Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಉತ್ತರ ಪ್ರದೇಶದಲ್ಲಿ ಆ್ಯಪ್ ಮೂಲಕ...

ಉತ್ತರ ಪ್ರದೇಶದಲ್ಲಿ ಆ್ಯಪ್ ಮೂಲಕ ಅಪೌಷ್ಟಿಕತೆ ವಿರುದ್ಧ ಹೋರಾಡುತ್ತಿರುವ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್

ವಾರ್ತಾಭಾರತಿವಾರ್ತಾಭಾರತಿ25 May 2016 1:06 PM IST
share
ಉತ್ತರ ಪ್ರದೇಶದಲ್ಲಿ ಆ್ಯಪ್ ಮೂಲಕ ಅಪೌಷ್ಟಿಕತೆ ವಿರುದ್ಧ ಹೋರಾಡುತ್ತಿರುವ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್

32 ವರ್ಷದ ಐಎಎಸ್ ಅಧಿಕಾರಿ ಸುಹಾಸ್ ಎಲ್ ವೈ ಕರ್ನಾಟಕದ ಶಿವಮೊಗ್ಗದವರು. ಸುಹಾಸ್ ಬೆಂಗಳೂರಿನ ಸ್ಯಾಪ್ ಲ್ಯಾಬಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದರು. ಸುರತ್ಕಲ್ ನಲ್ಲಿ ಎನ್‌ಐಟಿ ಪಾಸಾಗಿ 2007ರಲ್ಲಿ ಐಎಎಸ್ ಸೇರಿದ್ದರು.

