ಎಸ್ಸೆಸ್ಸೆಫ್ ಹಿದಾಯತ್ ನಗರ ವತಿಯಿಂದ ಉಚಿತ ಪುಸ್ತಕ ವಿತರಣೆ

ಕೋಟೆಕಾರು, ಮೇ 25: ಹಿದಾಯತ್ ನಗರ ಎಸ್ಸೆಸ್ಸೆಫ್ ಶಾಖೆಯ ಹತ್ತನೇ ವಾರ್ಷಿಕದ ಅಂಗವಾಗಿ ಉಚಿತ ಪುಸ್ತಕ ವಿತರಣೆ ಹಾಗೂ ರಂಝಾನ್ ಸಿದ್ಧತಾ ಧಾರ್ಮಿಕ ಪ್ರವಚನ ಕಾರ್ಯಕ್ರಮ ಇತ್ತೀಚೆಗೆ ಅಲ್ ಹಿದಾಯ ಜುಮಾ ಮಸೀದಿ ವಠಾರದಲ್ಲಿ ಜರಗಿತು.
ವಿ.ಕೆ.ಅಬ್ದುಲ್ಲಾ ಮುಸ್ಲಿಯಾರ್ ವೀರಕಂಬ ಉದ್ಘಾಟಿಸಿದರು. ಅಲ್ ಹಾಜ್ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಮುಖ್ಯ ಪ್ರವಚನಗೈದರು. ಅಬ್ದುಲ್ ಅಝೀಝ್ ಸಖಾಫಿ ಪ್ರಸ್ತಾವಿಕವಾಗಿ ಮಾತನಾಡಿದರು.
ಮುಖ್ಯಅಥಿತಿಗಳಾಗಿ ಕೋಟೆಕಾರು ಪಂಚಾಯತ್ ಕೌನ್ಸಿಲರ್ ಮೊಯ್ದಿನ್ ಬಾವ ಕೊಮರಂಗಲ, ಮಂಗಳೂರು ತಾಲೂಕು ಪಂಚಾಯತ್ ಸದಸ್ಯರಾದ ಸಿದ್ಧೀಕ್ ತಲಪಾಡಿ, ಇಬ್ರಾಹಿಮ್ ಮುಸ್ಲಿಯಾರ್, ಅಷ್ರಫ್ ಅಮ್ಜದಿ ಎ.ಎಂ.ಎಚ್ ಹಾಗೂ ಉಲಮಾ ಉಮರಾಗಲು ಭಾಗವಹಿಸಿದ್ದರು. ಝುಬೈರ್ ಝುಹ್ರಿ ಸ್ವಾಗತಿಸಿ, ಸದಕ ವಂಧಿಸಿದರು. ಸಬೀರ್ ಅಶ್ಅರಿ ಕಾರ್ಯಕ್ರಮ ನಿರೂಪಿಸಿದರು. ಹತ್ತನೇ ವಾರ್ಷಿಕದ ಅಂಗವಾಗಿ ಹತ್ತು ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸಲಿರುದಾಗಿ ಅವರು ತಿಳಿಸಿದರು.
Next Story





