ಅಮೆರಿಕಾದ ಕಾರ್ಯಗಾರದಲ್ಲಿ ಪ್ರಬಂಧ ಮಂಡಿಸಿದ 'ಅಲೋಶಿಯಸ್' ವಿಜ್ಞಾನಿಗಳು

ಮಂಗಳೂರು, ಮೇ 25: ಮಂಗಳೂರಿನ ಅಲೋಶಿಯಸ್ ಕಾಲೇಜಿನ ಅನ್ವಯಿಕ ಜೀವಶಾಸ್ತ್ರ (Applied biology) ಪ್ರಯೋಗಾಲಯದ ವಿಜ್ಞಾನಿಗಳಾದ ಡಾ. ಶಶಿಕಿರಣ್ ನಿವಾಸ್ ಮತ್ತು ಅಲಿಫಾ ಸೆವೆರಸ್ ಅವರು ಅಮೆರಿಕದ ಅರಿಝೋನಾ ರಾಜ್ಯ ವಿಶ್ವವಿದ್ಯಾನಿಲಯದ ಟೆಂಪ್ ಕ್ಯಾಂಪಸ್ ನಲ್ಲಿ 2016 ಮೇ 19 ರಿಂದ 22ರ ವರೆಗೆ ಜರಗಿದ ಸ್ಯಾನೋ ಬ್ಯಾಕ್ಟೀರಿಯಾ ಕಾರ್ಯಗಾರದಲ್ಲಿ ಭಾಗವಹಿಸಿ, ಜೈವಿಕ ಇಂಧನ ತಯಾರಿಕೆಯಲ್ಲಿ ಮೈಕ್ರೋ ಅಲ್ಗೇ (ಸೂಕ್ಷ್ಮ ಪಾಚಿ) ಯ ಉಪಯೋಗದ ಕುರಿತು ಪ್ರಬಂಧ ಮಂಡಿಸಿದ್ದಾರೆ. ಅಲ್ಲದೆ ಮೈಕ್ರೊ ಅಲ್ಗೇಯ ಬಗ್ಗೆ ಸಂಶೋಧನೆ ಮಾಡುವ ಅಮೆರಿಕಾದ ಇತರ ಪ್ರಯೋಗಾಲಯಗಳಿಗೆ ಭೇಟಿ ನೀಡಿದರು.
Next Story





