ಇವುಗಳನ್ನು ಫ್ರಿಜ್‌ನಲ್ಲಿ ಇಡಲೇಬೇಡಿ. ಏಕೆಂದರೆ?

ಕೆಲವು ಆಹಾರಗಳನ್ನು ರೆಫ್ರಿಜರೇಟರಿನಲ್ಲಿ ಇಡುವುದು ಧೀರ್ಘ ಸಮಯದವರೆಗೆ ತಾಜಾ ಆಗಿರಲು ನೆರವಾಗುತ್ತದೆ. ಆದರೆ ಕೆಲವು ಆಹಾರಗಳು ಫ್ರಿಜ್ಜಲ್ಲಿ ಇಟ್ಟರೆ ಹಾಳಾಗುತ್ತದೆ. ಕೆಲವು ಆಹಾರ ವಸ್ತುಗಳನ್ನು ಫ್ರಿಜ್ಜಲ್ಲಿ ಇಡುವ ಅಗತ್ಯವೇ ಇರುವುದಿಲ್ಲ. ಏಕೆಂದರೆ ಅವುಗಳಿಗೆ ಯಾವುದೇ ರೂಪದ ಬ್ಯಾಕ್ಟೀರಿಯ ಬರುವುದಿಲ್ಲ. ಬದಲಾಗಿ ಅವುಗಳನ್ನು ತಂಪಾದ ಮತ್ತು ಒಣಗಿದ ಸ್ಥಳಗಳಲ್ಲಿ ಅಂದರೆ ಕೋಣೆಯ ಉಷ್ಣತೆಯಲ್ಲಿ ಇಟ್ಟಲ್ಲಿ ಅವು ಇನ್ನೂ ಹೆಚ್ಚು ತಾಜಾವಾಗಿ ಇರುತ್ತವೆ. ಆದರೆ ಬೇಸಗೆಯಲ್ಲಿ ಕೋಣೆಯ ಉಷ್ಣತೆ ಅತ್ಯಧಿಕವಾಗಿರುವ ಕಾರಣ ಈ ವಾದ ಒಪ್ಪುವುದಿಲ್ಲ. ರೆಫ್ರಿಜರೇಟರಲ್ಲಿ ಇಡಬಾರದ ಆಹಾರ ವಸ್ತುಗಳ ವಿವರಗಳು ಇಲ್ಲಿವೆ.
ಬಟಾಟೆಗಳು
ಬಟಾಟೆಗಳನ್ನು ಫ್ರಿಜ್ಜಲ್ಲಿಟ್ಟರೆ ಅವುಗಳ ಫ್ಲೇವರ್ ಹಾಲಾಗುತ್ತದೆ ಮತ್ತು ಅದಕ್ಕೆ ಸ್ಟಾರ್ಚ್ ತಾಗುವ ಕಾರಣ ಬೇಗನೇ ಸಕ್ಕರೆ ರೂಪ ತಾಳುತ್ತದೆ. ಅವುಗಳನ್ನು ಕೋಣೆಯ ಉಷ್ಣತೆಯಲ್ಲಿ ಪೇಪರ್ ಬ್ಯಾಗಲ್ಲಿ ಹಾಕಿಡಬಹುದು. ಸ್ಟಾರ್ಚ್ ಸಕ್ಕರೆಯಾಗಿ ಪರಿಣಮಿಸಿದಾಗ ಸಿಹಿಯಾದ ಜಡವಾದ ಬಟಾಟೆ ಉಳಿಯುತ್ತದೆ.
ಜೇನುತುಪ್ಪ
ಜೇನುತುಪ್ಪವನ್ನು ರೆಫ್ರಿಜರೇಟರಲ್ಲಿ ಹಾಕಿದಾಗ ಅದು ಹರಳಾಗುತ್ತದೆ. ಹೀಗಾಗಿ ಗಾಜಿನ ಬಾಟಲಿಯಲ್ಲಿ ಕೋಣೆಯ ವಾತಾವರಣದಲ್ಲಿಡುವುದು ಉತ್ತಮ ಮತ್ತು ಹೆಚ್ಚು ತಾಜಾವಾಗಿದ್ದು ಧೀರ್ಘಕಾಲ ಇರುತ್ತದೆ.
