ ತುರ್ತು ಭೂಸ್ಪರ್ಶಕ್ಕೆ ಪ್ರಯತ್ನಿಸಿದ್ದ ಏರ್ ಆ್ಯಂಬುಲೆನ್ಸ್ ಪತನಗೊಂಡು ಅದರಲ್ಲಿದ್ದ ಏಳು ಜನರ ಪೈಕಿ ಇಬ್ಬರು ಗಾಯಗೊಂಡಿದ್ದಾರೆ. ಪಟ್ನಾದಿಂದ ದಿಲ್ಲಿಗೆ ಬರುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ತುರ್ತು ಭೂಸ್ಪರ್ಶಕ್ಕೆ ಕಾರಣವೆನ್ನಲಾಗಿದೆ.