Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ದ್ವಿತೀಯ ಪಿಯು ಫಲಿತಾಂಶದಲ್ಲಿ ಕಳೆದ...

ದ್ವಿತೀಯ ಪಿಯು ಫಲಿತಾಂಶದಲ್ಲಿ ಕಳೆದ ಸಾಲಿಗಿಂತ ಶೇ.3 ರಷ್ಟು ಇಳಿಕೆ

ವಾರ್ತಾಭಾರತಿವಾರ್ತಾಭಾರತಿ25 May 2016 1:33 PM IST
share
ದ್ವಿತೀಯ ಪಿಯು ಫಲಿತಾಂಶದಲ್ಲಿ ಕಳೆದ ಸಾಲಿಗಿಂತ ಶೇ.3 ರಷ್ಟು ಇಳಿಕೆ

ಬೆಂಗಳೂರು, ಮೇ 25 :  2015-16 ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶದಲ್ಲಿ ಕಳೆದ ಸಾಲಿಗಿಂತ ಶೇ.3 ರಷ್ಟು ಇಳಿಕೆಯಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‍ ತಿಳಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪಿಯು ಮಂಡಳಿಯ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿ   ಮಾತನಾಡಿದರು.
 ಕಳೆದ ವರ್ಷದ ಫಲಿತಾಂಶ ಶೇ.60.54 ಆಗಿತ್ತು. ಆದರೆ ಪ್ರಸಕ್ತ 2015-16ರಲ್ಲಿ ಇದು ಶೇ.57.20 ಆಗಿದೆ. ಒಟ್ಟು 6,36,368 ಮಂದಿ ಪರೀಕ್ಷೆ ಬರೆದಿದ್ದರು. ಇವರಲ್ಲಿ ಹಾಜರಾದ ಹೊಸ ವಿದ್ಯಾರ್ಥಿಗಳು ಶೇ.68.65ರಷ್ಟು, ಖಾಸಗಿ ಅಭ್ಯರ್ಥಿಗಳು ಶೇ.25.62 ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ಶೇ.25.07ರಷ್ಟು ಫಲಿತಾಂಶ ದಾಖಲಿಸಿದ್ದಾರೆ ಎಂದು ವಿವರಿಸಿದರು.

ಉತ್ತೀರ್ಣರಾದವರಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು ಶೇ. 64.78 ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಶೇ.50.02ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದರು. 
ಅಗ್ರಸ್ಥಾನ ಪಡೆದವರು 
ಬೆಂಗಳೂರು ಬಸವೇಶ್ವರ ನಗರ ಸರ್ದಾರ್ ಪಿಯುಸಿ ಕಾಲೇಜ್ ವಿದ್ಯಾರ್ಥಿನಿ ರಕ್ಷಿತಾ ತಮನ ವಿಜ್ಞಾನ ವಿಭಾಗದಲ್ಲಿ 596 ಅಂಕ ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದರೆ, 595 ಅಂಕದೊಂದಿಗೆ ಕಾರ್ಕಳ ಜ್ಞಾನ ಸುಧಾ ಕಾಲೇಜ್ ವಿದ್ಯಾರ್ಥಿನಿ ನೇಹಾ ಪಿ ಶೆಟ್ಟಿ  ದ್ವಿತೀಯ ರ‍್ಯಾಂಕ್‌ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಕೂಡ್ಲಿಗಿ ತಾಲೂಕು ಕೊಟ್ಟೂರಿನ ಪಿಯು ಕಾಲೇಜ್‌ ವಿದ್ಯಾರ್ಥಿನಿ ಅನಿತಾ ಬಸಪ್ಪ 585 ಅಂಕಗಳನ್ನು ಪಡೆದು ಫಸ್ಟ್‌ ರ‍್ಯಾಂಕ್‌ ಪಡೆದಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ವಿಜಯಪುರದ ಸಹನಾ ಕುಲಕರ್ಣಿ 594 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಪರೀಕ್ಷೆ ಬರೆದವರಲ್ಲಿ ನಗರ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಶೇ.57.36 ರಷ್ಟು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೇ.56.66 ರಷ್ಟು ಅಂಕ ಗಳಿಸಿದ್ದಾರೆ. ವಿಭಾಗವಾರು ಗಮನಿಸಿದಾಗ ಕಲಾ ವಿಭಾಗದಲ್ಲಿ ಶೇ.42.12, ವಾಣಿಜ್ಯ ವಿಭಾಗದಲ್ಲಿ ಶೇ.64.16 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.66.25 ರಷ್ಟು ಅಂಕ ಆಗಿದ್ದಾರೆ. 

ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಶೇ.46.89 ಹಾಗೂ ಆಂಗ್ಲ ಭಾಷೆಯಲ್ಲಿ ಬರೆದ ಶೇ.65.71 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಜಾತಿವಾರು ಗಮನಿಸಿದಾಗ ಪರಿಶಿಷ್ಟ ಜಾತಿ ಶೇ.44.79, ಪರಿಶಿಷ್ಟ ಪಂಗಡ ಶೇ.46.88, ಪ್ರವರ್ಗ-1 ಶೇ.54.85, 2ಎ ಶೇ.61.92, 2ಬಿ ಶೇ.53.79, 3ಎ ಶೇ.63.53, 3ಬಿ ಶೇ.61.73 ಹಾಗೂ ಸಾಮಾನ್ಯ ವರ್ಗ ಶೇ.64.32 ರಷ್ಟು ಫಲಿತಾಂಶ ದಾಖಲಾಗಿದೆ ಎಂದು ವಿವರಿಸಿದರು.

ಜಿಲ್ಲಾವಾರು ಹೆಚ್ಚು ಅಂಕ ಪಡೆದ ವಿವರ

ದಕ್ಷಿಣ ಕನ್ನಡ ಶೇ.90.48 ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನ. ಉಡುಪಿ ಶೇ.90.35 (ದ್ವಿತೀಯ), ಕೊಡಗು ಶೇ.79.35 (ತೃತೀಯ), ಉತ್ತರ ಕನ್ನಡ ಶೇ.76.44, ಬೆಂಗಳೂರು ದಕ್ಷಿಣ ಶೇ.70.88, ಬೆಂಗಳೂರು ಉತ್ತರ ಶೇ.70.83, ಶಿವಮೊಗ್ಗ ಶೇ.69.28, ಚಿಕ್ಕಮಗಳೂರು ಶೇ.67.34, ಬೆಂಗಳೂರು ಗ್ರಾಮಾಂತರ 66.38, ಬಾಗಲಕೋಟೆ 65.91 ರಷ್ಟು ಫಲಿತಾಂಶ ಸಾಧಿಸಿವೆ. ಕೊನೆಯ ಸ್ಥಾನವನ್ನು ಯಾದಗಿರಿ ಪಡೆದಿದ್ದು ಶೇ.44.16 ಫಲಿತಾಂಶ ದಾಖಲಿಸಿದೆ. 

ಒಟ್ಟು 91 ಕಾಲೇಜುಗಳು ಶೂನ್ಯ ಫಲಿತಾಂಶ ದಾಖಲಿಸಿವೆ. ಸರ್ಕಾರಿ ಕಾಲೇಜು 1, ಅನುದಾನಿತ ಕಾಲೇಜು 1, ಅನುದಾನರಹಿತ ಕಾಲೇಜು 88, 1 ವಿಭಜಿತ ಕಾಲೇಜು ಇದರಲ್ಲಿವೆ ಎಂದರು.

ಮರು ಮೌಲ್ಯಮಾಪನಕ್ಕೆ ಜೂ.7 ಕಡೆಯ ದಿನ, ಇದರ ಶುಲ್ಕ 1260 ರೂ. ಅಂಕ ಮರು ಎಣಿಕೆಗೆ ಕೂಡ ಜೂ.7 ಕಡೆಯ ದಿನವಾಗಿದೆ. ಇದಕ್ಕೆ ಶುಲ್ಕ ಇರುವುದಿಲ್ಲ. ಜುಲೈ 1 ರಿಂದ ಅನತ್ತೀರ್ಣರಾದವರಿಗೆ ಪೂರಕ ಪರೀಕ್ಷೆ ಆರಂಭವಾಗಲಿದೆ.

