Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪಿ ಯು ಫಲಿತಾಂಶ: ಪ್ರತಿಭಾನ್ವಿತರು

ಪಿ ಯು ಫಲಿತಾಂಶ: ಪ್ರತಿಭಾನ್ವಿತರು

ವಾರ್ತಾಭಾರತಿವಾರ್ತಾಭಾರತಿ25 May 2016 3:28 PM IST
share

ಅಲೋಶಿಯಸ್‌ನ ವಿದ್ಯಾರ್ಥಿನಿ ಇಶ್ಮತ್ ನಿಶಾ ಶೇ. 91.83 ಫಲಿತಾಂಶ

ಮಂಗಳೂರು, ಮೇ 27: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಸೈಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಇಶ್ಮತ್ ನಿಶಾ ಶೇ. 91.83 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ.

ಇಂಗ್ಲಿಷ್‌ನಲ್ಲಿ 91 ಅಂಕ, ಕನ್ನಡದಲ್ಲಿ 95, ಭೌತಶಾಸ್ತ್ರದಲ್ಲಿ 89, ರಸಾಯನ ಶಾಸ್ತ್ರದಲ್ಲಿ 98, ಗಣಿತ 83 ಜೀ ಶಾಸ್ತ್ರದಲ್ಲಿ 95 ಅಂಕಗಳ ಸಹಿತ ಒಟ್ಟು 551 ಅಂಕಗಳನ್ನು ಪಡೆದಿದ್ದಾಳೆ.

ಈಕೆ ಬಶೀರ್ ಕಡಂಜೆ ಹಾಗೂ ಝರೀನಾ ದಂಪತಿಯ ಪುತ್ರಿ.

-------------------------------------------------------------

ಪುತ್ತೂರಿನ ಹಸೀನಾ ಬೇಗಂಗೆ 95.50 ಶೇ. ಫಲಿತಾಂಶ

ಪುತ್ತೂರು, ಮೇ 27: ಪಿಯುಸಿ ಪರೀಕ್ಷೆಯಲ್ಲಿ ಪುತ್ತೂರು ಸಂತ ಫಿಲೋಮಿನ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ 573 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಫಿಸಿಕ್ಸ್‌ನಲ್ಲಿ 97, ಕೆಮಿಸ್ಟ್ರಿಯಲ್ಲಿ 97, ಗಣಿತದಲ್ಲಿ 98, ಕಂಪ್ಯೂಟರ್ ಸೈನ್ಸ್‌ನಲ್ಲಿ 99, ಇಂಗ್ಲೀಷ್‌ನಲ್ಲಿ 86 ಹಾಗೂ ಹಿಂದಿ ವಿಷಯದಲ್ಲಿ 96 ಅಂಕಗಳನ್ನು ಗಳಿಸಿದ್ದಾರೆ.

ಈಕೆ ಪುತ್ತೂರು ದರ್ಬೆಯ ಎ.ಆರ್. ಮಂಝಿಲ್‌ನ ನಿವಾಸಿ ಅಬ್ದುಲ್ ಅಝೀಝ್ ಬಪ್ಪಳಿಗೆ ಹಾಗೂ ರುಖ್ಯಾ ಸೊಂಪಾಡಿ ದಂಪತಿಯ ಪುತ್ರಿ

--------------------------------------------------------------

ವಿದ್ಯಾ ಶೆಟ್ಟಿ

ಮಂಗಳೂರು, ಮೇ 27: ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರು ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ವಿದ್ಯಾ ಶೆಟ್ಟಿ 600 ಅಂಕಗಳಲ್ಲಿ 571 ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಇವರು ಮಂಗಳೂರು ನಿವಾಸಿ ಯಶ್ವಂತ್ ಜಿ ಶೆಟ್ಟಿ ಮತ್ತು ವೀನಾ ವೈ ಶೆಟ್ಟಿ ಅವರ ಪುತ್ರಿ

..........................................................

