‘ಗುಣಮಟ್ಟದ ಕಾಮಗಾರಿ ಆವಶ್ಯಕ’
ಮೂಡಿಗೆರೆ: ತಾಪಂ ಅಧ್ಯಕ್ಷರಿಂದ ಕಾಮಗಾರಿ ಪರಿಶೀಲನೆ

ಮೂಡಿಗೆರೆ, ಮೇ 25: ಪಟ್ಟಣದ ಸಮೀಪದ ಹೆಸಗಲ್ ಗ್ರಾಪಂ ವ್ಯಾಪ್ತಿಯ ವಿವೇಕಾನಂದ ಗ್ರಾಮದಲ್ಲಿ ನಡೆಸುತ್ತಿರುವ ರಸ್ತೆ ಕಾಂಕ್ರೀಟ್ ಕಾಮಗಾರಿಯನ್ನು ತಾಪಂ ಅಧ್ಯಕ್ಷ ರತನ್ ಕುಮಾರ್ ಪರಿಶೀಲನೆ ನಡೆಸಿ ಮಾತನಾಡಿ, ವಿವೇಕಾನಂದ ಗ್ರಾಮಕ್ಕೆ 300ಮೀಟರ್ ಕಾಂಕ್ರೀಟ್ ರಸ್ತೆಯನ್ನು ಗಿರಿಜನ ಅಭಿವೃದ್ಧಿ ನಿಗಮದಿಂದ 15ಲಕ್ಷ ರೂ. ವೆಚ್ಚದಲ್ಲಿ ಮಾಡಿಸಲಾಗುತ್ತಿದೆ. ಗುಣಮಟ್ಟದ ಕಾಮಗಾರಿ ಆವಶ್ಯವಿದೆ.
ತಮ್ಮ ಅವಧಿಯಲ್ಲಿ ಯಾವುದೇ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಕಳಪೆ ಮಾಡುವುದು ಕಂಡು ಬಂದರೆ ಶೀಘ್ರವಾಗಿ ಕಾಮಗಾರಿ ನಿಲ್ಲಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಲ್ಲದೆ ಬಹುತೇಕ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ಮಾಡಿ ಬದಿಯಲ್ಲಿ ಮಣ್ಣು ಮುಚ್ಚದೇ ಹಾಗೆ ಬಿಡುವುದು ಗಮನಕ್ಕೆ ಬರುತ್ತಿದೆ. ಆದ್ದರಿಂದ ಯಾವುದೇ ಕಾಂಕ್ರೀಟ್ ರಸ್ತೆ ಮಾಡಿದ ಬಳಿಕ ರಸ್ತೆ ಬದಿಯಲ್ಲಿ ಮಣ್ಣು ಮುಚ್ಚಿ ಸಮಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
Next Story