ವಾಣಿಜ್ಯ ವಿಭಾಗ:-
1. ಸಹನಾ ಕುಲಕರ್ಣಿ, 600/594, ವಿ.ಬಿ ದರ್ಬಾರ್ ಪಿ.ಯು ಕಾಲೇಜ್, ಬೀದರ್.
2. ಛಾಯಾಶ್ರೀ.ವಿ, 600/594,  ಎಂ.ಇ.ಎಸ್ ಪಿಯು ಕಾಲೇಜ್ ಬೆಂಗಳೂರು.
3. ದೀಕ್ಷಾ ನಾಯಕ್ 600/594, ಮಹವೀರ್ ಜೈನ್ ಕಾಲೇಜ್, ಬೆಂಗಳೂರು.
4. ನಾಗಪೂಜಾ ಎಸ್.ಎನ್ 600/593, ಪಿ.ಇ.ಎಸ್ ಕಾಲೇಜ್, ಬೆಂಗಳೂರು.
5. ಲೋಲಿಕಾ.ಎಸ್ 600/593, ಪಿ.ಇ.ಎಸ್ ಕಾಲೇಜ್, ಬೆಂಗಳೂರು.
6.ಅಶಿಕ್ ನಾರಾಯಣ್, 600/593, ಆಳ್ವಾಸ್ ಪಿ.ಯು ಕಾಲೇಜ್, ಮೂಡಬಿದರಿ.
7.ರಕ್ಷಾ ಶಣೈ 600/593, ಕಾರ್ಕಳ ಜ್ಞಾನ ಸುಧಾ ಪಿ.ಯು ಕಾಲೇಜ್, ಉಡುಪಿ.
8. ಆದಿಮುಲ್ಲಾ ನಿಲೀಮ್ 600/593, ಯುನಿವರ್ಸೆಲ್ ಪಿ.ಯು  ಕಾಲೇಜ್, ಬೆಂಗಳೂರು.
9. ದಕ್ಷಾ ಜೈನ್ 600/593,ಆಳ್ವಾಸ್ ಪಿ.ಯು ಕಾಲೇಜ್, ಮೂಡಬಿದಿರಿ.
10. ಹಸ್ತಿ ದಿವ್ಯಶ್ರೀ 600/592,ನಾಗಾರ್ಜುನ್ ಪಿ.ಯು ಕಾಲೇಜ್ ಬೆಂಗಳೂರು.


 ವಿಜ್ಞಾನ ವಿಭಾಗ
1.ರಕ್ಷಿತಾ.ಟಿ 600/596, ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜ್, ಬೆಂಗಳೂರು.
2.ನೆಹಾ ಡಿ ಶೆಟ್ಟಿ, 600/595, ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜ್, ಉಡುಪಿ.
3.ರಮ್ಯ.ಎಂಎಂ 600/594, ಎನ್.ಎಂ.ಕೆ.ಆರ್.ವಿ ಮಹಿಳಾ ಕಾಲೇಜ್, ಬೆಂಗಳೂರು.
4.ಪ್ರಜ್ಞಾ 600/594, ವಿದ್ಯೋದಯ ಪಿಯು ಕಾಲೇಜ್, ಉಡುಪಿ.
5.ಪೂಜಾ ನಾಯಕ್ 600/593, ಕಾರ್ಕಳ ಜ್ಞಾನ ಸುಧಾ ಪಿಯು ಕಾಲೇಜ್, ಉಡುಪಿ.
6.ಐಶ್ವರ್ಯಾ ವಿ ಯಜಮಾನ್ 600/593 ಮಾಸ್ಟರ್ ಪಿಯು ಕಾಲೇಜ್,ಹಾಸನ.
7.ಅಕ್ಷಯ್ ಜಿ ರಾವ್ 600/593, ಆರ್.ಎನ್ ಶೆಟ್ಟಿ ಪಿಯು ಕಾಲೇಜ್, ಉಡುಪಿ.
8.ಸುಪ್ರೀತ್.ಕೆ 600/593, ವರದಾದ್ರಿ ಪಿಯು ಕಾಲೇಜ್, ಚಿಕ್ಕಮಗಳೂರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X