ನುಮಾನ್ ಹನೀಫ್ ಶೊಐಬ್

ಮಂಗಳೂರು, ಮೇ 27: ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರು ಮಹೇಶ್ ಪಿಯು ಕಾಲೇಜಿನ ವಿದ್ಯಾರ್ಥಿ ನುಮಾನ್ ಹನೀಫ್ ಶೊಐಬ್ 600ರಲ್ಲಿ ಗಣಿತದಲ್ಲಿ ನೂರು ಅಂಕಗಳೊಂದಿಗೆ 565 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಇವರು ಮುಹಮ್ಮದ್ ಹನೀಫ್ ಪಣಂಬೂರ್ ಮತ್ತು ರೈಹನತ್ ಹಲೀಮಾ ದಂಪತಿಯ ಪುತ್ರ

.....................................................

ಮುಹಮ್ಮದ್ ತಬೀಶ್ ಹಸನ್‌ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ

 

ಉಪ್ಪಿನಂಗಡಿ, ಮೇ 26: ಪಿಯುಸಿ ಪರೀಕ್ಷೆಯಲ್ಲಿ ಮೂಡಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಉಪ್ಪಿನಂಗಡಿಯ ಮುಹಮ್ಮದ್ ತಬೀಶ್ ಹಸನ್ 3 ವಿಭಾಗದಲ್ಲಿ ತಲಾ 100ದೊಂದಿಗೆ ಒಟ್ಟು 586 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.

ತಬೀಶ್ ಹಸನ್ ಅಕೌಂಟೆನ್ಸಿಯಲ್ಲಿ 100 ಅಂಕ, ಸ್ಟಾಟಿಸ್ಟಿಕ್ಸ್-100, ಬೆಸಿಕ್ ಮ್ಯಾತ್ಸ್-100 ಅಂಕ ಪಡೆದಿರುತ್ತಾರೆ.

ಇವರು ಉಪ್ಪಿನಂಗಡಿ ಲುಲು ಕಲೆಕ್ಷನ್ ಸಂಸ್ಥೆಯ ಮುಹಮ್ಮದ್ ಇಕ್ಬಾಲ್ ಮತ್ತು ತಸ್ಲೀಮಾ ಇಕ್ಬಾಲ್ ದಂಪತಿಯ ಪುತ್ರ.

---------------------------------------------------------------

ಅಮೀರ ಶಂಶಾದ್ ರಿಗೆ 94.83 ಶೇ. ಅಂಕ

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದದಲ್ಲಿ  ಪದವಿ ಪೂರ್ವ ಕಾಲೇಜ್ ಉಪ್ಪಿನಂಗಡಿ ಇಲ್ಲಿಯ ವಿದ್ಯಾರ್ಥಿನಿ ಅಮೀರ ಶಂಶಾದ್  569(94.83 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಕೌಂಟೆನ್ಸಿಯಲ್ಲಿ 100 ಶೇ. ಅಂಕ ಗಳಿಸಿರುವ ಈಕೆ ಉಪ್ಪಿನಂಗಡಿ ನಿವಾಸಿ ಇಸುಬು ಮತ್ತು  ತಾಹಿರ ದಂಪತಿಯ ಪುತ್ರಿ.

------------------------------------------------------------------------------------------------

ಹಲೀಮತ್ ತೌಸೀನರಿಗೆ 92.5 ಶೇ. ಅಂಕ

 ಮಂಗಳೂರು, ಮೇ 26: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದದಲ್ಲಿ ಮಂಗಳೂರಿನ ಸೈಂಟ್ ಆ್ಯನ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹಲೀಮತ್ ತೌಸೀನ 555(92.5 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಕೌಂಟೆನ್ಸಿಯಲ್ಲಿ 100 ಶೇ. ಅಂಕ ಗಳಿಸಿರುವ ಈಕೆ ಬಿಕರ್ನಕಟ್ಟೆ ನಿವಾಸಿ ಅಬೂಬಕರ್ ಮತ್ತು ಮರಿಯಮ್ಮ ದಂಪತಿಯ ಪುತ್ರಿ.

