ಮೆಲ್ಕಾರ್ ಮಹಿಳಾ ಪದವಿಪೂರ್ವ ಕಾಲೇಜಿಗೆ ಶೇ. 96 ಫಲಿತಾಂಶ

ಮಂಗಳೂರು, ಮೇ 25: 2015-16ನೆ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು ಶೇ. 96 ಫಲಿತಾಂಶವನ್ನು ದಾಖಲಿಸಿದೆ.
ಒಟ್ಟು 146 ಮಂದಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, 140 ಮಂದಿ ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. 12 ಮಂದಿ ವಿದ್ಯಾರ್ಥಿನಿಯರು ವಿಶಿಷ್ಠ ದರ್ಜೆಯಲ್ಲಿ, 85 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದ ಫಲೀಲಾ ಸಿಮಿತ್ 551 ಅಂಕ (ಶೇ. 92), ಕಲಾ ವಿಭಾಗದಲ್ಲಿ ಇಸ್ಮತ್ ಬಾನು 535, (ಶೇ. 89.16) ಪಡೆದು ಕಾಲೇಜಿನಲ್ಲಿ ಪ್ರಥಮಸ್ಥಾನ ಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





