ಬಜರಂಗದಳದ ಶಸ್ತ್ರಾಸ್ತ್ರ ತರಬೇತಿಯಲ್ಲಿ ಮುಸ್ಲಿಮ್ ವೇಷಧಾರಿ ದುಷ್ಕರ್ಮಿಗಳು !
ಅಯೋಧ್ಯೆಯಲ್ಲಿ ಬಜರಂಗದಳ ನಡೆಸುತ್ತಿರುವ ಶಸ್ತ್ರಾಸ್ತ್ರ ತರಬೇತಿ ಶಿಬಿರದ ಈ ವೀಡಿಯೋ ನೋಡಿ. ಬಂದೂಕು, ತಲವಾರು ಹಾಗು ಕೋಲುಗಳನ್ನು ಹಿಡಿದುಕೊಂಡು ವಿವಿಧ ತಾಲೀಮು ನಡೆಸುತ್ತಿರುವ ಬಜರಂಗದಳ ಕಾರ್ಯಕರ್ತರು ಅಣಕು ಕಾರ್ಯಾಚರನೆಯೊಂದನ್ನು ನಡೆಸುತ್ತಿದ್ದಾರೆ. ಆದರೆ ಅದರಲ್ಲಿ ಅವರು ಕೊಲ್ಲುತ್ತಿರುವ 'ದುಷ್ಕರ್ಮಿಗಳ ' ಚಹರೆ ನೋಡಿ. ಆ ' ದುಷ್ಕರ್ಮಿಗಳನ್ನು' ಗಡ್ಡ, ಟೋಪಿ ಹಾಕಿಸಿ ಮುಸ್ಲಿಮರಂತೆ ತೋರಿಸಲಾಗಿದೆ. ಇಂತಹ ಶಿಬಿರಗಳು ಸಂಘ ಪರಿವಾರದಿಂದ ಉತ್ತರ ಪ್ರದೇಶದ ಎಲ್ಲೆಡೆ ವ್ಯಾಪಕವಾಗಿ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿವೆ ಎಂಬ ವರದಿಗಳಿವೆ.
Next Story





