ಮಾಂಡೋವಿ ಮೋಟಾರ್ಸ್ ಹೊಸ ಆಲ್ಟೋ 800 ಮಾರುಕಟ್ಟೆಗೆ ಬಿಡುಗಡೆ
ಮಂಗಳೂರು, ಮೇ 24: ನಗರದ ಮಾರುತಿ ಕಾರುಗಳ ಅಧಿಕೃತ ಮಾರಾಟಗಾರ, ಸೇವಾದಾರ ಹಾಗೂ ದ.ಕ. ಜಿಲ್ಲೆಗೆ ಮಾರುತಿ ಕಾರುಗಳನ್ನು ಪರಿಚಯಿಸಿದ ಮಾಂಡೋವಿ ಮೋಟಾರ್ಸ್ನಲ್ಲಿ ಹೊಸ ಆಲ್ಟೋ 800 ಕಾರನ್ನು ದ.ಕ. ಮಾರುಕಟ್ಟೆಗೆ ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾದ ಸೀನಿಯರ್ ಮ್ಯಾನೇಜರ್ ವಿಠ್ಠಲ್ ಶೆಟ್ಟಿಗಾರ್ ಬಿಡುಗಡೆಗೊಳಿಸಿದರು. ಹೊಸ ಕಾರಿನ ಕೀಲಿಕೈಯನ್ನು ಮೊದಲ 4 ಗ್ರಾಹಕರಾದ ಎಂ.ಆರ್.ವಾಸುದೇವ, ಪುನೀತಾಕುಮಾರಿ, ಆಶಾ ಕೆ, ಪ್ರಭಾಕರ್ರಿಗೆ ಹಸ್ತಾಂತರಿಸಲಾಯಿತು.ಸಂದರ್ಭ ಮಾಂಡೋವಿ ಮೋಟಾರ್ಸ್ನ ಸೇಲ್ಸ್ ವಿಭಾಗದ ಎ.ಜಿ.ಎಂ ಶಶಿಧರ ಕಾರಂತ್, ಸೇಲ್ಸ್ ಮ್ಯಾನೇಜರ್ ಕಿಶನ್ ಶೆಟ್ಟಿ, ಡೆಪ್ಯುಟಿ ಸೇಲ್ಸ್ ಮ್ಯಾನೇಜರ್ ಲವೀನಾ ಪಿಂಟೊ, ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಮುರಳೀಧರ್ ಉಪಸ್ಥಿತರಿದ್ದರು. ವೈಶಿಷ್ಟ್ಯಗಳು: *ರಿಮೋಟ್ ಕೀ ರಹಿತ ಪ್ರವೇಶ * ಹಿಂದಿನ ಸೀಟ್ ಹೆಚ್ಚು ಆರಾಮ; ಇಂಟೆಗ್ರೇಟೆಡ್ ಹೆಡ್ರೆಸ್ಟ್ *ಹಿಂದಿನ ಬಾಗಿಲಿಗೆ ಚೈಲ್ಡ್ ಲಾಕ್ *ಹೊಸ ಏರೋ ಎಡ್ಜ್ ಡಿಸೈನ್.ೊಸ ಆಕರ್ಷಕ ಹೆಡ್ಲ್ಯಾಂಪ್ ವಿನ್ಯಾಸ *ಅಗಲವಾದ ಕೆಳ ಮುಂಭಾಗದ ಗ್ರಿಲ್ *ಮುಂದೆ ಪಾಗ್ ಲ್ಯಾಂಪ್ಗೆ ಅವಕಾಶ *ಹೆಚ್ಚಿನ ಕಾರ್ಯಕ್ಷಮತೆಗೆ ಹೊಸ ಪೀಳಿಗೆಯ ಬ್ರೇಕ್ ಬೂಸ್ಟರ್.*ತಾಜಾ, ಸುಂದರ ಮತ್ತು ಶ್ರೇಷ್ಠವಾದ ಒಳಭಾಗಗಳು *ಹೊಸ ಡಿಸೈನರ್ ಸೀಟ್ ಮತ್ತು ಡೋರ್ ಟ್ರಿಮ ಫ್ಯಾಬ್ರಿಕ್.
*ಈ ಕಾರು ಮೊಹಿಟೊ ಗ್ರೀನ್ ಮತ್ತು ಸೆರುಲಿಯನ್ ಬ್ಲ್ಯೂ ಬಣ್ಣಗಳಲ್ಲಿ ಲಭ್ಯ ಹಾಗೂ ಇದರ ಇಂಧನ ದಕ್ಷತೆ: ಪೆಟ್ರೋಲ್ - ಪ್ರತೀ ಗಂಟೆಗೆ 24.7 ಕಿ.ಮೀ. ಆಗಿರುತ್ತದೆ. ಈ ಕಾರಿನ ಎಕ್ಸ್ ಶೋರೂಂ ಬೆಲೆ 2.62 ಲಕ್ಷ ರೂ.ಗಳಿಂದ ಪ್ರಾರಂಭಗೊಳ್ಳಲಿದೆ. ಗ್ರಾಹಕರು ಟೆಸ್ಟ್ ಡ್ರೈವ್ ಹಾಗೂ ಹೆಚ್ಚಿನ ಮಾಹಿತಿಗಾಗಿ ನಗರದ ಬಲ್ಮಠ ರಸ್ತೆಯಲ್ಲಿರುವ ಮಾಂಡೋವಿ ಮೋಟಾರ್ಸ್ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.