ಕಲ್ಲಂಗಡಿ ಹಣ್ಣು
ಇಡೀ ಕಲ್ಲಂಗಡಿ ಹಣ್ಣನ್ನು ರೆಫ್ರಿಜರೇಟರಲ್ಲಿಡುವುದು ಸರಿಯಲ್ಲ. ಕಲ್ಲಂಗಡಿ ಅಥವಾ ಕರಬೂಜಗಳು ರೆಫ್ರಿಜರೇಟರಲ್ಲಿ ಇಟ್ಟಾಗ ಚಳಿಗೆ ಗಾಯವಾಗಿಬಿಡುತ್ತವೆ. ಹಾಗೆ ಹಣ್ಣುಗಳು ಬಣ್ಣ ಮತ್ತು ರುಚಿ ಎರಡನ್ನೂ ಕಳೆದುಕೊಳ್ಳುತ್ತವೆ. ಒಮ್ಮೆ ಹಣ್ಣುಗಳನ್ನು ಕತ್ತರಿಸಿದರೆ ನಂತರ ಬೇಕಾದರೆ ಫ್ರಿಜ್ಜಿನಲ್ಲಿ ಇಡಬಹುದು. ಆದರೆ ಚಳಿ ಗಾಯವಾದ ಹಣ್ಣಿನ ಮೇಲೆ ಬ್ಯಾಕ್ಟೀರಿಯ ಕಾಣಿಸಿಕೊಂಡು ಸೇವಿಸುವುದು ಅಸಾಧ್ಯವಾಗುತ್ತದೆ.
ಬ್ರೆಡ್
ಮುಖ್ಯವಾಗಿ ಬಿಳಿ ಬ್ರೆಡ್ಡನ್ನು ಫ್ರಿಜ್ಜಲ್ಲಿ ಇಡಬಾರದು. ಅದನ್ನು ಒಣಗಿದ ಸ್ಥಳದಲ್ಲಿ ಇಡಬೇಕು. ಬ್ರೆಡ್ಡುಗಳು ಬೇಗನೇ ಒಣಗುತ್ತವೆ. ನಾಲ್ಕು ದಿನಗಳಿಗಾಗುವಷ್ಟು ಬ್ರೆಡ್ಡನ್ನು ಡೀಪ್ ಫ್ರೀಜ್ ಮಾಡಿಟ್ಟುಕೊಳ್ಳಬಹುದು. ಕಾಫಿ: ಕಾಫಿಯನ್ನು ಫ್ರಿಜ್ಜಲ್ಲಿಟ್ಟರೆ ಅದು ರುಚಿ ಕಳೆದುಕೊಳ್ಳುವುದು ಮಾತ್ರವಲ್ಲ, ಇತರ ಆಹಾರಗಳಿಂದ ವಾಸನೆಯನ್ನೂ ಸ್ವೀಕರಿಸುತ್ತದೆ. ಫ್ರಿಜ್ಜಿನಲ್ಲಿರುವ ತೇವಾಂಶವು ಕಾಫಿಯನ್ನು ಬೇಗನೇ ಕೊಳೆಯುವಂತೆ ಮಾಡುತ್ತದೆ. ಕಾಫಿಯನ್ನು ವಾತಾವರಣದ ಉಷ್ಣತೆಗೆ ಇಡಬೇಕು.