-----------------------------------------------------------------------

ಅಲಿ ಅಹ್ಮದ್ ಸುಹೈಬ್‌ಗೆ 90.66 ಶೇ. ಅಂಕ

ಮೂಡುಬಿದಿರೆ, ಮೇ 26: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದದಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಲಿ ಅಹ್ಮದ್ ಸುಹೈಬ್ 544(90.66 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈತ ಮುಹಮ್ಮದ್ ಶರೀಫ್ ಮತ್ತು ಆಯಿಶಾ ದಂಪತಿಯ ಪುತ್ರ.

----------------------------------------------------------------

ಅನ್ಸಿಟಾ ಮನಿಶಾ ಗೋನ್ಸಾಲ್ವಿಸ್ರಿಗೆ 98 ಶೇ. ಅಂಕ

ಮಂಗಳೂರು, ಮೇ 26: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದದಲ್ಲಿ ಮಂಗಳೂರಿನ ಆ್ಯಗ್ನೆಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನ್ಸಿಟಾ ಮನಿಶಾ ಗೋನ್ಸಾಲ್ವಿಸ್589(98 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಡಾ.ರಿಚರ್ಡ್ ಗೋನ್ಸಾಲ್ವಿಸ್ ಮತ್ತು ಡಾ.ಐಟಾ ಗೋನ್ಸಾಲ್ವಿಸ್ ಅವರ ಪುತ್ರಿ.

----------------------------------------------------------------

ಶಫೀಕ ಫಾತಿಮಾರಿಗೆ 95 ಶೇ. ಅಂಕ

ಬೆಳ್ತಂಗಡಿ, ಮೇ 26: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದದಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಶಫೀಕ ಫಾತಿಮಾ 568(95 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅರ್ಥಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರದಲ್ಲಿ 100 ಶೇ. ಅಂಕಗಳನ್ನು ಗಳಿಸಿರುವ ಈಕೆ ವ್ಯವಹಾರ ಅಧ್ಯಯನದಲ್ಲಿ 97 ಶೇ. ಅಂಕಗಳನ್ನು ಪಡೆದಿದ್ದಾರೆ. ಈಕೆ ಇಸ್ಮಾಯೀಲ್ ಯು.ಎ. ಮತ್ತು ತಹಸೀನ್ ದಂಪತಿಯ ಪುತ್ರಿ.

-------------------------------------------

ತನ್ವೀರ್ ಅಹ್ಮದ್ ಗೆ 92.1% ಅಂಕ

ಬೆಳ್ತಂಗಡಿ, ಮೇ 26: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಜಿರೆ  ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿ ತನ್ವೀರ್ ಅಹ್ಮದ್ ವಿಜ್ಞಾನ ವಿಭಾಗದಲ್ಲಿ  553(92.1%) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರೆ.  ಇವರು ಬಿ.ಬಿ. ಅಬೂಬಕರ್ ಮತ್ತು ಝಾಹೀದಾ ದಂಪತಿಯ ಪುತ್ರ.  

-------------------------------------------------------------------------------

ಅಫ್ರಿದಾಗೆ ವಿಜ್ಞಾನದಲ್ಲಿ ಶೇ. 97.33 ಅಂಕ

ಮಂಗಳೂರು, ಮೇ 25: ನಗರದ ಕೆನರಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಫ್ರಿದಾ ವಿಜ್ಞಾನ ವಿಭಾಗದಲ್ಲಿ 584 ಅಂಕಗಳನ್ನು ಪಡೆದು ಶೇ. 97.33 ಸಾಧನೆ ಮಾಡಿದ್ದಾರೆ.

ರಸಾಯನ ಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರಗಳಲ್ಲಿ ತಲಾ 100 ಅಂಕಗಳನ್ನು ಪಡೆದಿರುವ ಈಕೆ ಉಳಿದಂತೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ತಲಾ 93 ಮತ್ತು ಭೌತ ಶಾಸ್ತ್ರದಲ್ಲಿ 98 ಅಂಕಗಳನ್ನು ಪಡೆದಿದ್ದಾಳೆ.