ಅಜಂಗಢದ ಜಿಲ್ಲಾಧಿಕಾರಿಯಾಗಿ ಈ ತಂತ್ರಜ್ಞಾನದಲ್ಲಿ ಉತ್ಸಾಹಿ ಮತ್ತು ಪುಸ್ತಕ ಪ್ರೇಮಿ ಯುವಕ ಉತ್ತರಪ್ರದೇಶವು ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾದ ಅಪೌಷ್ಟಿಕತೆಯ ವಿರುದ್ಧ ತಂತ್ರಜ್ಞಾನದ ಮೂಲಕ ಹೋರಾಡುತ್ತಿದ್ದಾರೆ. ಸರ್ಕಾರಿ ದಾಖಲೆಗಳ ಪ್ರಕಾರ ಭಾರತದ ಶೇ. 36ರಷ್ಟು ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಉತ್ತರ ಪ್ರದೇಶದ ಅಪೌಷ್ಟಿಕತೆ ಪ್ರಮಾಣ ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಹೆಚ್ಚಾಗಿದ್ದು, ಶೇ. 40ರಷ್ಟು ಇದೆ. 2015ರಲ್ಲಿ ಸುಹಾಸ್ ಅಧಿಕಾರ ಸ್ವೀಕರಿಸುವ ಮೊದಲೇ ಉತ್ತರ ಪ್ರದೇಶದಲ್ಲಿ ರಾಜ್ಯ ಪೌಷ್ಟಿಕತೆ ಕಾರ್ಯಸೂಚಿಯನ್ನು ಆರಂಭಿಸಲಾಗಿತ್ತು. ಅದನ್ನೇ ಮೂಲವಾಗಿಸಿಕೊಂಡು ಅವರು ವೈಟ್ ಆಟ್ ಎ ಗ್ಲಾನ್ಸ್(ಕುಪೋಷಣ್ ಕಾ ದರ್ಪಣ್) ಆಪ್ ರೂಪಿಸಿದ್ದಾರೆ. ಈ ಆಪ್ ಮೂಲಕ ಅಂಗನವಾಡಿ ಕಾರ್ಯಕರ್ತೆ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ತಿಳಿದುಕೊಂಡು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿಗಳ ಪ್ರಕಾರ ಮಗು ಅಪೌಷ್ಟಿಕತೆಯಿಂದ ಬಳಲುತ್ತಿದೆಯೇ ಎಂದು ಕಂಡುಕೊಳ್ಳಬಹುದು. ಈ ಆಪ್ ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಸಲಹೆಗಳು ಮತ್ತು ವಿಧಾನಗಳನ್ನೂ ಕೊಡುತ್ತದೆ. ಆಪ್ ಗೆ ಮುನ್ನ ಅಂಗನವಾಡಿ ಕಾರ್ಯಕರ್ತೆ ಉದ್ದನೆಯ ಮತ್ತು ಧೀರ್ಘಕಾಲೀನ ಪ್ರಕ್ರಿಯೆಯನ್ನು ಅನುಸರಿಸಬೇಕಾಗಿತ್ತು. 100 ಪುಟಗಳ ಪ್ರಗತಿ ಚಾರ್ಟ್ ಮೂಲಕ ಅಪೌಷ್ಟಿಕತೆ ಮಟ್ಟ ತಿಳಿಯಬೇಕಿತ್ತು. ICDS (Integrated Child Development Services) ಅಧಿಕಾರಿ ಸಿರಾಜ್ ಅಹಮದ್ ಈ ಪ್ರಗತಿ ಚಾರ್ಟ್ ಕ್ಯಾಲೆಂಡರನ್ನು ರಚಿಸಿದ್ದಾರೆ. ಈ ಪ್ರಗತಿ ಚಾರ್ಟ್‌ನ್ನು ಡಿಜಿಟಲ್ ಆಗಿ ಮೊಬೈಲ್ ಅಪ್ಲಿಕೇಶಣ್ ಆಗಿ ಪರಿವರ್ತಿಸಲಾಗಿದೆ. ಹಾಗೆ ಬಟನ್ ಒತ್ತಿದಾಗ ಲಭ್ಯವಿರುವ ರೂಪ ಕೊಡಲಾಗಿದೆ. ಈ ಆಪ್ ಈಗ 500ಕ್ಕೂ ಅಧಿಕ ಡೌನ್ಲೋಡ್ ಗಳಾಗಿದೆಯಾದರೂ ಇನ್ನೂ ಹೆಚ್ಚಿನ ಮಂದಿ ಬಳಸುವ ಸಾಧ್ಯತೆಯನ್ನು ಸುಹಾಸ್ ಹೇಳುತ್ತಾರೆ. ಮಗುವಿನ ಲಿಂಗ ಮತ್ತು ವಯಸ್ಸನ್ನು ಹಾಕುವ ಮೂಲಕ ಜನರು ವಾಕ್ಸಿನೇಶನ್ ಮತ್ತು ಆಹಾರದ ವಿವರಗಳನ್ನು ವಿಭಿನ್ನ ವಯಸ್ಸಿನ ಮಟ್ಟಿಗೆ ತಿಳಿದುಕೊಳ್ಳಬಹುದು. ಅಲ್ಲದೆ ನಡವಳಿಕೆಯಲ್ಲಿ ಬದಲಾವಣೆಯನ್ನೂ ಗುರುತಿಸಬಹುದು ಎನ್ನುತ್ತಾರೆ ಸುಹಾಸ್.

ಸ್ಮಾರ್ಟ್ ಫೋನಿಗೆ ಡೌನ್ಲೋಡ್ ಮಾಡಿದ ಮೇಲೆ ಈ ಆ್ಯಪ್ ಆಫ್ ಲೈನಲ್ಲೂ ಕೆಲಸ ಮಾಡುತ್ತದೆ. ಹಿಂದಿಯಲ್ಲೂ ಇದು ಲಭ್ಯವಿದೆ. ಈ ಆಪ್ ಯಶಸ್ಸು ಕಂಡು ಇತ್ತೀಚೆಗೆ ICDS ಅಜಂಗಢದ ಸುಮಾರು 5588 ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್ ಫೋನ್ ಕೊಡುವುದಾಗಿ ಹೇಳಿದೆ. ಇಂತಹ ಆಪ್ ಅನ್ವೇಷಣೆಯು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಒಂದೇ ಹೆಜ್ಜೆಯಲ್ಲಿ ಬಹುದೂರ ಕೊಂಡೊಯ್ಯಲಿದೆ ಎಂದು ಅಜಂಗಢದ ಪಲ್ಹನಿ ಸರ್ಕಾರಿ ಆರೋಗ್ಯ ಕೇಂದ್ರದ ಸುಪರಿಂಟೆಂಡೆಂಟ್ ಡಾ ರವಿ. ಪಾಂಡೆ ಹೇಳಿದ್ದಾರೆ.