ಬಾಳೆಹಣ್ಣುಗಳು
ನಮಗೆ ಗೊತ್ತಿದ್ದಂತೆ ಬಾಳೆಹಣ್ಣು ಬಲಿತಷ್ಟು ಸಿಹಿ ಹೆಚ್ಚಾಗಿ ಆರೋಗ್ಯಕರವಾಗುತ್ತದೆ. ಆದರೆ ನಾವು ಬಾಳೆಹಣ್ಣುಗಳನ್ನು ರೆಫ್ರಿಜರೇಟರಲ್ಲಿಟ್ಟರೆ ಬಲಿಯುವುದು ನಿಧಾನವಾಗುತ್ತದೆ. ಹೀಗಾಗಿ ಬಾಳೆಹಣ್ಣುಗಳನ್ನು ವಾತಾವರಣದ ಉಷ್ಣತೆಗೆ ಇಡಬೇಕು. ಹೀಗಿಟ್ಟ ಹಣ್ಣುಗಳಲ್ಲಿ ಹೆಚ್ಚು ಆರೋಗ್ಯಕರ ಅಂಶವಿರುತ್ತದೆ. ಹಣ್ಣನ್ನು ಫ್ರಿಜ್ಜಲ್ಲಿಟ್ಟಾಗ ಪೊಟಾಶಿಯಂ ಅಂಶ ಕಳೆದು ಹೋಗುತ್ತದೆ.
ಈರುಳ್ಳಿಗಳು
ಇವನ್ನು ಫ್ರಿಜ್ಜಲ್ಲಿಟ್ಟಾಗ ಮೆದುವಾಗಿಬಿಡುತ್ತವೆ. ಈರುಳ್ಳಿಗಳ್ನನು ಒಣಗಿದ ಸ್ಥಳದಲ್ಲಿಡಬೇಕು. ಆದರೆ ತರಕಾರಿಗಳ ಜೊತೆಗಿಡಬಾರದು. ಅಗತ್ಯವಿದ್ದಲ್ಲಿ ಒಂದು ದಿನಕ್ಕೆ ಫ್ರಿಜ್ಜಲ್ಲಿಡಬಹುದು.
ಆಲಿವ್ ಎಣ್ಣೆ
ಆಲಿವ್ ಎಣ್ಣೆಯನ್ನು ಫ್ರಿಜ್ಜಲ್ಲಿಟ್ಟರೆ ತುಪ್ಪದಂತೆ ದಪ್ಪವಾಗುತ್ತದೆ. ಒಣ ಸ್ಥಳದಲ್ಲಿಡುವುದು ಉತ್ತಮ. ಫ್ರಿಜ್ಜಲ್ಲಿಟ್ಟಾಗ ಕೆಲವು ಕಣಗಳು ಉತ್ಪನ್ನವಾಗಿ ದೇಹಕ್ಕೆ ಹಾನಿಯುಂಟು ಮಾಡಬಹುದು.
ಟೊಮ್ಯಾಟೋಗಳು
ಇವುಗಳನ್ನು ಫ್ರಿಜ್ಜಲ್ಲಿಟ್ಟರೆ ರುಚಿ ಕಳೆದುಕೊಳ್ಳುತ್ತವೆ. ಅಲ್ಲದೆ ಫಂಗಲ್ ಸೋಂಕಾಗಿ ಸೇವನೆಗೆ ಅರ್ಹವಾಗುವುದಿಲ್ಲ.
ಬೆಳ್ಳುಳ್ಳಿ
ಇದನ್ನು ಫ್ರಿಜ್ಜಲ್ಲಿಟ್ಟರೆ ಮೊಳಕೆಯೊಡೆಯುತ್ತದೆ. ಅಲ್ಲದೆ ರಬ್ಬರಿನಂತಾಗುತ್ತದೆ. ಇದರಿಂದ ಬಾಳ್ವಿಕೆ ಕಡಿಮೆಯಾಗುತ್ತದೆ. ಬೆಳ್ಳುಳ್ಳಿಯನ್ನು ತುಂಡು ಮಾಡದ ಹೊರತು ಫ್ರಿಜ್ಜಲ್ಲಿಡಬಾರದು.
ಕೃಪೆ: http://indianexpress.com/