ಈಕೆ ಎ.ಆರ್.ಬಶೀರ್ ಮತ್ತು ರಶೀದಾ ಬಾನು ದಂಪತಿಯ ಪುತ್ರಿ.

--------------------------------------------------------------

ಹಾಲಾಡಿಯ ಚಂದನ್ ಕುಮಾರ್‌ಗೆ 571 ಅಂಕಗಳು

ಮಂಗಳೂರು, ಮೇ 25: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಕಲ್ಯಾಣಪುರದ ಸಂತೆಕಟ್ಟೆಯ ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಚಂದನ್ ಕುಮಾರ್ ಸಿ. 571 ಅಂಕಗಳನ್ನು ಗಳಿಸಿದ್ದಾರೆ.

ಅರ್ಥಶಾಸ್ತ್ರದಲ್ಲಿ 93, ವ್ಯವಹಾರ ಅಧ್ಯಯನದಲ್ಲಿ 98, ಅಕೌಂಟೆನ್ಸಿಯಲ್ಲಿ 99, ಸ್ಟಾಟಿಸ್ಟಿಕ್ಸ್‌ನಲ್ಲಿ 99, ಇಂಗ್ಲೀಷ್‌ನಲ್ಲಿ 87 ಮತ್ತು ಕನ್ನಡ ಭಾಷಾ ವಿಷಯದಲ್ಲಿ 95 ಅಂಕಗಳನ್ನು ಪಡೆದಿದ್ದಾರೆ.

ಇವರು ಕುಂದಾಪುರ ಹಾಲಾಡಿ ಚೆರ್ಕಿಯ ಅನಂತ ಮತ್ತು ಆಶಾ ದಂಪತಿಯ ಪುತ್ರ.

---------------------------------------------------------------

ಮೂಡಿಗೆರೆಯ ಸಾನಿಯಾ ಬಾನುಗೆ ಶೇ.90 ಫಲಿತಾಂಶ

ಮಂಗಳೂರು, ಮೇ 25: ಮೂಡಿಗೆರೆಯ ಸೈಂಟ್ ಮಾರ್ಥಾಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಾನಿಯಾ ಬಾನು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 538 (ಶೇ. 90) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇತಿಹಾಸದಲ್ಲಿ 95, ಅರ್ಥಶಾಸ್ತ್ರದಲ್ಲಿ 82, ವ್ಯವಹಾರ ಅಧ್ಯಯನದಲ್ಲಿ 93, ಅಕೌಂಟೆನ್ಸಿಯಲ್ಲಿ 96, ಇಂಗ್ಲೀಷ್‌ನಲ್ಲಿ 78 ಮತ್ತು ಹಿಂದಿ ಭಾಷಾ ವಿಷಯದಲ್ಲಿ 94 ಅಂಕಗಳನ್ನು ಗಳಿಸಿದ್ದಾರೆ.

ಈಕೆ ಮೂಡಿಗೆರೆಯ ಮುಮ್ತಾಝ್ ಮತ್ತು ವಹೀದಾ ಬಾನು ದಂಪತಿಯ ಪುತ್ರಿ.

----------------------------------------------------------

ಆಲಂಗಾರಿನ ಆಯೆಷಾ ಅಫಿಯಾಗೆ 566 ಅಂಕಗಳು

ಮಂಗಳೂರು, ಮೇ 25: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡುಬಿದಿರೆ ಜೈನ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಆಲಂಗಾರಿನ ಆಯೆಷ ಅಫಿಯಾ 566 (ಶೇ. 94.3) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಬ್ಯುಸಿನೆಸ್ ಸ್ಟಡೀಸ್‌ನಲ್ಲಿ 100ಕ್ಕೆ 100 ಮತ್ತು ಅಕೌಂಟೆನ್ಸಿಯಲ್ಲಿ 97 ಅಂಕಗಳನ್ನು ಪಡೆದಿದ್ದಾರೆ.

ಈಕೆ ಆಲಂಗಾರಿನ ಕೆ.ಬಿ. ಅಬೂಬಕರ್ ಮತ್ತು ಸಫಿಯಾ ದಂಪತಿಯ ಪುತ್ರಿ.

