PUC ಫಲಿತಾಂಶ: ವಿಜ್ಞಾನದಲ್ಲಿ ಉಡುಪಿಯ ಪ್ರಜ್ಞಾ ಮೂರನೆ ಸ್ಥಾನ

ಉಡುಪಿ, ಮೇ 25: ಈ ಬಾರಿಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗ ದಲ್ಲಿ ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ 600ರಲ್ಲಿ 594 ಅಂಕ ಪಡೆಯುವ ಮೂಲಕ ರಾಜ್ಯದಲ್ಲಿ ಮೂರನೆ ಸ್ಥಾನ ಗಳಿಸಿದ್ದಾರೆ.
ಹೆಜಮಾಡಿ ಕೋಡಿಯ ನಿವಾಸಿಯಾಗಿರುವ ಇವರು ಉಡುಪಿ ಜಿಲ್ಲೆಗೆ ವಿಜ್ಞಾನ ವಿಭಾಗದಲ್ಲಿ ಎರಡನೆ ಸ್ಥಾನ ಪಡೆದಿದ್ದಾರೆ. ಇವರ ತಂದೆ ಹೇಮಂತ್ ಪುತ್ರನ್ ಮಲ್ಪೆಯಲ್ಲಿ ಫಿಶ್ ಉದ್ಯಮಿಯಾಗಿದ್ದು, ತಾಯಿ ಸುಭಾ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.
ಈಕೆ ಇಂಗ್ಲಿಷ್‌ನಲ್ಲಿ 96, ಸಂಸ್ಕೃತದಲ್ಲಿ 99, ಸಂಖ್ಯಾಶಾಸ್ತ್ರದಲ್ಲಿ 100, ಗಣಿತ ದಲ್ಲಿ 100, ರಾಸಾಯನ ಶಾಸ್ತ್ರದಲ್ಲಿ 99, ಭೌತ ಶಾಸ್ತ್ರದಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ.
ಈಕೆಯ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾ ಯಣ ಛಾತ್ರ ಅಭಿನಂದನೆ ಸಲ್ಲಿಸಿದ್ದಾರೆ. ವಿದ್ಯೋದಯ ಕಾಲೇಜು ಸತತ 6ನೆ ಬಾರಿಗೆ ಶೇ.100 ಫಲಿತಾಂಶ ಪಡೆದುಕೊಂಡಿದೆ.
Next Story





