ಜಿಶಾ ಪ್ರಕರಣ ತನಿಖೆ ನೇತೃತ್ವ ಎಡಿಜಿಪಿ ಸಂಧ್ಯಾರಿಗೆ, ಜಿಶಾ ತಾಯಿಗೆ ಪ್ರತಿ ತಿಂಗಳು 5,000ರೂ. ಮಾಸಾಶನ
ಪಿಣರಾಯಿ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ

ತಿರುವನಂತಪುರಂ,ಮೇ 25: ಜಿಶಾ ಕೊಲೆಪ್ರಕರಣದ ತನಿಖೆಯನ್ನು ವಿಶೇಷ ತಂಡಕ್ಕೆ ವಹಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಸಚಿವಸಂಪುಟ ನಿರ್ಧರಿಸಿದೆ. ಎಡಿಜಿಪಿ ಬಿ.ಸಂಧ್ಯಾರ ನೇತೃತ್ವದಲ್ಲಿ ವಿಶೇಷ ತಂಡ ಈ ಪ್ರಕರಣದ ತನಿಖೆಯನ್ನು ನಡೆಸಲಿದೆ. ಪ್ರಕರಣದ ತನಿಖೆಯಲ್ಲಿ ಗಂಭೀರವಾದ ನಿರ್ಲಕ್ಷ್ಯ ಆಗಿದೆ ಆದ್ದರಿಂದ ತನಿಖೆಯ ಹೊಣೆಯನ್ನು ಹೊಸ ತಂಡಕ್ಕೆ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ತನಿಖೆಯಲ್ಲಿ ನಿರ್ಲಕ್ಷ್ಯತೋರಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಕುರಿತು ನಂತರ ತೀರ್ಮಾನಿಸಲಾಗುವುದು ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಜಿಶಾರ ಮನೆ ನಿರ್ಮಾಣ 45 ದಿನಗಳೊಳಗೆ ಸಂಪೂರ್ಣ ಆಗಲಿದೆ. ಅದರ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಿಕೊಡಲಾಗಿದೆ. ಜಿಶಾರ ಸಹೋದರಿಗೆ ಕೂಡಲೇ ಉದ್ಯೋಗ ನೀಡುವ ಕುರಿತು ಕ್ರಮ ಅನುಸರಿಸಲಾಗುವುದು. ಜಿಶಾರ ತಾಯಿಗೆ ಪ್ರತಿ ತಿಂಗಳು ಐದು ಸಾವಿರ ರೂಪಾಯಿ ಪೆನ್ಶನ್ ನೀಡಲಾಗುವುದು ಎಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಪಂಚವಾರ್ಷಿಕ ಯೋಜನೆಯನ್ನು ಮರಳಿತರಲಾಗುವುದು. ಪ್ಲಾನಿಂಗ್ ಬೋರ್ಡ್ ಅಸ್ತಿತ್ವಕ್ಕೆ ತರಲಾಗುವುದು. ನಿತ್ಯಬಳಕೆಯ ವಸ್ತುಗಳ ಬೆಲೆ ನಿಯಂತ್ರಿಸಲು ತುರ್ತು ಕ್ರಮಕೈಗೊಳ್ಳಲಾಗುವುದು. ಇದಕ್ಕಾಗಿ 75ಕೋಟಿರೂಪಾಯಿಯನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗುವುದು. ಕ್ಷೇಮ ಪೆನ್ಶನ್ ಕೊಟ್ಟು ತೀರಿಸಲಾಗುವುದು. ಇದನ್ನು 1000ರೂಪಾಯಿಗೇರಿಸಲು ತೀರ್ಮಾನಿಸಲಾಗಿದೆ. ಇದನ್ನು ಬಜೆಟ್‌ನಲ್ಲಿ ಅಳವಡಿಸಿಕೊಳ್ಳಲಾಗುವುದು. ಕ್ಷೇಮ ಪೆನ್ಶನ್‌ನ್ನು ಮನೆಗಳಿಗೇ ತಲುಪಿಸಿ ಕೊಡಲು ಯಾವ ರೀತಿಯನ್ನು ಅಳವಡಿಸಿಕೊಳ್ಳಬಹುದೆಂದು ಮುಖ್ಯಕಾರ್ಯದರ್ಶಿಯಲ್ಲಿ ಮಾಹಿತಿ ಕೇಳಲಾಗಿದೆ.
ಕೇರಳದಲ್ಲಿ ಅಘೋಷಿತ ನೇಮಕಾತಿಯನ್ನು ನಿಷೇಧವಿದೆ ಎಂದು ದೂರುಗಳಿವೆ. ಖಾಲಿ ಹುದ್ದೆಗಳನ್ನು ತಿಳಿಸಲು ಹತ್ತು ದಿವಸಗಳ ಸಮಯ ಮಿತಿ ನೀಡಲಾಗಿದೆ. ಎಲ್ಲಾ ಖಾತೆಗಳಲ್ಲಿರುವ ಖಾಲಿ ಹುದ್ದೆಗಳ ಬಗ್ಗೆ ಈ ತಿಂಗಳೊಳಗೆ ವರದಿ ಮಾಡಬೇಕು. ಕೆಲವು ಖಾತೆಗಳಲ್ಲಿ ಪಿಎಸ್‌ಸಿ ಪಟ್ಟಿ ತಯಾರಿಸುವುದಿಲ್ಲ. ಈ ಸ್ಥಾನಗಳಲ್ಲಿ ಎಷ್ಟು ಖಾಲಿ ಹುದ್ದೆಗಳಿವೆ ಎಂದು ತಿಳಿದು ಸರಿಪಡಿಸಲಾಗುವುದು. ಇದರ ಕುರಿತು ಪ್ರಾಯೋಗಿಕ ಸಮಸ್ಯೆಗಳನ್ನು ಪಿಎಸ್‌ಸಿಯೊಂದಿಗೆ ಚರ್ಚಿಸಲಾಗುವುದು ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಯುಡಿಎಫ್ ಸರಕಾರ ಜನವರಿ ಒಂದರ ನಂತರ ಕಾನೂನು ಬಾಹಿರವಾಗಿ ಕೈಗೊಂಡ ನಿರ್ಧಾರಗಳನ್ನು ಪರಿಶೀಲಿಸಲು ಎಕೆ ಬಾಲನ್ ಕನ್ವೀನರ್ ಆಗಿರುವ ಸಚಿವ ಸಂಪುಟದ ಉಪಸಮಿತಿಗೆ ವಹಿಸಿಕೊಡಲಾಗಿದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.