-----------------------------------------------------------------------

ತೋಡಾರಿನ ಆಯೆಷಾ ಮಶ್ರೂಫಾಗೆ 557 ಅಂಕಗಳು

ಮಂಗಳೂರು, ಮೇ 25: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿನಿ ಆಯೆಷಾ ಮಶ್ರೂಫಾ 557 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಫಿಸಿಕ್ಸ್‌ನಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಉಳಿದಂತೆ ಕೆಮಿಸ್ಟ್ರಿಯಲ್ಲಿ 92, ಗಣಿತದಲ್ಲಿ 94, ಬಯಾಲಜಿಯಲ್ಲಿ 93, ಇಂಗ್ಲೀಷ್‌ನಲ್ಲಿ 85 ಹಾಗೂ ಹಿಂದಿ ಭಾಷಾ ವಿಷಯದಲ್ಲಿ 93 ಅಂಕಗಳನ್ನು ಪಡೆದಿದ್ದಾರೆ.

ಈಕೆ ಬಿ.ಎ. ಮೊಯ್ದೀನ್ ಮತ್ತು ಜಮೀಲಾ ದಂಪತಿಯ ಪುತ್ರಿ.

-----------------------------------------------

ಆಳ್ವಾಸ್ ವಿದ್ಯಾರ್ಥಿ ಮುಹಮ್ಮದ್ ಮುನೈಝ್‌ಗೆ 539 ಅಂಕಗಳು

ಮಂಗಳೂರು, ಮೇ 25: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಮುಹಮ್ಮದ್ ಮುನೈಝ್ 539 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಮುಹಮ್ಮದ್ ಮುನೈಝ್ ಫಿಸಿಕ್ಸ್‌ನಲ್ಲಿ 96, ಕೆಮಿಸ್ಟ್ರಿಯಲ್ಲಿ 88, ಗಣಿತದಲ್ಲಿ 89, ಕಂಪ್ಯೂಟರ್ ಸೈನ್ಸ್‌ನಲ್ಲಿ 95, ಕನ್ನಡದಲ್ಲಿ 90 ಹಾಗೂ ಇಂಗ್ಲೀಷ್‌ನಲ್ಲಿ 81 ಅಂಕಗಳನ್ನು ಪಡೆದಿದ್ದಾರೆ.

ಇವರು ತೋಡಾರಿನ ಎಂ.ಎಸ್. ಹುಸೈನ್ ಮತ್ತು ಮುಮ್ತಾಝ್ ದಂಪತಿಯ ಪುತ್ರ.

------------------------------------------------------

ನಿದಾ ಝೈನಬಾಗೆ 92 ಶೇ.

ವಿಟ್ಲ : ಬಿ.ಸಿ.ರೋಡು ಸಮೀಪದ ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಕಾಲೇಜು ವಿದ್ಯಾರ್ಥಿನಿ ನಿಧಾ ಝೈನಬಾ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 554 ಅಂಕಗಳನ್ನು ಗಳಿಸಿ ಶೇ. 92.33 ಫಲಿತಾಂಶ ದಾಖಲಿಸಿರುತ್ತಾಳೆ. 

ಈಕೆ ಬಿ.ಸಿ.ರೋಡು ಸಮೀಪದ ಮಿತ್ತಬೈಲು ನಿವಾಸಿ ಇಲ್ಯಾಸ್-ಫಾತಿಮಾ ನಸ್ರತ್ ದಂಪತಿಯ ಪುತ್ರಿ.

------------------------------------------------

ಆಬಿದಾ ಶಮಾಗೆ ಡಿಸ್ಟಿಂಕ್ಷನ್ 


ವಿಟ್ಲ, ಮೇ 25: ಮಂಗಳೂರು ಸೈಂಟ್ ಆನ್ಸ್ ಮಹಿಳೆಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಆಬಿದಾ ಶಮಾ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 551 ಅಂಕಗಳೊಂದಿಗೆ 92 ಶೇ. ಫಲಿತಾಂಶ ದಾಖಲಿಸಿ ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆ ಹೊಂದಿದ್ದಾಳೆ. 