ಸುಹಾಸ್ ಅಜಂಗಢದ ಮಕ್ಕಳಿಗಾಗಿ ಕೆಲಸ ಮಾಡುತ್ತಿರುವಾಗ ಅವರ ಪತ್ನಿ ಉಪ ನಿರ್ದೇಶಕರಾಗಿರುವ ರಿತು ಕೂಡ ಮೊಬೈಲ್ ಆಪ್ ಒಂದನ್ನು 2015 ಏಪ್ರಿಲಿನಲ್ಲಿ ಬಿಡುಗಡೆ ಮಾಡಿದ್ದಾರೆ. ಪ್ರೆಗ್ನೆನ್ಸಿ ಕಾ ದರ್ಪಣ್‌ಎನ್ನುವ ಈ ಆಪ್ ಕೂಡ ಜನಪ್ರಿಯತೆ ಪಡೆಯುತ್ತಿದೆ.

ಅಮ್ಮಂದಿರಿಗೆ ನೆರವಾಗುವ ಆಪ್

ಜಾಗೃತಿಯ ಕೊರತೆಯಿಂದ ಗರ್ಭದ ಸಮಯದಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ಅಲಕ್ಷಿಸಲಾಗುತ್ತದೆ. ಈ ಆಪ್ ಅಂತಹ ಸಂದರ್ಭದಲ್ಲಿ ನೆರವಾಗಲಿದೆ ಎಂದು ಅಜಂಗಢ ನಿವಾಸಿ ಸತೀಶ್ ಕುಮಾರ್ ಯಾದವ್ ಹೇಳುತ್ತಾರೆ. ಈ ಆಪ್ ಮಹಿಳೆಯರಿಗೆ ಮಾನಸಿಕ ಬೆಂಬಲ ನೀಡುತ್ತದೆ. ಅಲ್ಲದೆ ಮಗು ಮತ್ತು ತಾಯಿಯ ಆರೋಗ್ಯದ ಮಾಹಿತಿಯನ್ನೂ ನೀಡುತ್ತದೆ ಎನ್ನುತ್ತಾರೆ ರಿತು.

4ರಿಂದ 5ನೇ ತರಗತಿ ಓದಿದ ಯಾವುದೇ ವ್ಯಕ್ತಿ ಬೇಕಾದರೂ ಈ ಆ್ಯಪ್ ಬಳಸಬಹುದು. 2-3 ಭಾಷೆಗಳಲ್ಲಿ ಇದು ಲಭ್ಯವಿದೆ. ಉಚಿತವಾಗಿ ಆಪನ್ನು ಪಡೆದುಕೊಳ್ಳಬಹುದು. ಅಲ್ಲದೆ ಸಮೀಪದ ವೈದ್ಯರ ಫೋನ್ ನಂಬರುಗಳೂ ಇದರಲ್ಲಿ ಲಭ್ಯವಿದೆ. ಈ ಆಪ್ ಗಳು ಯಶಸ್ವಿಯಾಗಿವೆ ಎಂದು ಈಗಲೇ ಹೇಳುವುದು ಸಾಧ್ಯವಿಲ್ಲ. ಆದರೆ ಸೂಕ್ತ ದಿಕ್ಕಿನಲ್ಲಿ ಇಟ್ಟ ಹೆಜ್ಜೆ ಎನ್ನುವುದು ನಿಜ. ಭಾರತದಲ್ಲಿ ಡಿಜಿಟಲ್ ಇಂಡಿಯಾ ಹೆಚ್ಚು ಪ್ರಭಾವ ಬೀರುವುದೇ ಎಂದು ಕಾದು ನೋಡಬೇಕು.

ಕೃಪೆ: http://www.youthkiawaaz.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X