ವಿಧಾನಸಭೆಯಿಂದ ಪರಿಷತ್ತಿಗೆ ಚುನಾವಣೆ - ಪಕ್ಷೇತರ ಅಭ್ಯರ್ಥಿಯಾಗಿ ಅನಿಲ್ ಕುಮಾರ್ ನಾಮಪತ್ರ ಸಲ್ಲಿಕೆ

ಬೆಂಗಳೂರು, ಮೇ 25: ವಿಧಾನಸಭೆಯಿಂದ ಪರಿಷತ್ತಿಗೆ ಚುನಾವಣೆ - ಪಕ್ಷೇತರ ಅಭ್ಯರ್ಥಿಯಾಗಿ ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದರು.ಮಾಂಕಾಳ ವೈದ್ಯ, ಸತೀಶ ಸೈಲ್ , ಬಿ ನಾಗೇಂದ್ರ, ಅರವಿಂದ ಪಾಟೀಲ್ , ಬಿ ಆರ್ ಪಾಟೀಲ್, ಪಿ ರಾಜೀವ್, ಗುರು ಪಾಟೀಲ್ ,ಅಶೋಕ್ ಖೇಣಿ, ಸಂಬಾಜೀ ಪಾಟೀಲ್ ಈ ಪಕ್ಷೇತರ ಶಾಸಕರು ನಾಮಪತ್ರಕ್ಕೆ ಸೂಚಕರಾಗಿದ್ದಾರೆ .
ನಂತರ ಮಾತನಾಡಿದ ಅನಿಲ್ ಕುಮಾರ್ ನಾನು ಕಾಂಗ್ರೆಸ್ ನಿಂದ ಹೊರಬಂದು ಸ್ಪರ್ಧಿಸಿದ್ದೇನೆ. ಮೊದಲು ಕಾಂಗ್ರೆಸ್ ನಲ್ಲಿ ಇದ್ದೆ, ಈಗ ಇಲ್ಲ. ನನಗೆ ಪಕ್ಷೇತರ ಶಾಸಕರು ಸಹಿ ಮಾಡಿದ್ದಾರೆ. ನಾನು ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್ ನಲ್ಲಿ ಹಿರಿಯರು ಅನೇಕರಿದ್ದಾರೆ. ಹಾಗಾಗಿ ಅಲ್ಲಿ ಅವಕಾಶ ಸಿಗಲು ಸಾಧ್ಯವಿಲ್ಲ.ಈ ಹಿನ್ನೆಲೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದೇನೆ ಎಂದರು.
Next Story