ಈಕೆ ಬಿ.ಸಿ.ರೋಡು-ಪರ್ಲಿಯಾ ನಿವಾಸಿ ಉಮ್ಮರ್ ಶರೀಫ್ ಹಾಗೂ ರಶೀದಾ ದಂಪತಿಗಳ ಪುತ್ರಿ.

---------------------------------------------------------------

ಮುಹಮ್ಮದ್ ಸುಹೈಲ್‌ಗೆ 562 ಅಂಕಗಳು


ಮಂಗಳೂರು, ಮೇ 25: ದ್ವಿತೀಯ ಪಿಯು ಪರೀಕ್ಷೆಯಲ್ಲಿ ನಗರದ ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಸುಹೈಲ್ 600ರಲ್ಲಿ 562 ಅಂಕಗನ್ನು ಪಡೆದು ವಿಶೇಷ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 

ಸ್ಟಾಟಿಸ್ಟಿಕ್ಸ್‌ನಲ್ಲಿ 93, ಫಿಸಿಕ್ಸ್‌ನಲ್ಲಿ 98, ಕೆಮಿಸ್ಟ್ರಿಯಲ್ಲಿ 96, ಗಣಿತದಲ್ಲಿ 98, ಇಂಗ್ಲೀಷ್‌ನಲ್ಲಿ 85, ಮತ್ತು ಹಿಂದಿ ಭಾಷಾ ವಿಷಯದಲ್ಲಿ 92 ಅಂಕಗಳನ್ನು ಪಡೆದಿದ್ದಾರೆ. ಇವರು ಅಬ್ದುಲ್ ಹಮೀದ್ ಮತ್ತು ಹಸೀನಾ ದಂಪತಿಯ ಪುತ್ರ.

----------------------------------------------

ವರ್ಣಿತಾ ಜೈನ್‌ಗೆ 571 ಅಂಕಗಳು


ಮೂಡುಬಿದಿರೆ, ಮೇ 25: ಎಕ್ಸಲೆಂಟ್ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ವರ್ಣಿತಾ ಎಚ್.ಜೈನ್ 571 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಈಕೆ ಅಳಿಯೂರು ನಿವಾಸಿ ಹರ್ಷೇಂದ್ರ ಜೈನ್ ಕುದ್ರೆಮುಖ ಮತ್ತು ಶಾಲಿನಿ ಹರ್ಷೇಂದ್ರ ಜೈನ್ ದಂಪತಿಯ ಪುತ್ರಿ.

------------------------------------

ಆಳ್ವಾಸ್‌ನ ಕಾಮರ್ಸ್ ವಿದ್ಯಾರ್ಥಿ ಆಶಿಕ್ ನಾರಾಯಣ ರಾಜ್ಯಕ್ಕೆ ದ್ವಿತೀಯ

ಮಂಗಳೂರು, ಮೇ 25:ಪಿಯುಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಆರು ಮಂದಿ ವಿದ್ಯಾರ್ಥಿಗಳಲ್ಲಿ ಮೂಡಬಿದ್ರೆ ಆಳ್ವಾಸ್ ಪಿ ಯು ಕಾಲೇಜಿನ ಆಶಿಕ್ ನಾರಾಯಣ ಎಂ. ಅವರು ಸಿಎ ಮಾಡುವ ಗುರಿಯನ್ನು ಹೊಂದಿದ್ದಾರೆ.

