PUC ಪ್ರತಿಭಾವಂತರು


ಆದಂ ಇಂಫಾಲ್ - 544(90%)
ಪುತ್ತೂರು ಸೈಂಟ್ ಫಿಲೋಮಿನ ಪಿ.ಯು ಕಾಲೇಜಿನ ಆದಂ ಇಂಫಾಲ್ ರವರು ವಾಣಿಜ್ಯ ವಿಭಾಗದಲ್ಲಿ 544 ಅಂಕಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಉಪ್ಪಿನಂಗಡಿ ಕೊಡಿಪ್ಪಾಡಿ ನಿವಾಸಿಗಳಾದ ಇಬ್ರಾಹೀಂ ಮತ್ತು ತಾಹಿರ ದಂಪತಿಯ ಪುತ್ರ.
ಹತ್ತನೇ ತರಗತಿಯಲ್ಲೂ 91% ಅಂಕ ಪಡೆದು ಉತ್ತೀರ್ಣರಾಗಿದ್ದ ವಿದ್ಯಾರ್ಥಿ ಇಂಫಾಲ್ ಭವಿಷ್ಯದಲ್ಲಿ ಇನ್ನಷ್ಟು ಶ್ರದ್ಧೆ ಪರಿಶ್ರಮದಿಂದ ಕಲಿತು ಮುಂದಕ್ಕೆ ಐ.ಎ.ಎಸ್ ಅಧಿಕಾರಿಯಾಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಮಹಮ್ಮದ್ ಅಫ್ರೀದ್ - 530
ಬಜ್ಪೆ ಸೈಂಟ್ ಜೋಸೆಫ್ ಪಿ ಯು ಕಾಲೇಜಿನ ಮಹಮ್ಮದ್ ಅಫ್ರೀದ್ ರವರು ವಿಜ್ಞಾನ ವಿಭಾಗದಲ್ಲಿ 530 ಅಂಕಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಬಜ್ಪೆ ನಿವಾಸಿ ಶೈಕ್ ಮತ್ತು ಸೌಧ ದಂಪತಿಯ ಪುತ್ರ.

ಅನ್ಸಾರ್ ಶಾಫಿ - 527
ಬೆಳ್ತಂಗಡಿ ಮದ್ದಡ್ಕದ ಅನ್ಸಾರ್ ಶಾಫಿಯವರು ಪಿ ಯು ವಿಜ್ಞಾನ ವಿಭಾಗದಲ್ಲಿ 527 ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಉಜಿರೆ ಎಸ್.ಡಿ.ಯಂ ಕಾಲೇಜು ವಿದ್ಯಾರ್ಥಿಯಾಗಿದ್ದು ರಹ್ಮತುಲ್ಲ ಶಾಫಿ ಮತ್ತು ಬೀಫಾತಿಮಾ ದಂಪತಿಯ ಪುತ್ರ







