ಬೆಂಗಳೂರು : ಅಧ್ಯಾಪಕರ ಮೇಲೆ ಸೇಡು – ಹೀಗೊಂದು ಪ್ರಹಸನ

ಬೆಂಗಳೂರು,ಮೇ.25-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಡಲಾಗಿದೆ ಎಂದು ಅಧ್ಯಾಪಕರ ಹೆಸರಿನಲ್ಲಿ ಇಮೇಲ್‌ನಲ್ಲಿ ಬೆದರಿಕೆ ಹಾಕಿದ್ದ ಇಬ್ಬರು ಎಂ.ಟೆಕ್ ವಿದ್ಯಾರ್ಥಿಗಳನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಸವೇಶ್ವರನಗರದ ರಾಘವೇಂದ್ರ, ಉಲ್ಲಾಳ ಉಪನಗರದ ಹೊಯ್ಸಳ ಬಂಧಿತ ಆರೋಪಿಗಳಾಗಿದ್ದು ಇವರಿಬ್ಬರೂ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ಎಂಟೆಕ್ ವ್ಯಾಸಂಗ ಮಾಡುತ್ತಿದ್ದರು.
ಆರೋಪಿಗಳು ಕಳೆದ ಮೇ 22 ರಂದು ವಿಮಾನನಿಲ್ದಾಣದ ಅಧಿಕಾರಿಗಳಿಗೆ ಇಮೇಲ್ ಮಾಡಿ ಅಧಿಕಾರಿಗಳಿಗೆ 10 ಮಿಲಿಯನ್ ಡಾಲರ್ ಕೊಡಬೇಕು ಮೇಲ್ ಮಾಡಿರುವ ಫೋಟೋಗಳಲ್ಲಿರುವ ನಾವು ದಾವೂದ್ ಕಡೆಯವರಾಗಿದ್ದು, ಅವರನ್ನು ಬಿಡಬೇಕು. ಇಲ್ಲವಾದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿ ವಿದ್ಯಾರ್ಥಿಗಳುಮೂವರು ಅಧ್ಯಾಪಕರ ಹೆಸರು ಭಾವಚಿತ್ರ ಹಾಕಿಇ-ಮೇಲ್‌ನಲ್ಲಿ ರವಾನಿಸಿದ್ದರು.
ಅಧ್ಯಾಪಕರಾದ ಪ್ರಸನ್ನ ರಾಜು, ಧನ್ ರಾಜು ಹಾಗೂ ಚಂದನ್ ರಾಜ್ ಅವರ ಹೆಸರಿನಲ್ಲಿ ಹೊಸದಾಗಿ ಇಮೇಲ್ ಸೃಷ್ಟಿಸಿ ಕಳುಹಿಸಿದ್ದರು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಯಲಹಂಕ ಉಪನಗರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಡಾ.ಪಿ.ಎಸ್.ಹರ್ಷ ಅವರು ತಿಳಿಸಿದ್ದಾರೆ.
ಅಧ್ಯಾಪಕರು ಕಿರುಕುಳ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಪೊಲೀಸರಿಗೆ ಸಿಕ್ಕಿಸಲು ತಮ್ಮ ಅಧ್ಯಾಪಕರ ಇ-ಮೇಲ್‌ನಿಂದಲೇ ಈ ವಿದ್ಯಾರ್ಥಿಗಳು ಬೆದರಿಕೆ ಕಳುಹಿಸಿರುವುದು ವಿಚಾರಣೆಯಲ್ಲಿ ಗೊತ್ತಾಗಿದೆ ಎಂದರು.