ಆಶಿಕ್ ನಾರಾಯಣ ಎಂ. 593 ಅಂಕಗಳನ್ನು ಪಡೆದಿದ್ದಾರೆ. ಬ್ಯುಸಿನೆಸ್ ಸ್ಟಡೀಸ್‌ನಲ್ಲಿ 100, ಅಕೌಂಟೆನ್ಸಿಯಲ್ಲಿ 100, ಸ್ಟಾಟಿಟಿಕ್ಸ್‌ನಲ್ಲಿ 100, ಬೇಸಿಕ್ ಎಕಾನಾಮಿಕ್ಸ್‌ನಲ್ಲಿ 100,ಸಂಸ್ಕೃತದಲ್ಲಿ 100,ಇಂಗ್ಲೀಷ್‌ನಲ್ಲಿ 93 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಆಶಿಕ್ ನಾರಾಯಣ ಮಂಜೇಶ್ವರದ ಗಣಪತಿ ಪ್ರಸಾದ್ ಮತ್ತು ಆಶಾ ಭಾರತಿ ದಂಪತಿಯ ಪುತ್ರ.

-----------------------------------------------

 ಕಾಸರಗೋಡಿನ ನಿಶ್ಮಿತ ಮರಿಯ ಡಿಸೋಜಗೆ 579 ಅಂಕಗಳು

ಮಂಗಳೂರು,ಮೇ 25: ಕಾಸರಗೋಡಿನ ಕಯ್ಯೂರು ಗ್ರಾಮದ ಬಾಲಕಿ ಮಿಲಾಗ್ರಿಸ್ ಪಿ ಯು ಕಾಲೇಜಿನ ನಿಶ್ಚಿತ ಮರಿಯಾ ಡಿಸೋಜ ಅವರು ಪಿಯುಸಿ ವಾಣಿಜ್ಯ ವಿಭಾಗದಲ್ಲಿ 579 ಅಂಕವನ್ನು ಪಡೆದಿದ್ದು ಮುಂದೆ ಸಿ ಎ ಆಗುವ ಗುರಿಯನ್ನಿಟ್ಟುಕೊಂಡಿದ್ದಾರೆ.

 ನಿಶ್ಚಿತ ಮರಿಯಾ ಡಿಸೋಜ ಅವರು 96.5 ಶೇಕಡ ಅಂಕವನ್ನು ಪಡೆದಿದ್ದಾರೆ. ಅಕೌಂಟೆನ್ಸಿ, ಸ್ಟಾಟಿಸ್ಟಿಕ್, ಬ್ಯುಸಿನೆಟ್ ಸ್ಟಡೀಸ್ ನಲ್ಲಿ ತಲಾ 100 ಅಂಕವನ್ನು ಪಡೆದಿದ್ದು ಎಕಾನಾಮಿಕ್ಸ್‌ನಲ್ಲಿ 98 ಅಂಕವನ್ನು, ಹಿಂದಿಯಲ್ಲಿ 95 ಅಂಕವನ್ನು, ಇಂಗ್ಲೀಷ್‌ನಲ್ಲಿ 86 ಅಂಕವನ್ನು ಪಡೆದಿದ್ದಾರೆ.

ಕಯ್ಯೂರಿನಲ್ಲಿ ಕೂಲಿ ಕೆಲಸವನ್ನು ಮಾಡುವ ಬಾಪಿಸ್ಟ್ ಡಿಸೋಜ ಮತ್ತು ಐರಿನ್ ಅವರ ಪುತ್ರಿಯಾಗಿರುವ ನಿಶ್ಚಿತ ಮರಿಯ ಡಿಸೋಜ ಅವರ ವಿಧ್ಯಾಭ್ಯಾಸಕ್ಕಾಗಿ ನಗರದ ಜೆಪ್ಪುವಿನ ಹೋಲಿ ರೋಸರಿ ಹಾಸ್ಟೆಲ್ ನಲ್ಲಿ ವಾಸವಾಗಿದ್ದರು.

------------------------------------------------

ಮಂಗಳೂರು, ಮೇ 25: ಕೆ.ಎಮ್.ಇ.ಎಸ್. ಆಂಗ್ಲ ಮಾದ್ಯಮ ಪಿಯು ಕಾಲೇಜಿನ ಸುಲ್ತಾನ್ ಹಜಾಜ್ 600ರಲ್ಲಿ 545 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಇವರು ಅಬ್ದುಲ್ಲಾ ಮತ್ತು ಖೈರುನ್ನಿಸಾ ದಂಪತಿಯ ಪುತ್ರ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X